ಜರಾಸಂಧನು ಭಗವಾನ ಶ್ರೀಕೃಷ್ಣನನ್ನು ಸೋಲಿಸಿದನೆಂಬ ತಪ್ಪು ಇತಿಹಾಸ ಕಲಿಸುತ್ತಿರುವ ಗೋರಖಪುರ (ಉತ್ತರಪ್ರದೇಶ)ದ ಒಂದು ಶಾಲೆ !

ಇತಿಹಾಸಕಾರರಿಂದ ವಿರೋಧ !

ತಪ್ಪು ಇತಿಹಾಸವನ್ನು ಕಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು !

ಗೋರಖಪುರ (ಉತ್ತರ ಪ್ರದೇಶ) – ಇಲ್ಲಿನ ಸೆಂಟ್ರಲ್ ಸ್ಕೂಲನಲ್ಲಿ ೭ ನೇ ತರಗತಿ ವಿದ್ಯಾರ್ಥಿಗಳಿಗೆ ‘ಬಾಲ ಮಹಾಭಾರತ ಕಥಾ’ ಎಂಬ ಮಹಾಭಾರತದ ಬಗ್ಗೆ ತಪ್ಪುತಪ್ಪು ವಿಷಯವನ್ನು ಎನ್.ಸಿ.ಆರ್.ಟಿ. ಪುಸ್ತಕದ ಮೂಲಕ ಕಲಿಸಲಾಗುತ್ತಿದೆ. ಅದರಲ್ಲಿ ‘ಜರಾಸಂಧನು ಶ್ರೀಕೃಷ್ಣನನ್ನು ಸೋಲಿಸಿದನು ಹಾಗಾಗಿ ಅವರಿಗೆ ಮಥುರಾವನ್ನು ಬಿಟ್ಟು ದ್ವಾರಕೆಗೆ ಹೋಗಬೇಕಾಯಿತು’ ಎಂದು ಬರೆಯಲಾಗಿದೆ. ಇದಕ್ಕೆ ಗೀತಾ ಪ್ರೆಸ್ ಮತ್ತು ಗೋರಖಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆಕ್ಷೇಪಿಸಿದ್ದಾರೆ ಮತ್ತು ‘ಮಹಾಭಾರತದಲ್ಲಿ ಎಲ್ಲಿಯೂ ಈ ರೀತಿಯ ಉಲ್ಲೇಖವಿಲ್ಲ,’ ಎಂದು ಹೇಳಿದ್ದಾರೆ.

(ಸೌಜನ್ಯ : ನವಭಾರತ್ ಟೈಮ್ಸ್)

೧. ‘ಬಾಲ ಮಹಾಭಾರತ ಕಥಾ’ ಪುಸ್ತಕವನ್ನು ಚಕ್ರವರ್ತಿ ರಾಜಗೋಪಾಲಾಚಾರಿ ಇವರು ಬರೆದಿದ್ದಾರೆ. ಇದರಲ್ಲಿ ಯುಧಿಷ್ಠಿರ ಮತ್ತು ಶ್ರೀಕೃಷ್ಣನ ನಡುವಿನ ಚರ್ಚೆಯನ್ನು ಉಲ್ಲೇಖಿಸಲಾಗಿದೆ. ರಾಜಸೂಯ ಯಜ್ಞದ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮನೊಂದಿಗೆ ಯುಧಿಷ್ಠಿರನು ವಿಚಾರ ವಿಮರ್ಶೆ ಮಾಡುತ್ತಿರುತ್ತಾನೆ. ಪುಸ್ತಕದ ೩೩ ನೇ ಪುಟದ ೧೪ ನೇ ಅಧ್ಯಾಯದಲ್ಲಿ ಶ್ರೀಕೃಷ್ಣನು ಹೇಳುತ್ತಾನೆ, ‘ಮಗಧ ರಾಜನಾದ ಜರಸಂಧನು ಈ ಯಜ್ಞದಲ್ಲಿ ದೊಡ್ಡ ಸಮಸ್ಯೆಯಾಗಿದ್ದಾನೆ. ಅವನನ್ನು ಸೋಲಿಸದೆ ಯಜ್ಞವನ್ನು ಮಾಡುವುದು ಅಸಾಧ್ಯ. ನಾವು ೩ ವರ್ಷಗಳಿಂದ ಅವನೊಂದಿಗೆ ಹೋರಾಡುತ್ತಿದ್ದೇವೆ ಮತ್ತು ನಾವು ಸೋಲುತ್ತಿದ್ದೇವೆ. ಪಟ್ಟಣ ಮತ್ತು ಕೋಟೆಯನ್ನು ನಿರ್ಮಿಸಲು ನಾವು ಮಥುರಾವನ್ನು ಬಿಟ್ಟು ಪಶ್ಚಿಮಕ್ಕೆ ದ್ವಾರಕಾಗೆ ಹೋಗಬೇಕಾಗಲಿದೆ.’

