ಭಾರತ ಮತ್ತು ಚೀನಾ ಪಾಂಗೊಂಗ್ ಸರೋವರದಿಂದ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲಿವೆ !

ಧೂರ್ತ ಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆಯೇ ? ಇದರ ಬಗ್ಗೆ ಸರಿಯಾದ ಪರಿಶೀಲನೆಯೊಂದಿಗೆ ಮತ್ತೆ ಅದು ಒಳನುಸುಳದಂತೆ ಭಾರತೀಯ ಸೇನೆಯು ಹೆಚ್ಚು ಜಾಗರೂಕರಾಗಿರಬೇಕು !

ನವದೆಹಲಿ : ಕಳೆದ ಎಂಟು ತಿಂಗಳಿಂದ ಲಡಾಖ್‌ನ ಪಾಂಗೊಂಗ್‌ನಲ್ಲಿ ಗಡಿಯ ಬಗ್ಗೆ ಭಾರತ ಮತ್ತು ಚೀನಾ ನಡುವಿನ ವಿವಾದ ಬಗೆಹರಿದಿದೆ. ಅಧಿಕೃತ ಮೂಲಗಳ ಪ್ರಕಾರ, ಎಲ್ಲಾ ವಿವಾದಿತ ಪ್ರದೇಶಗಳಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಮೂರು ಹಂತದ ಪ್ರಕ್ರಿಯೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ.

ಚುಶುಲ್‌ನಲ್ಲಿ ನಡೆದ ಭಾರತ ಮತ್ತು ಚೀನಾದ ಸೈನ್ಯಗಳ ನಡುವಿನ ೮ ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಯಲ್ಲಿ ಇದನ್ನು ಅಂತಿಮಗೊಳಿಸಲಾಯಿತು.

(ಸೌಜನ್ಯ : Zee News)

ಒಪ್ಪಂದದಲ್ಲಿ ಒಂದು ದಿನದೊಳಗೆ ಮಿಲಿಟರಿ ವಾಹನಗಳನ್ನು ತೆಗೆಯುವುದು, ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಕೆಲವು ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು, ಹಾಗೆಯೇ ಎರಡೂ ಕಡೆ ಸೈನಿಕರ ಪರಿಶೀಲನೆಯ ಸೂತ್ರಗಳು ಸೇರಿವೆ.