ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಆನ್‌ಲೈನ್ ಲಾಟರಿ ಗೆದ್ದಿರುವ, ‘ಕೌನ ಬನೆಗಾ ಕರೋಡಪತಿ’ಯಲ್ಲಿ ಬಹುಮಾನ ಪಡೆದ ಬಗ್ಗೆ ಸಂದೇಶ, ಬ್ಯಾಂಕ್ ವ್ಯವಹಾರಕ್ಕಾಗಿ ‘ಎಟಿಎಮ್‌ನ ಪಿನ್’ ಮತ್ತು ಆಧಾರಕಾರ್ಡ್ ಕ್ರಮಾಂಕವನ್ನು ಕೇಳುವುದು ಇಂತಹ ವಿವಿಧ ಭ್ರಮೆಯುಕ್ತ ಸಂದೇಶಗಳಿಗೆ ಮರುಳಾಗಬೇಡಿ, ಹಾಗೆಯೇ ಇಂತಹ ಸಂದೇಶಗಳಿಗೆ ಸ್ಪಂದಿಸಿ ಆರ್ಥಿಕ ವಂಚನೆಗೊಳಗಾಗಬೇಡಿ !

ಸಮಾಜದಲ್ಲಿ ದಿಢೀರ, ಅನಾಯಾಸವಾಗಿ ಹಣ ಸಿಗಬೇಕು ಎಂಬ ಅತಿಯಾಸೆಯಿಂದ ನಾಗರಿಕರು ಅನೇಕ ಆಮಿಷಗಳಿಗೆ ಬಲಿಯಾಗಿ ಮೋಸಕ್ಕೊಳಗಾಗುವ ಪ್ರಸಂಗಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತಿವೆ. ಸದ್ಯ ಕೊರೋನಾ ಮಹಾಮಾರಿಯಿಂದಾಗಿ ಅನೇಕ ಕಂಪನಿಗಳು ಮುಚ್ಚಲ್ಪಟ್ಟಿದ್ದು ಎಲ್ಲೆಡೆ ನಿರುದ್ಯೋಗವು ಹೆಚ್ಚಾಗಿದೆ. ಕೆಲವು ವ್ಯಕ್ತಿಗಳು ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿ ಸಾವಿರಾರು-ಲಕ್ಷಗಟ್ಟಲೆ ರೂಪಾಯಿಗಳ ಲಾಟರಿ ಸಿಕ್ಕಿದೆ ಅಥವಾ ಬೆಲೆಬಾಳುವ ವಸ್ತುಗಳ ಬಹುಮಾನ ಸಿಕ್ಕಿದೆ ಎಂಬ ಸಂದೇಶ, ಆಡಿಯೋ ಮೆಸೆಜ್, ಲಿಂಕ್‌ಗಳು ಎಲ್ಲೆಡೆಗೆ ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ವಂಚನೆಗೊಳಗಾದ ದೂರುಗಳು ಪೊಲೀಸರಲ್ಲಿ ದಾಖಲಾಗುತ್ತಿದೆ.

೧. ಆನ್‌ಲೈನ್ ಲಾಟರಿ ಸಿಕ್ಕಿದ ಬಗ್ಗೆ, ‘ಕೌನ ಬನೆಗಾ ಕರೋಡಪತಿ’ಯಲ್ಲಿ ಬಹುಮಾನ ದೊರಕಿದೆ ಎಂಬಂತೆ ನಾಗರಿಕರ ದಾರಿತಪ್ಪಿಸುವ ಸಂದೇಶ, ಆಡಿಯೋ ಮೆಸೆಜ್ ಪ್ರಸಾರಮಾಧ್ಯಮಗಳಲ್ಲಿ ಪ್ರಸಾರಿತಗೊಳ್ಳುವುದು

 ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಆನ್‌ಲೈನ್ ಲಾಟರಿ ಸಿಕ್ಕಿದ ಬಗ್ಗೆ, ‘ಕೌನ ಬನೆಗಾ ಕರೋಡಪತಿ’ಯಲ್ಲಿ ಬಹುಮಾನ ದೊರಕಿದೆ ಎಂಬ ಸಂದೇಶ, ಆಡಿಯೋ ಮೆಸೆಜ್ ಪ್ರಸಾರ ಗೊಳ್ಳುತ್ತಿವೆ. ಇದಕ್ಕನುಸಾರ ಕೆಲವು ಲಕ್ಷ ರೂಪಾಯಿಗಳ ಅಥವಾ ‘ಬಿಎಮ್‌ಡಬ್ಲ್ಯೂ’ಗಳಂತಹ ಐಷಾರಾಮಿ ವಾಹನಗಳ ಬಹುಮಾನ ಸಿಕ್ಕಿದೆ ಎಂದು ಹೇಳಿ ನಾಗರಿಕರನ್ನು ಮರುಳು ಮಾಡಲಾಗುತ್ತಿದೆ.

೨. ಲಾಟರಿ ಅಥವಾ ವಾಹನದಂತಹ ಈ ಬಹುಮಾನವನ್ನು ಪಡೆಯಲು ಲಕ್ಷಗಟ್ಟಲೆ ರೂಪಾಯಿಗಳನ್ನು ತುಂಬಲು ದುಂಬಾಲು ಬೀಳುವುದು

ಅದರ ನಂತರ ನಾಗರಿಕರಿಗೆ ಲಾಟರಿ ಅಥವಾ ವಾಹನಗಳಂತಹ ಬಹುಮಾನಗಳನ್ನು ಪಡೆಯಲು ‘ಪ್ರೊಸೆಸ್ ಫೀ’, ವ್ಯವಹಾರ ವಿನಿಮಯಕ್ಕಾಗಿ ಕೆಲವು ಲಕ್ಷ ರೂಪಾಯಿಗಳನ್ನು ತುಂಬಲು ಹೇಳಲಾಗುತ್ತದೆ. ಇದಕ್ಕಾಗಿ ನಾಗರಿಕರಿಂದ ಅವರ ಆಧಾರಕಾರ್ಡ್ ಕ್ರಮಾಂಕ, ಫೋಟೊ, ಬ್ಯಾಂಕ್ ಖಾತೆ ಇತ್ಯಾದಿಗಳ ವಿವರಣೆಯನ್ನು ಕೇಳಲಾಗುತ್ತದೆ. ತದನಂತರ ಸಂಚಾರವಾಣಿಯಲ್ಲಿ ಕೆಲವು ಬ್ಯಾಂಕ್ ಖಾತೆಗಳ ವಿವರಣೆಯನ್ನು ಕಳುಹಿಸಿ ಅದರಲ್ಲಿ ಮೇಲಿನ ಕಾರಣಗಳನ್ನು ನೀಡಿ ವಿವಿಧ ತಂತ್ರಗಳಿಂದ ಮೊತ್ತವನ್ನು ತುಂಬಲು ದುಂಬಾಲು ಬೀಳುತ್ತಾರೆ, ಅದರ ಬಗ್ಗೆ ಬೆಂಬೆತ್ತುತ್ತಾರೆ. ಈ ಹಣವನ್ನು ಆದಷ್ಟು ಒಂದೇ ಹಂತದಲ್ಲಿ ಕೇಳದೇ ಬಹುಮಾನ ಪಡೆದ ‘ಗ್ರಾಹಕನು’ ಸ್ಪಂದಿಸುವ ಬಗೆಗನುಸಾರ ಹೊಸ ಹೊಸ ಖಾತೆಗಳಲ್ಲಿ ಹಣವನ್ನು ಜಮೆ ಮಾಡಲು ಹೇಳಲಾಗುತ್ತದೆ. ಇಂತಹ ಅನೇಕ ಪ್ರಕರಣಗಳು ಘಟಿಸಿದ್ದು ಗಮನಕ್ಕೆ ಬರುತ್ತದೆ. ಇತ್ತೀಚೆಗಷ್ಟೇ ಓರ್ವ ನಾಗರಿಕನಿಗೆ ‘ಕೌನ ಬನೆಗಾ ಕರೋಡಪತಿ’ ಯ ಬಹುಮಾನ ದೊರಕಿದ ಬಗ್ಗೆ ಹೇಳಿ ಈ ರೀತಿ ಮೋಸಗೊಳಿಸಿ ಬ್ಯಾಂಕಿನ ೯ ವಿವಿಧ ಖಾತೆಗಳಲ್ಲಿ ೧೭ ಲಕ್ಷಗಳಿಗಿಂತ ಹೆಚ್ಚು ರೂಪಾಯಿಗಳನ್ನು ತುಂಬುವಂತೆ ಮಾಡಿದರು.

