ನಿಸರ್ಗದ ಸರ್ವನಾಶದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಸ್ವಾತಂತ್ರ್ಯ ಲಭಿಸಿದ ಕೇವಲ ೨ ಪೀಳಿಗೆಗಳಲ್ಲಿ ಭಾರತದ ನಿಸರ್ಗವನ್ನು ವಿನಾಶದತ್ತ ಒಯ್ದು ಮುಂದಿನ ಅನೇಕ ಪೀಳಿಗೆಗಳ ಜೀವನವನ್ನು ಧ್ವಂಸ ಗೊಳಿಸುವ ಸ್ವಾರ್ಥಿ ರಾಜಕಾರಣಿಗಳು !

ಗಿಡ ಮರಗಳು, ಪಶು ಪಕ್ಷಿಗಳು ಮತ್ತು ಮಾನವರಂತಹ ಸಜೀವ ಘಟಕ ಹಾಗೂ ಗಾಳಿ, ನೀರು (ನದಿ, ಕೆರೆ ಮುಂತಾದವುಗಳಲ್ಲಿ) ಮತ್ತು ಭೂಮಿಯಂತಹ ನಿರ್ಜೀವ ಘಟಕಗಳಿಂದ ಪರಿಸರ ಅಥವಾ ನಿಸರ್ಗವು ತುಂಬಿದೆ. ಪರಿಸರದ ಪ್ರತಿಯೊಂದು ಘಟಕಕ್ಕೆ ದೇವರ ಸ್ಥಾನವನ್ನು ನೀಡಿ ಅದನ್ನು ಪೂಜಿಸುವ ಹಿಂದೂ ಸಂಸ್ಕೃತಿಯಿಂದ ಅದು ಲಕ್ಷಾಂತರ ವರ್ಷಗಳ ಕಾಲ ಸುರಕ್ಷಿತವಾಗಿತ್ತು; ಆದರೆ ಸ್ವಾತಂತ್ರ್ಯ ಬಂದ ನಂತರದ ‘ಜಾತ್ಯಾತೀತ ಭಾರತದಲ್ಲಿ ಅದು ವೇಗವಾಗಿ ವಿನಾಶದ ಅಂಚಿನತ್ತ ಸಾಗುತ್ತಿದೆ. ಅದರ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

೧. ಅರಣ್ಯನಾಶ (ಭೂಮಿ ಮತ್ತು ವಾಯುಮಾಲಿನ್ಯದ ಕಾರಣ)

ಹಿಂದೊಮ್ಮೆ ಭಾರತದಲ್ಲಿ ಎಲ್ಲೆಡೆ ಅರಣ್ಯಗಳ ಹಸಿರು ಹೊದಿಕೆಯಿತ್ತು, ಆದರೆ ಕಟ್ಟಿಗೆಯ ವ್ಯಾಮೋಹದಿಂದ ರಾಜಕಾರಣಿಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಮಾಡಿದ್ದಾರೆಂದರೆ ಇಂದು ದೇಶಕ್ಕೆ ದೇಶವೇ ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತಿದೆ. ಮರಗಳಿದ್ದರೆ ಗಾಳಿಯು ಶುದ್ಧವಾಗುತ್ತದೆ. ಮರಗಳಿಲ್ಲದಿದ್ದರೆ, ಆ ದೂಷಿತ ಗಾಳಿಯನ್ನೇ ನಾವು ಸೇವಿಸಬೇಕಾಗುತ್ತಿದೆ. ಮರಗಳಿಂದ ಪೃಥ್ವಿಯ ಹವಾಮಾನವು ತಂಪಾಗಿರುತ್ತಿತ್ತು. ಆದರೆ ಇಂದು ಮರಗಳಿಲ್ಲದೆ ‘ಗ್ಲೋಬಲ್ ವಾರ್ಮಿಂಗ್ ಎಂಬ ಸಂಕಟ ಎದುರಾಗಿದೆ. ಅರಣ್ಯ ನಾಶದಿಂದ ಮಣ್ಣಿನ ಸವೆತದ ಸಮಸ್ಯೆಯು ಉದ್ಭವಿಸಿದೆ.

