ಮೆಹಬೂಬಾ ಮುಫ್ತಿಯವರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಲಾಲ್‌ಚೌಕದಲ್ಲಿ ತ್ರಿವರ್ಣವನ್ನು ಹಾರಿಸುವ ಪ್ರಯತ್ನ

ಈ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಉದ್ಭವಿಸಿದುದರಿಂದ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು!

ಶ್ರೀನಗರದಲ್ಲಿ ತ್ರಿವರ್ಣವನ್ನು ಹಾರಿಸಿದರೆ ವಾತಾವರಣವು ಯಾಕೆ ಪ್ರಕ್ಷುಬ್ಧವಾಗುತ್ತದೆ ? ಈ ಪ್ರಕ್ಷುಬ್ಧತೆಯನ್ನು ಯಾರು ಹುಟ್ಟಿಸುತ್ತಾರೆ ? ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರೇಮಿಗಳನ್ನು ಎಲ್ಲಿಯವರೆಗೆ ದಾರಿಗೆ ತರುವುದಿಲ್ಲವೋ, ಅಲ್ಲಿಯವರೆಗೆ ಇದೇ ರೀತಿಯಲ್ಲಿ ಮುಂದುವರಿಯುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರಕಾರವು ಕ್ರಮ ಕೈಗೊಳ್ಳಬೇಕು !

ಶ್ರೀನಗರ (ಜಮ್ಮು – ಕಾಶ್ಮೀರ) – ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಜಾರಿಗೆ ಬರುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಜಮ್ಮು – ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಿಡಿಯುವುದಿಲ್ಲ, ಎಂದು ಹೇಳುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ವಿರುದ್ಧ ಭಾಜಪದ ಕಾರ್ಯಕರ್ತರು ಶ್ರೀನಗರದಲ್ಲಿ ಆಂದೋಲನ ನಡೆಸಿದರು, ಅವರು ಇಲ್ಲಿ ತ್ರಿವರ್ಣವನ್ನು ಹಾರಿಸಲು ಪ್ರಯತ್ನಿಸಿದರು. ಈ ಸೂಕ್ಷ್ಮ ಪ್ರದೇಶದಲ್ಲಿ ಪ್ರಕ್ಷುಬ್ಧವಾತಾವರಣ ಉಂಟಾಗಬಹುದು ಎಂದು ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಜಮ್ಮುವಿನ ಪಿಡಿಪಿಯ ಕಚೇರಿಯ ಹೊರಗೆ ಘೋಷಣೆಯನ್ನು ಕೂಗುತ್ತಾ ತ್ರಿವರ್ಣವನ್ನು ಹಾರಿಸಿದ್ದರು.