೩. ಇಂತಹ ವಂಚನೆಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದರೂ ಕಳೆದುಕೊಂಡ ಮೊತ್ತ ವಾಪಾಸು ಸಿಗುವ ಖಾತ್ರಿ ಇಲ್ಲ !

ಅನಾಯಾಸವಾಗಿ ಹಣ ಪಡೆಯುವ ಆಸೆ, ಬೆಲೆ ಬಾಳುವ ವಸ್ತುಗಳ ಬಹುಮಾನಕ್ಕೆ ಮರುಳಾಗಿ ಹಣವನ್ನು ತುಂಬಿ ತಾವು ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದಾಗ ನಾಗರಿಕರು ಪೊಲೀಸರಲ್ಲಿ ದೂರು ನೀಡುತ್ತಾರೆ. ಯಾವ ಬ್ಯಾಂಕ್ ಖಾತೆಗಳಲ್ಲಿ ಮೋಸ ಹೋದ ನಾಗರಿಕರಿಂದ ಹಣವನ್ನು ತುಂಬಲಾಗುತ್ತದೋ, ಆ ಖಾತೆಯನ್ನು ಪರಿಶೀಲಿಸಿದಾಗ ಆ ಖಾತೆಗಳಿಂದ ತಕ್ಷಣ ಹಣವನ್ನು ತೆಗೆದದ್ದು ಗಮನಕ್ಕೆ ಬರುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಾಗರಿಕರು ವಂಚನೆ ಗೊಳಗಾಗುತ್ತಿರುವುದು ಸ್ಪಷ್ಟವಾಗುತ್ತದೆ; ಆದರೆ ದೇಶ-ವಿದೇಶಗಳಲ್ಲಿರುವ ಇಂತಹ ಗುಂಪುಗಳು ನಾಗರಿಕರನ್ನು ವಂಚಿಸಲು ಈ ರೀತಿ ಕ್ರಮಬದ್ಧವಾಗಿ ಮತ್ತು ತಂತ್ರಾಂಶದ ಕೌಶಲ್ಯದಿಂದ ಸಕ್ರಿಯವಿರುವುದರಿಂದ ಅವರ ವಿರುದ್ಧ ಕಾನೂನುಬದ್ಧ ಕಾರ್ಯಾಚರಣೆಯಾಗುವ ಸಾಧ್ಯತೆಯು ಬಹಳ ಕಡಿಮೆಯಿದೆ. ಇದರಿಂದ ಅನಾಯಾಸವಾಗಿ ಆರ್ಥಿಕ ಲಾಭವನ್ನು ಮಾಡಲು ಸಾಧ್ಯವಿದೆಯೇನು ಹೇಗೆ ಮಾಡುವರು ಮತ್ತು ಜಾಗರೂಕತೆಯ ಅಭಾವ ಇಂತಹ ಸಾರಾಸಾರ ವಿಚಾರ ಮಾಡದ ಕಾರಣ ನಾಗರಿಕರಿಗೆ ಪಶ್ಚಾತ್ತಾಪ ಪಡುವ ಹೊರತು ಬೇರೆ ಪರ್ಯಾಯವೇ ಉಳಿಯುವುದಿಲ್ಲ.

