ರಾಷ್ಟ್ರೀಯ ಕಾಮಧೇನು ಆಯೋಗ, ಯು.ಜಿ.ಸಿ., ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ ಮುಂತಾದ ವಿಭಾಗಗಳಿಂದ ವೆಬಿನಾರ್‌ಗಳ ಆಯೋಜನೆ !

ವಿಶ್ವವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ದೇಸಿಹಸುಗಳ ಪಾಲನೆಯ ಮಹತ್ವವನ್ನು ಕಲಿಸುವ ಕುರಿತು ವೆಬಿನಾರ್‌ನಲ್ಲಿ ಚರ್ಚೆ !

ಗೋಪಾಲನೆಯ ಕುರಿತು ಚರ್ಚೆ ಅಪೇಕ್ಷಿತವಿಲ್ಲ, ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದೇ ರಾಷ್ಟ್ರಪ್ರೇಮಿಗಳ ಆಶಯವಿದೆ !

ನವ ದೆಹಲಿ – ಇತ್ತೀಚೆಗೆ ರಾಷ್ಟ್ರೀಯ ಕಾಮಧೇನು ಆಯೋಗ, ಯು.ಜಿ.ಸಿ., ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ ಮುಂತಾದ ವಿಭಾಗಗಳಿಂದ ಒಂದು ವೆಬಿನಾರ್‌ನಲ್ಲಿ ಹಸುಗಳನ್ನು ಸಾಕುವ ಬಗ್ಗೆ ಚರ್ಚಿಸಲಾಯಿತು. ಈ ವೆಬಿನಾರ್‌ನಲ್ಲಿ ಕೇಂದ್ರೀಯ ಶಿಕ್ಷಣ ರಾಜ್ಯಮಂತ್ರಿ ಸಂಜಯ ಧೋತ್ರೆ ಉಪಸ್ಥಿತರಿದ್ದರು. ಹಸುಗಳನ್ನು ಸಾಕುವುದರಿಂದಾಗುವ ಲಾಭಗಳು ಹಾಗ್ತೂ ಅದರಿಂದ ಪರಿಸರ, ಸಮಾಜ ಮತ್ತು ಆರೋಗ್ಯದ ಮೇಲೆ ಅದರ ಸಕಾರಾತ್ಮಕ ಪರಿಣಾಮವನ್ನು ಪರಿಗಣಿಸಿದರೆ, ದೇಶದ ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ಕಾಮಧೇನು ಪೀಠವನ್ನು ಸ್ಥಾಪಿಸಬಹುದು. ಅದೇರೀತಿ ಬಿ.ಟೆಕ್ ಹಾಗೂ ಎಮ್.ಬಿಎ ಕಲಿಯುವ ವಿದ್ಯಾರ್ಥಿಗಳಿಗೂ ಹಸುಗಳನ್ನು ಸಾಕುವ ಬಗ್ಗೆ ಕಲಿಸಬಹುದು.

೧. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಬಾಯಿ ಕಥೀರಿಯಾ ಇವರು ಈ ವೆಬಿನಾರ್‌ನಲ್ಲಿ, ಹಸುಗಳ ಆರೋಗ್ಯ, ಸಾಮಾಜಿಕ ಮತ್ತು ಪರಿಸರ ಪ್ರಾಮುಖ್ಯತೆಯ ಬಗ್ಗೆ ನಾವು ಯುವಕರಿಗೆ ಅರಿವು ಮೂಡಿಸುವ ಅಗತ್ಯವಿದೆ. ಸರಕಾರವು ಈಗ ಹಸುಗಳ ಮತ್ತು ಪಂಚಗವ್ಯಗಳ ಕ್ಷಮತೆಯನ್ನು ಕಂಡುಹಿಡಿಯಲು ಪ್ರಾರಂಭಿಸಿದೆ. ಇದಕ್ಕಾಗಿಯೇ ನಮ್ಮ ಶಿಕ್ಷಣದಲ್ಲಿ ಈ ವಿಷಯವನ್ನು ಕಲಿಸುವುದು ಮುಖ್ಯವಾಗಿದೆ. ಅದರ ಬಗ್ಗೆಯೂ ಸಂಶೋಧನೆ ನಡೆಸಬೇಕು ಎಂದು ಹೇಳಿದರು.

೨. ಸಂಜಯ ಧೋತ್ರೆಯವರು, ಹಸುಗಳಿಂದಾಗಿ ನಮ್ಮ ಸಮಾಜವು ಸಮೃದ್ಧಿಯಾಗಿತ್ತು; ಆದರೆ ವಿದೇಶಿ ಆಡಳಿತಗಾರರಿಂದಾಗಿ ನಾವು ಅದನ್ನು ಮರೆತಿದ್ದೇವೆ. ಈಗ ಅದನ್ನು ಪುನಃ ಜಾಗೃತಗೊಳಿಸುವ ಸಮಯ ಬಂದಿದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿ ಹಸುಗಳ ಬಗ್ಗೆ ಕಲಿಸಲು ಪ್ರಾರಂಭಿಸಿದಾಗ, ಇತರರು ಇದನ್ನು ಅನುಸರಿಸುವರು.