೨. ನದಿಗಳ ನಾಶ

ಭಾರತ ಪ್ರತಿಯೊಂದು ನದಿಯಲ್ಲಿಯೂ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವನ್ನು ಬಿಡಲಾಗುತ್ತದೆ, ನಗರಗಳ ತ್ಯಾಜ್ಯ ಬಿಡಲಾಗುತ್ತದೆ ಆದುದರಿಂದ ನದಿಗಳು ಇಂದು ಕಲುಷಿತಗೊಂಡಿವೆ. ಇದರಿಂದ ಶುದ್ಧ ನೀರು ಸಹ ಸುಲಭವಾಗಿ ಸಿಗದಂತಾಗಿದೆ.

೩. ಭೂಮಿಯ ನಾಶ

೩ ಅ. ಭೂಮಿಯು ಬರಡಾಗುವುದು 

ರಾಜಕಾರಣಿಗಳು ರಾಸಾಯನಿಕ ಗೊಬ್ಬರಕ್ಕೆ ಪ್ರೋತ್ಸಾಹ ನೀಡಿರುವುದರಿಂದ ಕೃಷಿಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ಗೆ ಪ್ರೋತ್ಸಾಹ ಸಿಕ್ಕಿರುವುದರಿಂದ ಎಲ್ಲೆಡೆ ಮಾಲಿನ್ಯವು ಹೆಚ್ಚಿದೆ. ಪ್ಲಾಸ್ಟಿಕ್‌ನ ಒಂದು ಸಾಮಾನ್ಯ ತೊಟ್ಟೆಯ ವಿಘಟನೆಯಾಗಲು ೧೦೦ ಕ್ಕಿಂತಲೂ ಹೆಚ್ಚು ವರ್ಷಗಳು ಬೇಕಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ರಾಸಾಯನಿಕಗಳು ಅದರಿಂದ ಹೊರಸೂಸಿ ಭೂಮಿಯನ್ನು ಸೇರುತ್ತವೆ. ಇದರಿಂದಾಗಿ ಆ ಪ್ರದೇಶ ಬರಡಾಗುತ್ತದೆ.

೩ ಆ. ಖನಿಜ ಸಂಪನ್ಮೂಲಗಳು ನಾಶದತ್ತ

ಕೊಲ್ಲಿ ದೇಶಗಳ ತೈಲ ಹೇಗೆ ಮುಂದೊಂದು ದಿನ ವಿರಳವಾಗಲಿದೆಯೋ ಅದೇ ರೀತಿ ಭಾರತದ ಖನಿಜ ಸಂಪನ್ಮೂಲಗಳು ಕೂಡ ಸೀಮಿತವಾಗಿವೆ ಎಂದು ಗಮನದಲ್ಲಿಟ್ಟು ಅವುಗಳ ಸದುಪಯೋಗದ ಆಯೋಜನೆ ಮಾಡದಿದ್ದರೆ ಅವುಗಳು ಬಹುಬೇಗನೆ ಮುಗಿಯಲಿವೆ.

೪. ಗೋಧನದ ನಾಶ

೧೯೪೭ ರಲ್ಲಿ ಭಾರತದಲ್ಲಿ ೯೦ ಕೋಟಿಗಿಂತಲೂ ಹೆಚ್ಚು ಇದ್ದ ದೇಶಿಯ ಗೋವುಗಳ ಸಂಖ್ಯೆ ಈಗ ಒಂದು ಕೋಟಿಗಿಂತಲೂ ಕಡಿಮೆಯಾಗಿದೆ.

೫. ಪಕ್ಷಿಗಳ ನಾಶ

ಮನೆಮನೆಯಲ್ಲಿ ಇರುವ ಮೊಬೈಲ್‌ಗಳಿಗೆ ಸಂಪರ್ಕ ನೀಡಲು ಅಲ್ಲಲ್ಲಿ ನಿರ್ಮಿಸಿರುವ ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಗಳಿಂದ ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಜಗತ್ತಿನ ತುಲನೆಯಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ನೋಡಲು ಸಿಗುತ್ತಿದ್ದ ಗುಬ್ಬಚ್ಚಿಗಳು ಇಂದು ವಿನಾಶದಂಚಿಗೆ ತಲುಪಿವೆ. ಮಾನವನ ಈ ವಿನಾಶಕಾರಿ ಕಾರ್ಯಗಳಿಂದ ಮುಂಬರಲಿರುವ ಸರ್ವನಾಶವು ತಡೆಯಬೇಕಾದರೆ, ಅದಕ್ಕೆ ‘ಹಿಂದೂ ರಾಷ್ಟ್ರದ ಸ್ಥಾಪನೆ ಒಂದೇ ಪರ್ಯಾಯ ! – (ಪರಾತ್ಪರ ಗುರು) ಡಾ. ಆಠವಲೆ