೪. ಕೆಲವು ನಾಗರಿಕರಿಗೆ ಬ್ಯಾಂಕ್ ವ್ಯವಹಾರಕ್ಕಾಗಿ ಎಟಿಎಮ್‌ನ ಪಿನ್ ಕ್ರಮಾಂಕ ಅಥವಾ ಆಧಾರಕಾರ್ಡ್ ಕ್ರಮಾಂಕವನ್ನು ಕೇಳಿ ಆ ಮಾಧ್ಯಮದಿಂದ ಅವರ ಬ್ಯಾಂಕ್‌ನಿಂದ ಹಣವನ್ನು ತೆಗೆದು ವಂಚನೆ ಮಾಡಿದ ಪ್ರಸಂಗ ಬೆಳಕಿಗೆ ಬರುವುದು

ಅಜ್ಞಾತ ವ್ಯಕ್ತಿಗಳು ಕೆಲವು ನಾಗರಿಕರನ್ನು ಸಂಚಾರವಾಣಿಯಲ್ಲಿ ಸಂಪರ್ಕಿಸಿ ಸವಿಯಾದ ಮಾತುಗಳನ್ನಾಡುತ್ತಾರೆ. ಅಜ್ಞಾತ ವ್ಯಕ್ತಿಯು ಚಾಣಾಕ್ಷತೆಯಿಂದ ಸಂಬಂಧಿತ ನಾಗರಿಕನಿಂದ ಬ್ಯಾಂಕ್ ವ್ಯವಹಾರಕ್ಕಾಗಿ ಎಟಿಎಮ್ ಪಿನ್ ಅಥವಾ ಆಧಾರಕಾರ್ಡ್ ಕ್ರಮಾಂಕವನ್ನು ಪಡೆದುಕೊಳ್ಳುತ್ತಾನೆ. ಜನ ಸಾಮಾನ್ಯರು ಜಾಗರೂಕರಾಗಿದ್ದರೆ ಅವರು ಈ ಮಾತುಗಳಿಗೆ ಮರುಳಾಗಿ ಇಂತಹ ಗೌಪ್ಯ ಕ್ರಮಾಂಕವನ್ನು ಸಹಜವಾಗಿ ಕೊಡುತ್ತಾರೆ. ಅದರ ನಂತರ ನಾಗರಿಕರ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದ ಬಗ್ಗೆ ಬಹಿರಂಗವಾಗುತ್ತದೆ. ಈ ಆರೋಪಿಗಳು ವಿವಿಧ ‘ಸಿಮ್ ಕಾರ್ಡ್’ನ್ನು ಉಪಯೋಗಿಸಿ ನಕಲಿ ಹೆಸರಿನಲ್ಲಿ ಸಂಪರ್ಕಿಸುತ್ತಿದ್ದರಿಂದ ಇಂತಹ ಪ್ರಕರಣಗಳಲ್ಲಿ ಪೊಲೀಸರಲ್ಲಿ ದೂರು ನೀಡಿಯೂ ಏನೂ ಉಪಯೋಗವಾಗುವುದಿಲ್ಲ. ವಾಸ್ತವದಲ್ಲಿ ನಾಗರಿಕರ ಆಧಾರಕಾರ್ಡ್ ಅಥವಾ ಎಟಿಎಮ್ ಪಿನ್ ಕ್ರಮಾಂಕವನ್ನು ಸಂಚಾರವಾಣಿಯಲ್ಲಿ ತಾವು ಕೇಳುವುದಿಲ್ಲ ಎಂದು ಬ್ಯಾಂಕುಗಳು ನಿರಂತರವಾಗಿ ಪ್ರಬೋಧನೆ ಮಾಡುತ್ತಿರುತ್ತದೆ.

೫. ದೊಡ್ಡ ಬಹುಮಾನ ಸಿಕ್ಕಿದ ಬಗ್ಗೆ ‘ಲಿಂಕ್’ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಹೇಳಿ ದೋಚುವುದು

