೧. ಬ್ರಿಟನ್ ಇದು ಆಯುರ್ವೇದಕ್ಕನುಸಾರ ‘ಆನುಪ್‌ದೇಶ’ವಾಗಿದೆ. ಅಂತಹ ಸ್ಥಳದಲ್ಲಿ ಹೆಚ್ಚಾಗಿ ಕಫದ ಪ್ರಭಾವ ಕಂಡು ಬರುತ್ತದೆ. ಸಾಮಾನ್ಯವಾಗಿ ಕಫಕ್ಕೆ ಸಂಬಂಧಿಸಿದ ರೋಗಗಳು ಪ್ರಬಲವಾಗುತ್ತವೆ. (ನಮ್ಮಲ್ಲಿ ಗೋವಾ, ಕೇರಳ, ಬಂಗಾಲ ಇವು ಆನುಪ್ ದೇಶಗಳ ಕೆಲವು ಉದಾಹರಣೆಗಳಾಗಿವೆ.)
೨. ಜೀವನಶೈಲಿ ಮತ್ತು ಆಹಾರ-ಪಾನೀಯಗಳಂತಹ ಮಹತ್ವದ ಅಂಶಗಳನ್ನು ನಿರ್ಲಕ್ಷಿಸುವಂತಿಲ್ಲ.
೩. ಕೊರೋನಾ ಅವಧಿಯಲ್ಲಿ ಪಾಶ್ಚಾತ್ಯರ ವೈದ್ಯಕೀಯ ಔಷಧಿಗಳನ್ನೇ ಅವಲಂಬಿಸಿರುವ ಎಲ್ಲ ಮುಂದುವರಿದ ದೇಶಗಳಿಗೆ ಗಂಡಾಂತರವನ್ನುಂಟು ಮಾಡಿದೆ ಎಂಬುದಕ್ಕೆ ಇದು ಉದಾಹರಣೆ ಎನ್ನಬಹುದು.
೪. ಇದು ಹೊಸ ‘ಸ್ಟ್ರೇನ್’ ಅಲ್ಲವಾಗಿದ್ದು ಆಗಸ್ಟ್‌ದಲ್ಲಿಯೇ ಅಸ್ತಿತ್ವಕ್ಕೆ ಬಂದಿರುವ ಸ್ಟ್ರೇನ್ ಆಗಿದೆ. ಅದು ಈಗ ತಲೆ ಎತ್ತಲು ಅದಕ್ಕೆ ಅನುಕೂಲವಾದ ವಾತಾವರಣದ ಸಾಧ್ಯತೆ ಹೆಚ್ಚಿದೆ.
೫. ‘ನೋಡಿ ಅಲ್ಲಿ (ಬ್ರಿಟನ್‌ನಲ್ಲಿ) ಪುನಃ ಸಂಚಾರನಿಷೇಧವನ್ನು ಜಾರಿಗೆ ತರಬೇಕಾಯಿತು’ ಎಂಬ ವಾಕ್ಯಗಳು ಲಸಿಕೀಕರಣದ ಮಾರ್ಕೇಟಿಂಗ್‌ಗಾಗಿ ಉತ್ತಮವಾಗಿದೆ. ಅದರಿಂದ ನಾವು ಗಾಬರಿಗೊಳ್ಳುವ ಆವಶ್ಯಕತೆ ಇಲ್ಲ.
೬. ನಾವು ಎಂದಿನಂತೆಯೇ ನಿಯಮಿತವಾಗಿ ವ್ಯಾಯಾಮ, ಮಧ್ಯಾಹ್ನ ಮಲಗದಿರುವುದು, ಕಫವನ್ನು ಹೆಚ್ಚಿಸುವಂತಹ ಆಹಾರಗಳನ್ನು ತಿನ್ನದಿರುವುದು ಅಥವಾ ತುಸು ಕಡಿಮೆ ತಿನ್ನುವುದು, ಅಗತ್ಯವೆನಿಸಿದಾಗ ಸಮಯ ಕಳೆಯದೇ ಹತ್ತಿರದ ವೈದ್ಯರನ್ನು ಭೇಟಿಯಾಗುವುದು ಈ ಮಾರ್ಗದಲ್ಲಿ ಮುಂದುವರಿಯೋಣ !
– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ.