ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ಎಲ್ಲ ಧರ್ಮಗಳನ್ನು ಅಧ್ಯಯನ ಮಾಡದ ಹಾಗೂ ಅದರ ಬಗ್ಗೆ ಓದದಿರುವವರೇ ‘ಸರ್ವಧರ್ಮಸಮ ಭಾವ ಎಂದು ಹೇಳುತ್ತಾರೆ !

ಚಿರಂತನ ಆನಂದಪ್ರಾಪ್ತಿಗಾಗಿ ಸಾಧನೆ ಮಾಡುವುದೊಂದೇ ಪರ್ಯಾಯ !

‘ದೇವರನ್ನು ಮತ್ತು ಸಾಧನೆಯನ್ನು ನಂಬದಿದ್ದರೂ, ಎಲ್ಲರೂ ಚಿರಂತನ ಆನಂದವನ್ನೇ ಬಯಸುತ್ತಾರೆ. ಇದು ಕೇವಲ ಸಾಧನೆಯಿಂದ ಮಾತ್ರ ಸಿಗುತ್ತದೆ. ಸಾಧನೆಯ ಹೊರತು ಬೇರೆ ಮಾರ್ಗವಿಲ್ಲದ್ದರಿಂದ ಮನುಷ್ಯನು ಸಾಧನೆಯ ಕಡೆಗೆ ಹೊರಳುತ್ತಾನೆ.’

ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುದು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗುವುದಿಲ್ಲ ಸಾಧನೆಯೇ ಆಗುವುದು.

‘ಅಶ್ಲೀಲ ಚಲನಚಿತ್ರಗಳು, ‘ಪಬ್ ಮತ್ತು ‘ಲಿವ್ ಇನ್ ರಿಲೇಶನಶಿಪ್ ಮುಂತಾದ ವಿಷಯಗಳಿಗೆ ಆಡಳಿತಗಾರರು ಮನ್ನಣೆ ನೀಡಿದ್ದರಿಂದ ರಾಷ್ಟ್ರದ ಜನರ ಚಾರಿತ್ರ್ಯ ನಾಶವಾಗುತ್ತಿದೆ. ‘ರಾಮರಾಜ್ಯ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ ಆದರ್ಶವಾಗಿತ್ತು; ಏಕೆಂದರೆ ಆ ರಾಜ್ಯಗಳು ಚಾರಿತ್ರ್ಯ ಸಂಪನ್ನವಾಗಿದ್ದವು. ಈಗಿನ ಆಡಳಿತಗಾರರು ಇದನ್ನು ಅರಿತು ‘ಚಾರಿತ್ರ್ಯಸಂಪನ್ನ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುವರೇ ? ಭಾವಿ ಹಿಂದೂ ರಾಷ್ಟ್ರವು ಚಾರಿತ್ರ್ಯಸಂಪನ್ನವಾಗಿರುವುದು.

– (ಪರಾತ್ಪರ ಗುರು) ಡಾ. ಆಠವಲೆ