ಕೆಲವು ನಾಗರಿಕರಿಗೆ ತಮಗೆ ಕಾರು, ತಂಪುಪೆಟ್ಟಿಗೆ (ರೆಫ್ರಿಜರೇಟರ್), ಎಲ್‌ಇಡಿ ಟಿವಿ ಇವುಗಳಂತಹ ಬೆಲೆ ಬಾಳುವ ವಸ್ತು ಅಥವಾ ದೊಡ್ಡ ಮೊತ್ತದ ಬಹುಮಾನವು ಸಿಕ್ಕಿದ ಬಗ್ಗೆ ಅಥವಾ ವಿದೇಶ ಪ್ರಯಾಣಕ್ಕಾಗಿ ಆಯ್ಕೆಯಾಗಿದ್ದು ಅದರ ಟಿಕೀಟುಗಳನ್ನು ಲಿಂಕ್‌ನ ಮೂಲಕ ಕಳುಹಿಸಿದ ಬಗ್ಗೆ ನಾಟಕವಾಡಲಾಗುತ್ತದೆ. ಈ ಬಹುಮಾನವನ್ನು ಪಡೆಯಲು ಲಿಂಕ್‌ಗೆ ಕ್ಲಿಕ್ ಮಾಡಲು ಹೇಳಲಾಗುತ್ತದೆ. ಆ ಲಿಂಕ್‌ಗೆ ಕ್ಲಿಕ್ ಮಾಡಿದಾಗ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿದುದರಿಂದ ನಮ್ಮ ವೈಯಕ್ತಿಕ ಗೌಪ್ಯ ಮಾಹಿತಿಯು ಉದಾ. ಬ್ಯಾಂಕ್ ಖಾತೆಯ ವರದಿ ಮುಂತಾದವುಗಳು ಅಜ್ಞಾತ ವ್ಯಕ್ತಿಯ ಕೈಸೇರುತ್ತದೆ. ಈ ಮಾಹಿತಿಯನ್ನು ಪಡೆದು ಸಂಬಂಧಿತ ನಾಗರಿಕರ ಬ್ಯಾಂಕ್ ಖಾತೆಯಿಂದ ಪರಸ್ಪರ ಹಣವನ್ನು ತೆಗೆದಿರುವ ಪ್ರಸಂಗಗಳೂ ಘಟಿಸುತ್ತವೆ. ಇಂತಹ ಪ್ರಕರಣಗಳಲ್ಲಿಯೂ ಆಡಳಿತ-ಸರಕಾರಗಳ ಬಳಿ ನ್ಯಾಯ ಕೇಳಿದರೂ ಕೈಗೆ ಏನೂ ದಕ್ಕುವುದಿಲ್ಲ.

ಈ ರೀತಿ ಆನ್‌ಲೈನ್ ಲಾಟರಿ ಸಿಕ್ಕಿದ ಬಗ್ಗೆ, ‘ಕೌನ ಬನೆಗಾ ಕರೋಡಪತಿ’ಯಲ್ಲಿ ಬಹುಮಾನ ದೊರಕಿದ ಸಂದೇಶ, ವಾಟ್ಸ್‌ಆಪ್ ಮತ್ತು ಆಡಿಯೋ ಮೆಸೆಜ್ ದೊರಕಿದರೆ ಅಥವಾ ಬಹುಮಾನ ಸಿಕ್ಕಿದ ಬಗ್ಗೆ ಲಿಂಕ್ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಲು ಕರೆ ನೀಡಿದರೆ ಅದನ್ನು ದುರ್ಲಕ್ಷಿಸಿ ಅದಕ್ಕೆ ಪ್ರತಿಕ್ರಿಯೆ ನೀಡಬಾರದು. ಇಂತಹ ಸಂದೇಶಗಳನ್ನು ತಕ್ಷಣ ಅಳಿಸಿಹಾಕಬೇಕು (ಡಿಲೀಟ್ ಮಾಡಬೇಕು). ಯಾರಾದರೂ ದೂರವಾಣಿ ಅಥವಾ ಸಂಚಾರವಾಣಿಯಲ್ಲಿ ಆಧಾರಕಾರ್ಡ್ ಅಥವಾ ಎಟಿಎಮ್. ಪಿನ್ ಕ್ರಮಾಂಕವನ್ನು ಕೇಳುತ್ತಿದ್ದರೆ ಅದನ್ನು ದುರ್ಲಕ್ಷಿಸಬೇಕು. ಹಾಗೆಯೇ ಇಂತಹ ವಂಚನೆಗಳಿಗೆ ಬೆಂಬಲ ನೀಡದೇ ತಮ್ಮ ಆರ್ಥಿಕ ಹಾನಿಯನ್ನು ತಡೆಗಟ್ಟಿ !