೨. ‘ದೀನದಯಾಲ ಉಪಾಧ್ಯಾಯ ಗೋರಖಪುರ ವಿಶ್ವವಿದ್ಯಾಲಯದ’ ಪ್ರಾಚೀನ ಇತಿಹಾಸದ ಪ್ರಾಧ್ಯಾಪಕರಾದ ರಾಜವಂತ ರಾವ ಇವರು, ಇಂತಹ ಸುಳ್ಳು ಮಾಹಿತಿಯನ್ನು ಯಾವುದೇ ಎನ್‌ಸಿಆರ್‌ಟಿ ಪಠ್ಯಪುಸ್ತಕಗಳಲ್ಲಿ ಅಥವಾ ಇನ್ನಾವುದೇ ಪಠ್ಯಪುಸ್ತಕದಲ್ಲಿ ಬಳಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಮಹಾಭಾರತದಲ್ಲಿ ಎಲ್ಲಿಯೂ ಜರಾಸಂಧನು ಕೃಷ್ಣನನ್ನು ಸೋಲಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹರಿವಂಶ ಪುರಾಣದಲ್ಲಿ ಅಥವಾ ಬೇರೆ ಎಲ್ಲಿಯೂ ಇಂತಹ ಮಾಹಿತಿ ಕಂಡುಬಂದಿಲ್ಲ. ಶ್ರೀಕೃಷ್ಣನು ಕೊನೆಯವರೆಗೂ ಶಾಂತಿಗಾಗಿ ಶ್ರಮಿಸುತ್ತಿದ್ದನೆಂಬ ಮಾಹಿತಿಯಿದೆ.

೩. ಯಾವುದೇ ಆಯುಧದಿಂದ ಆತನ ಮೃತ್ಯು ಆಗುವುದಿಲ್ಲ ಎಂಬ ವರದಾನವು ಜರಾಸಂಧನಿಗೆ ದೊರಕಿದ ಬಗ್ಗೆ ಶ್ರೀಕೃಷ್ಣನಿಗೆ ತಿಳಿದಿತ್ತು. ಆದ್ದರಿಂದ ಶ್ರೀಕೃಷ್ಣನು ದ್ವಾರಕಾವನ್ನು ನಿರ್ಮಿಸಿದನು. ಪರಿಣಾಮವಾಗಿ ಮಥುರಾದ ಜನರು ಶಾಂತಿಯಿಂದ ಬದುಕಲು ಸಾಧ್ಯವಾಯಿತು. ನಂತರ ಭಗವಾನ ಶ್ರೀಕೃಷ್ಣನು ಭೀಮನ ಕೈಯಿಂದ ಜರಾಸಂಧನ ವಧೆ ಮಾಡಿಸಿದನು

ಗೀತಾ ಪ್ರೆಸ್‌ನ ವ್ಯವಸ್ಥಾಪಕ ಲಾಲಮಣಿ ತಿವಾರಿಯವರು ಇದರ ಬಗ್ಗೆ ಮುಂದಿನಂತೆ ಹೇಳಿದ್ದಾರೆ. ಭಗವಾನ್ ಕೃಷ್ಣನು ಕಂಸನನ್ನು ಕೊಂದಿದ್ದರಿಂದ ಅವನ ಸಂಬಂಧಿ ಜರಾಸಂಧನು ಮಥುರಾದ ಮೇಲೆ ನಿರಂತರವಾಗಿ ದಾಳಿ ಮಾಡಲು ಪ್ರಾರಂಭಿಸಿದನು. ಪ್ರತಿ ಬಾರಿಯೂ ಜರಾಸಂಧನನ್ನು ಶ್ರೀಕೃಷ್ಣನು ಸೋಲಿಸಿದ್ದನು. ಇದು ೧೬ ಬಾರಿ ನಡೆದಿದೆ. ಜರಸಂಧನ ಮೃತ್ಯುವು ಶ್ರೀಕೃಷ್ಣನ ಕೈಯಲ್ಲಿಲ್ಲದ ಕಾರಣ ಮತ್ತು ಜರಾಸಂಧನ ಆಕ್ರಮಣದಿಂದ ಮಥುರಾದಲ್ಲಿ ಅನೇಕ ಜನರು ಸಾಯುತ್ತಿರುವುದರಿಂದ ಕೃಷ್ಣನು ದ್ವಾರಕಾಗೆ ಹೋಗಲು ನಿರ್ಧರಿಸಿದನು.