ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿಯಾದರೂ, ಎರಡೂ ಸ್ತರದಲ್ಲಿ ನಾವು ಸಿದ್ಧರಿದ್ದೇವೆ ! – ಸೇನಾ ಮುಖ್ಯಸ್ಥ ಮನೋಜ್ ನರವಣೆ

ಸೇನಾ ಮುಖ್ಯಸ್ಥ ಮನೋಜ್ ನರವಣೆ

ನವದೆಹಲಿ – ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ; ಆದರೆ ನಾವು ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನಮ್ಮ ನಿಲುವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಉತ್ತರಿಸಲಾಗುವುದು. ‘ಅದಕ್ಕಾಗಿ ನಾವು ಸಮಯ ಮತ್ತು ಸ್ಥಳವನ್ನು ಸಹ ನಿರ್ಧರಿಸುತ್ತೇವೆ’ ಈ ಸಂದೇಶವನ್ನು ನಮ್ಮ ಕಡೆಯಿಂದ ಗಡಿಯಾಚೆಗಿನ ದೇಶಕ್ಕೆ ನೀಡಿದ್ದೇವೆ, ಎಂದು ಸೇನಾ ಮುಖ್ಯಸ್ಥ ಮನೋಜ್ ನರವಣೆಯವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ‘ಸೈನ್ಯ ಮತ್ತು ಸೈನ್ಯ ರಹಿತ ಕ್ಷೇತ್ರಗಳಲ್ಲಿ ಚೀನಾ ಮತ್ತು ಪಾಕಿಸ್ತಾನಗಳ ಕಾರ್ಯ ಹೆಚ್ಚಾಗುತ್ತಿದೆ. ಆದ್ದರಿಂದ ನಾವು ಎರಡು ಕಡೆಗಳಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು,’ ಎಂದು ಜನರಲ್ ನರವಣೆ ಹೇಳಿದರು.


(ಸೌಜನ್ಯ : ABP NEWS)

 

ಸೇನಾ ಮುಖ್ಯಸ್ಥ ನರವಣೆ ಮಂಡಿಸಿದ ಸೂತ್ರಗಳು

೧. ನಾವು ಈ ಮೊದಲು ಸವಾಲುಗಳನ್ನು ಎದುರಿಸಿದ್ದೇವೆ. ಭಾರತೀಯ ಸೇನೆಯು ಲಡಾಕ್‌ನಲ್ಲಿ ಮಾತ್ರವಲ್ಲದೆ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲೂ (ಎಲ್ಎಸಿ) ಗಸ್ತು ಹೆಚ್ಚಿಸಿದೆ. ಭಾರತ ಮತ್ತು ಚೀನಾಗಳ ನಡುವೆ ಕಮಾಂಡರ್ ಮಟ್ಟದಲ್ಲಿ ಎಂಟು ಸಭೆಗಳನ್ನು ನಡೆದಿವೆ. ೯ ನೇ ಸಭೆ ಶೀಘ್ರದಲ್ಲೇ ನಡೆಯಲಿದೆ.

೨. ಗಡಿಯಲ್ಲಿ ನಾವು ಶಾಂತಿಯನ್ನು ನಿರೀಕ್ಷಿಸುತ್ತೇವೆ; ಆದರೆ ಗಡಿಯಲ್ಲಿ ಯಾವುದೇ ರೀತಿಯ ಅನುಚಿತತೆ ಘಟನೆ ಸಂಭವಿಸಿದಲ್ಲಿ ನಾವು ಅದಕ್ಕಾಗಿ ಪ್ರತ್ಯುತ್ತರ ನೀಡಲು ಸಂಪೂರ್ಣವಾಗಿ ಸಿದ್ಧರಿದ್ದೇವೆ.

೩. ಭವಿಷ್ಯದ ಸವಾಲುಗಳನ್ನು ಪರಿಗಣಿಸಿ ಸೈನ್ಯವನ್ನು ಹೆಚ್ಚೆಚ್ಚು ಸಜ್ಜುಗೊಳಿಸಲಾಗುವುದು. ಇದಕ್ಕಾಗಿ ತಂತ್ರಜ್ಞಾನದ ಸಹಾಯವನ್ನು ಪಡೆಯಲಾಗುವುದು ಎಂದು ಹೇಳಿದರು.