ಫರಿದಾಬಾದ್ (ಹರಿಯಾಣ)ದಲ್ಲಿ ‘ಲವ್ ಜಿಹಾದ್’ನಿಂದ ಮಹಾವಿದ್ಯಾಲಯದ ಹೊರಗೆ ಹಿಂದೂ ಹುಡುಗಿಯನ್ನು ಗುಂಡಿಟ್ಟು ಹತ್ಯೆಗೈದ ಮತಾಂಧ

  • ೨ ಮತಾಂಧರ ಬಂಧನ

  • ಆಕ್ರಶಗೊಂಡ ನಾಗರಿಕ ರಸ್ತೆಗಿಳಿದು ಆಂದೋಲನ

  • ಮತಾಂಧರನ್ನು ಚಕಮಕಿಯಲ್ಲಿ ಕೊಲ್ಲಬೇಕು ಎಂದು ನಾಗರಿಕರಿಂದ ಬೇಡಿಕೆ

  • ಭಾಜಪ ರಾಜ್ಯದಲ್ಲಿ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಇಲ್ಲಿ ಹಿಂದೂ ಧರ್ಮ, ಹಿಂದೂ ದೇವತೆಗಳು, ಹಿಂದೂ ಯುವತಿಯರನ್ನು ರಕ್ಷಿಸಲು ಸರಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಹಿಂದೂಗಳೇ, ಹಿಂದೆ ಮತಾಂಧರಿಂದ ಹಿಂದೂ ಹುಡುಗಿಯರ ಅತ್ಯಾಚಾರ ಅಥವಾ ಹತ್ಯೆ ಮಾಡುವ ಘಟನೆಗಳು ತಿಂಗಳಲ್ಲಿ ಒಂದು ದಿನ ನಡೆಯುತ್ತಿದ್ದವು. ಈಗ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಭವಿಷ್ಯದಲ್ಲಿ ಪ್ರತಿ ಗಂಟೆಗೊಮ್ಮೆ ಇಂತಹ ಘಟನೆಗಳಾಗುವ ಸಮಯ ಬರಬಾರದು, ಅದಕ್ಕಾಗಿ ಸಂಘಟಿತರಾಗಿ !
ಹೆದ್ದಾರಿಯ ಮೇಲೆ ಧರಣಿ ಆಂದೋಲನ ಮಾಡುತ್ತಿರುವ ನಾಗರಿಕರು

ಫರಿದಾಬಾದ್ (ಹರಿಯಾಣ) – ಇಲ್ಲಿಯ ಬಲ್ಲಭಗಡದ ಅಗ್ರವಾಲ್ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ಹಿಂದೂ ಹುಡುಗಿ ನಿಕಿತಾ ತೋಮರ್‌ನನ್ನು ಮತಾಂಧನು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದನು. ಈ ಘಟನೆ ‘ಲವ್ ಜಿಹಾದ್’ ಮೂಲಕ ನಡೆದಿರುವುದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಚಕಮಕಿ(ಎನ್‌ಕೌಂಟರ್)ಯಲ್ಲಿ ಈ ಇಬ್ಬರೂ ಯುವಕರನ್ನು ಹತ್ಯೆ ಮಾಡಬೇಕು ಎಂದು ಯುವತಿಯ ಕುಟುಂಬ ಒತ್ತಾಯಿಸಿದೆ. ಇದಕ್ಕಾಗಿ ಇಲ್ಲಿನ ನಾಗರಿಕರು ಹೆದ್ದಾರಿಯಲ್ಲಿ ಧರಣಿ ಆಂದೋಲನವನ್ನು ಪ್ರಾರಂಭಿಸಿದ್ದಾರೆ.

೧. ಮೃತಪಟ್ಟ ನಿಕಿತಾ ತೋಮರ್ ಇವಳು ಅಗ್ರವಾಲ್ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಳು. ಸಂಜೆ ಪರೀಕ್ಷೆ ಬರೆದು ಮಹಾವಿದ್ಯಾಲಯದಿಂದ ಹೊರಬಂದಾಗ ಆಕೆಯ ಹತ್ಯೆ ಮಾಡಲಾಯಿತು. ಈ ಸಮಯದಲ್ಲಿ ಅವಳ ತಾಯಿ ಮತ್ತು ಸಹೋದರ ಪ್ರವೇಶದ್ವಾರದ ಹೊರಗೆ ಅವಳಿಗಾಗಿ ಕಾಯುತ್ತಿದ್ದರು. ಆ ಕ್ಷಣದಲ್ಲಿ ಇಬ್ಬರು ಪುರುಷರು ಚತುಷ್ಚಕ್ರ ವಾಹನದಿಂದ ಬಂದರು ಹಾಗೂ ಅವರಲ್ಲಿ ಒಬ್ಬರು ನಿಕಿತಾ ಮೇಲೆ ಗುಂಡು ಹಾರಿಸಿದರು ಮತ್ತು ಅವರು ಅಲ್ಲಿಂದ ಪಲಾಯನ ಗೈದರು. ಈ ಪ್ರಕರಣದಲ್ಲಿ ಪೊಲೀಸರು ತೌಸಿಫ್ ಹಾಗೂ ರೆಹಾನ್ ನನ್ನು ಬಂಧಿಸಿದ್ದಾರೆ.

೨. ನಿಕಿತಾಳ ತಂದೆ ಮೂಲಚಂದ್ ತೋಮರ ಇವರು, ತೌಸಿಫ್ ಎಂಬ ಮುಸಲ್ಮಾನ ಹುಡುಗ ನಿಕಿತಾಳೊಂದಿಗೆ ೧೨ ನೇ ತರಗತಿಯವರೆಗೆ ಓದುತ್ತಿದ್ದನು. ಆತ ನಿಕಿತಾಳೊಂದಿಗೆ ಸ್ನೇಹ ಬೆಳೆಸಲು ಸಹ ಹಲವಾರು ಬಾರಿ ಪ್ರಯತ್ನಿಸಿದನು. ಮತಾಂತರಗೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿತ್ತು. ಸ್ನೇಹ ಮತ್ತು ಮದುವೆಗೆ ನಿಕಿತಾ ನಿರಾಕರಿಸಿದ ನಂತರ ೨೦೧೮ ರಲ್ಲಿ ತೌಸಿಫ್ ಅವಳನ್ನು ಅಪಹರಿಸಿದ್ದನು. ಆದರೆ ಯುವತಿಯ ಕುಟುಂಬವು ಅಪಮಾನದ ಭಯದಿಂದ ಈ ವಿಷಯವನ್ನು ತಮ್ಮೊಳಗೆ ಇತ್ಯರ್ಥಪಡಿಸಿ ಕೊಂಡಿತ್ತು.