ವಿರೋಧದ ನಂತರ ಛಾಯಾಚಿತ್ರಗಳನ್ನು ತೆಗೆದು ಬಹಿರಂಗವಾಗಿ ಕ್ಷಮೆಯಾಚನೆ
|
ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗೆ ನೋವಾಗಬೇಕೆಂದೆಂದು ಪ್ರಕಾಶಿಸಿಲ್ಲ, ಬದಲಾಗಿ ಶ್ರೀ ದುರ್ಗಾ ದೇವಿಯನ್ನು ಯಾವರೀತಿ ವಿಡಂಬನೆ ಮಾಡಿದ್ದಾರೆ, ಎಂಬುದನ್ನು ತಿಳಿಸಲು ಪ್ರಕಾಶಿಸಿದ್ದೇವೆ.
ಕೊಚ್ಚಿ (ಕೇರಳ) – ಇಲ್ಲಿಯ ಅಲುವಾ ಉಪನಗರದ ಕ್ರೈಸ್ತ ಚಿತ್ರಗಾರ್ತಿ ದಿಯಾ ಜಾನ್ ಇವರು ನವರಾತ್ರಿಯ ಉತ್ಸವದಲ್ಲಿ ಶ್ರೀ ದುರ್ಗಾ ದೇವಿಯು ಮದ್ಯ ಸೇವಿಸುವ ಹಾಗೂ ಗಾಂಜಾ ಸೇದುವ ಭಂಗಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂ ದೇವತೆಯನ್ನು ಅವಮಾನಿಸಿದ್ದಾರೆ. ಇದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರಮಾಣದಲ್ಲಿ ಖಂಡನೆ ವ್ಯಕ್ತವಾಗಿದ್ದರಿಂದ, ಅದೇರೀತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ದಿಯಾ ಈ ಮೇಲಿನ ಛಾಯಾಚಿತ್ರಗಳನ್ನು ತೆಗೆದು ಕ್ಷಮೆಯಾಚಿಸಿದಳು.
Photoshoot by Diya John in Kerala has insulted #Hindu Goddess & #Hinduism during #Navratri Festival. She said this photoshoot is to reflect the Freedom for Women.
Ms Diya John, why don't u try these kind of Photoshot with other Religions?#SaveHinduism@ShefVaidya @National_Hindu pic.twitter.com/otGEZXlrl6— Prof Shrinath Rao K 🇮🇳 (@ProfSRK) October 24, 2020
೧. ದಿಯಾಳು ಮಾದಕ ಯುವತಿಗೆ ಕೆಂಪು ಸೀರೆ ಉಡಿಸಿ ಆಕೆಯ ಹಣೆಯ ಮೇಲೆ ದೊಡ್ಡ ಕೆಂಪು ಕುಂಕುಮ, ಕೈಯಲ್ಲಿ ಕಮಲ, ಶಂಖ ಮತ್ತು ತ್ರಿಶೂಲದೊಂದಿಗೆ ಕಮಲದ ಆಸನದ ಮೇಲೆ ಕುಳಿತಿರುವಂತೆ ತೋರಿಸಿದ್ದಳು. ಜೊತೆಗೆ ಆಕೆ ಸ್ವಚ್ಛಂದವಾಗಿ ಗಾಂಜಾ ಸೇವನೆ ಹಾಗೂ ಮದ್ಯಪಾನ ಮಾಡುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾಳೆ. ಈ ಫೋಟೋ ಪಕ್ಕದಲ್ಲಿ ಶ್ರೀ ದುರ್ಗಾ ದೇವಿಯನ್ನು ಅವಮಾನಿಸುವ ಅವಾಚ್ಯ ಪದಗಳೂ ಇದ್ದವು.
೨. ದಿಯಾ ಜಾನ್ ಈ ಛಾಯಾಚಿತ್ರಗಳನ್ನು ತೆಗೆಯುವಾಗ ಅಥಿರಾ, ಜೆಕಬ್ ಅನಿಲ್, ಝೋಹೈಬ್ ಝಾಯಿ ಹಾಗೂ ಅಕ್ಷಯ್ ರಣಜಿತ್ ಇವರೆಲ್ಲ ಸಹಾಯ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ದಿಯಾ, ಸ್ತ್ರೀಸ್ವಾತಂತ್ರ್ಯಕ್ಕೆ ಗೌರವ ಸಲ್ಲಿಸಲು ಈ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಇದಕ್ಕೆ ಯಾವುದೇ ದೇವತೆಯ ಹೆಸರಿಲ್ಲ. ಆದ್ದರಿಂದ ಅದು ಧರ್ಮಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದರು.
೩. ಛಾಯಾಚಿತ್ರದಲ್ಲಿ ಮಹಿಳೆಯನ್ನು ಶ್ರೀ ದುರ್ಗಾ ದೇವಿಯಂತೆ ತೋರಿಸಿರುವುದರಿಂದ ಹಾಗೂ ಮದ್ಯಪಾನ ಹಾಗೂ ಗಾಂಜಾ ಸೇದುತ್ತಿರುವಂತೆ ತೋರಿಸಿದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ ಎಂದು ಮುಕ್ಕುನ ಭಗವತಿ ಮಂದಿರದ ಆಡಳಿತವು ಮುರುಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
೪. ಈ ವ್ಯವಸ್ಥಾಪನೆಯ ಸಚಿವರಾದ ನ್ಯಾಯವಾದಿ ಮಧು ನಾರಾಯಣನ್ ಇವರು, ದೇವಿಯ ಛಾಯಾಚಿತ್ರದಲ್ಲಿ ಶಂಖ, ತ್ರಿಶೂಲಗಳ ಜೊತೆಗೆ ಮದ್ಯದ ಬಾಟಲಿ ಹಾಗೂ ಗಾಂಜಾದ ಛಾಯಾಚಿತ್ರಗಳನ್ನು ತೋರಿಸಲಾಗಿದೆ. ಇದು ದಿಯಾಳ ಹಿಂದೂ ಧರ್ಮದ ವಿರುದ್ಧದ ದ್ವೇಷ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ದೇವತೆಗಳ ಅವಮಾನ ಮಾಡುವ ರಾಕ್ಷಸಿ ಉದ್ದೇಶವು ಕಂಡುಬರುತ್ತದೆ.
೫. ೩-೪ ಇತರ ಜಾಗೃತ ಹಿಂದೂಗಳು ಇದೇ ರೀತಿಯ ದೂರುಗಳನ್ನು ದಾಖಲಿಸಿದ್ದಾರೆ. ಹಿಂದೂಗಳಿಂದ ಹೆಚ್ಚುತ್ತಿರುವ ವಿರೋಧವನ್ನು ನೋಡಿ ದಿಯಾ ವಿವಾದಾತ್ಮಕ ಛಾಯಾಚಿತ್ರಗಳನ್ನು ತೆಗೆದುಹಾಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.