ಭೋಪಾಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರ ಜಿಹಾದಿ ಮಾತು !
|
ಭೋಪಾಲ್ (ಮಧ್ಯಪ್ರದೇಶ) – ನನ್ನಲ್ಲಿ ಅಧಿಕಾರವಿರುತ್ತಿದ್ದರೆ, ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖ ಒಡೆದುಹಾಕುತ್ತಿದ್ದೆ. ನಮ್ಮ ಕೈಗಳನ್ನು ಕಟ್ಟಿದ್ದಾರೆ; ಏಕೆಂದರೆ ನಾವು ಕಾನೂನು ಪಾಲಿಸುವ ನಾಗರಿಕರಾಗಿದ್ದೇವೆ (ಮತಾಂಧರ ಜಿಹಾದಿ ಮನಸ್ಥಿತಿಯನ್ನು ನೋಡಿದರೆ ಈ ಮಾತಿನ ಮೇಲೆ ಯಾರು ವಿಶ್ವಾಸವಿಡುತ್ತಾರೆ ? – ಸಂಪಾದಕ) ಮತ್ತು ನಮಗೆ ಅಲ್ಲಾಹನ ನಬಿಯ ಮುಖಾಂತರ ಶಾಂತತೆಯನ್ನು ಕಲಿಸಲಾಗಿದೆ ಎಂದು ಭೋಪಾಲ ಸೆಂಟ್ರಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಇವರು ಅಕ್ಟೋಬರ್ ೩೦ ರಂದು ಆಯೋಜಿಸಲಾಗಿದ್ದ ಮ್ಯಾಕ್ರಾನ್‌ನ ವಿರುದ್ಧದ ಮೆರವಣಿಗೆಯಲ್ಲಿ ಭಾಷಣ ಮಾಡುತ್ತಿರುವಾಗ ಹೇಳಿದರು. (ಇಂತಹ ಬೋಧನೆ ಇದ್ದಿದ್ದರೆ, ಅದು ಕೃತಿಯಲ್ಲೂ ಕಾಣಿಸುತ್ತಿತ್ತು; ಆದರೆ ಮಸೂದ್ ಅವರ ಭಾಷಣದಲ್ಲಿ ಹೇಳಿಕೆಯು ಅವರ ವರ್ತನೆ ತೋರಿಸುತ್ತದೆ ಮತ್ತು ಫ್ರಾನ್ಸ್‌ನಲ್ಲಿ ಅವರ ಧರ್ಮಬಾಂಧವರು ಮಾಡಿದ ಕೃತಿಯು ನೈಜಸ್ಥಿತಿಯನ್ನು ತೋರಿಸುತ್ತದೆ ! – ಸಂಪಾದಕ)