ಸರಕಾರಿಕರಣಗೊಂಡಿರುವ ಶಿವನ ದೇವಾಲಯದ ೩೫ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತಮಿಳುನಾಡಿನ ಸರಕಾರದ ಸಂಚು

ಹಿಂದೂ ಮುನ್ನಾನಿಯಿಂದ ತೀವ್ರ ವಿರೋಧ

  • ದೇಶದ ಯಾವುದೇ ಸರಕಾರವು ವಕ್ಫ್ ಬೋರ್ಡ್‌ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಧೈರ್ಯವನ್ನು ತೋರಿಸಬಹುದೇ ? ಯಾವ ಅಣ್ಣಾದ್ರಮುಕ ಪಕ್ಷವು ಶಂಕರಾಚಾರ್ಯರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲು ಧೈರ್ಯ ಮಾಡಿದರೋ, ಅವರಿಂದ ಬೇರೆ ಏನು ಅಪೇಕ್ಷಿಸಬಹುದು ?

  • ಹಿಂದೂಗಳು ಸಹಿಷ್ಣುರಾಗಿರುವುದರಿಂದ ಅವರ ದೇವಾಲಯಗಳ ಮೇಲೆ ಮೊಘಲರಿಂದ ಹಿಡಿದು ಈಗಿನ ಎಲ್ಲ ಪಕ್ಷಗಳ ಸರಕಾರಗಳೂ ಸೇರಿ ಹಿಡಿತ ಸಾಧಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ಹಾಗೂ ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !

ಚೆನ್ನೈ (ತಮಿಳುನಾಡು) – ಕಲ್ಲಾಕುರಿಚಿ ಜಿಲ್ಲೆಯ ವೀರ ಚೋಲಪುರಂನಲ್ಲಿರುವ ಶ್ರೀ ಅರ್ಧನಾರೀಶ್ವರ ದೇವಸ್ಥಾನವು ಅತ್ಯಂತ ದುಸ್ಥಿತಿಯಲ್ಲಿದ್ದರೂ, ಸರಕಾರದ ಹಿಂದೂ ಧಾರ್ಮಿಕ ಹಾಗೂ ದತ್ತಿ ನಿರ್ವಹಣಾ ಇಲಾಖೆ ದೇವಾಲಯದ ಭೂಮಿಯನ್ನು ಮಾರಾಟ ಮಾಡಲು ಪತ್ರಿಕೆಯೊಂದರಲ್ಲಿ ಪ್ರಕಟಣೆ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ತಮಿಳುನಾಡಿನ ಹಿಂದುತ್ವನಿಷ್ಠ ಸಂಘಟನೆಯಾದ ಹಿಂದೂ ಮುನ್ನಾನಿಯು ಈ ಆರೋಪ ಮಾಡಿದ್ದಾರೆ. ಕಲ್ಲಕುರಿ ಜಿಲ್ಲೆಯಲ್ಲಿ ಹೊಸ ಜಿಲ್ಲಾ ಕೇಂದ್ರವನ್ನು ಸ್ಥಾಪಿಸಲು ಈ ದೇವಾಲಯದ ೩೫ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಬಯಸಿದೆ. ಈ ಪ್ರಸ್ತಾವನೆಗೆ ಸರಕಾರ ಆಕ್ಷೇಪಣೆಗಳನ್ನು ಕೋರಿದೆ. ಅದರಂತೆ ಸಂಘಟನೆಯು ಈ ಸ್ವಾಧೀನ ಕಾರ್ಯವನ್ನು ವಿರೋಧಿಸುತ್ತಾ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಹಿಂದೂ ಮುನ್ನಾನಿಯ ರಾಜ್ಯ ಕಾರ್ಯದರ್ಶಿ ಟಿ. ಮನೋಹರನ ಇವರು, ಈ ಜಾಹೀರಾತಿನ ಪ್ರಕಾರ ಶಿವನ ದೇವಾಲಯದ ಒಡೆತನದ ೩೫ ಎಕರೆ ಜಮೀನಿನ ಮೌಲ್ಯವನ್ನು ೧ ಕೋಟಿ ೯೮ ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ೩೫ ಎಕರೆ ಜಮೀನಿನ ಮೌಲ್ಯ ೧೦೦ ಕೋಟಿ ರೂಪಾಯಿ ಇರಬೇಕಿತ್ತು, ಅದು ಕೇವಲ ೧ ಕೋಟಿ ೯೮ ಲಕ್ಷ ರೂಪಾಯಿ ಎಂದು ಹೇಳುವುದು ವಂಚನೆ ಮತ್ತು ಲೂಟಿಯಾಗಿದೆ. ಈ ಸರಕಾರಿ ದೇವಾಲಯ ನಿರ್ವಹಣಾ ಸಮಿತಿಯ ಕಾರ್ಯವೈಖರಿಯನ್ನು ಇದುವರೆಗೆ ಬೆಂಬಲಿಸಿದ ಭಕ್ತರಿಗೆ ಇದು ದ್ರೋಹವಾಗಿದ್ದು, ಅದೇರೀತಿ ಈ ಸ್ಥಳದಲ್ಲಿ ಕಟ್ಟಡಕಾಮಗಾರಿ ಮಾಡುವುದು ಕಾನೂನುಬಾಹಿರ ಮತ್ತು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

ಪ್ರಾಚೀನ ದೇವಾಲಯದ ಭೂಮಿಯನ್ನು ಮಾರಾಟ ಮಾಡುವ ಸರಕಾರದ ಪ್ರಯತ್ನವನ್ನು ವಿರೋಧಿಸುವಂತೆ ಹಿಂದೂ ಮುನ್ನಾನಿಯು ಹಿಂದೂಗಳಿಗೆ ಕರೆ ನೀಡಿದೆ.

ಟ್ವಿಟರ್ ಮೂಲಕ ಧರ್ಮಾಭಿಮಾನಿ ಹಿಂದೂಗಳ ವಿರೋಧ

ಅಕ್ಟೋಬರ್ ೨೯ ರ ಬೆಳಿಗ್ಗೆ ಧರ್ಮಾಭಿಮಾನಿ ಹಿಂದೂಗಳು ಇದರ ವಿರುದ್ಧ #TN_Govt_Looting_Temples ಎಂಬ ಹ್ಯಾಶ್‌ಟ್ಯಾಗ್ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಪಾವಧಿಯಲ್ಲಿಯೇ ಇದು ರಾಷ್ಟ್ರೀಯ ಟ್ರೆಂಡ್‌ನಲ್ಲಿ ೪ ನೇ ಸ್ಥಾನದಲ್ಲಿತ್ತು ಹಾಗೂ ೨೫ ಸಾವಿರಕ್ಕೂ ಹೆಚ್ಚು ಹಿಂದೂಗಳು ಟ್ವೀಟ್ ಮಾಡುವ ಮೂಲಕ ಇದನ್ನು ವಿರೋಧಿಸಿದರು.