ಬರ್ಲಿನ್‌ನಲ್ಲಿ (ಜರ್ಮನಿ) ೧೧ ವರ್ಷದ ಮತಾಂಧ ವಿದ್ಯಾರ್ಥಿಯಿಂದ ಶಿಕ್ಷಕನ ಕತ್ತು ಸೀಳುವ ಬೆದರಿಕೆ

ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರದ ಪ್ರಕರಣ

ಮತಾಂಧರು ಬಾಲ್ಯದಿಂದಲೂ ಎಷ್ಟು ಕ್ರೂರಿಯಾಗಿರುತ್ತರೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಬರ್ಲಿನ್ (ಜರ್ಮನಿ) – ಇಲ್ಲಿಯ ಉಪನಗರ ಸ್ಪಾಂಡಾವುನಲ್ಲಿನ ಕ್ರಿಶ್ಚಿಯನ್ ಮಾರ್ಗನಸ್ಟರ್ನ ಪ್ರೈಮರಿ ಶಾಲೆಯ ಓರ್ವ ೧೧ ವರ್ಷದ ಮತಾಂಧ ವಿದ್ಯಾರ್ಥಿಯು ತನ್ನ ಶಿಕ್ಷಕನ ಕತ್ತು ಸೀಳುವ ಬೆದರಕೆಯನ್ನು ನೀಡಿದ್ದಾನೆ. ಈ ಬಗ್ಗೆ ಜರ್ಮನಿಯ ‘ಡೆರ್ ಟಾಗೆಸೆಪಗೆಲ’ ನಲ್ಲಿ ವರದಿ ಪ್ರಕಟವಾಗಿದೆ.

೧. ಫ್ರಾನ್ಸ್‌ನ ಒಂದು ಮಹಾವಿದ್ಯಾಲಯದಲ್ಲಿ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತೋರಿಸಿದ ಶಿಕ್ಷಕನಿಗೆ ಓರ್ವ ಮತಾಂಧ ವಿದ್ಯಾರ್ಥಿಯು ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಶಾಲೆಯಲ್ಲಿ ಶಿಕ್ಷಕನಿಗೆ ಗೌರವ ಸಲ್ಲಿಸಲು ಒಂದು ನಿಮಿಷದ ಮೌನ ಆಚರಿಸಲಾಯಿತು. ಈ ಮೌನದ ನಂತರ, ‘ಪ್ರವಾದಿಯನ್ನು ಅವಮಾನಿಸುವವರನ್ನು ಕೊಲ್ಲಲು ನಮಗೆ ಅನುಮತಿ ಇದೆ ಮತ್ತು ಅದು ಯೋಗ್ಯವಾಗಿದೆ’ ಎಂದು ವಿದ್ಯಾರ್ಥಿ ಹೇಳಿದ.

೨. ನಂತರ ಶಾಲೆಯ ಮುಖ್ಯೋಪಾಧ್ಯಾಯರು ಹುಡುಗನ ಹೆತ್ತವರನ್ನು ಭೇಟಿಯಾಗಲು ಕರೆದರು, ಆಗ ಅವರ ತಾಯಿ ನಮ್ಮ ಕುಟುಂಬವು ಈ ರೀತಿ ಯೋಚಿಸುವ ಕಟ್ಟರವಾದಿಯಲ್ಲ. ಅವನು ಶಾಲೆಯಲ್ಲಿ ಇತರ ಮಕ್ಕಳಿಂದ ಇದನ್ನು ಕಲಿತಿರಬಹುದು ಎಂದು ಹೇಳಿದರು.

೩. ವಿದ್ಯಾರ್ಥಿಯನ್ನು ತನ್ನ ಹೆತ್ತವರನ್ನು ಶಾಲೆಗೆ ಕರೆಯುವಂತೆ ಕೇಳಿದಾಗ, ಅವನು ನನ್ನ ಹೆತ್ತವರು ಬರದಿದ್ದರೆ, ಪ್ಯಾರಿಸ್‌ನಲ್ಲಿನ ವಿದ್ಯಾರ್ಥಿಯು ಮಾಡಿದಂತೆ ನಾನು ನಿಮ್ಮೊಂದಿಗೆ ಮಾಡುತ್ತೇನೆ ಎಂದು ಶಿಕ್ಷಕರಿಗೆ ತಿಳಿಸಿದನು.