‘ಲಕ್ಷ್ಮೀ ಬಾಂಬ್’ ಚಲನಚಿತ್ರದ ಮೇಲೆ ನಿಷೇಧ ಹೇರುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಯನ್ನು ಬೆಂಬಲಿಸಿ ನಟಿ ಪಾಯಲ್ ರೋಹತಗಿಯವರಿಂದ ಕರೆ

‘ಲಕ್ಷ್ಮೀ ಬಾಂಬ್’ ಚಲನಚಿತ್ರವನ್ನು ನಿಷೇಧಿಸುವಂತೆ ಗೃಹ ಸಚಿವ ಅನಿಲ್ ದೇಶಮುಖ ಇವರು ಕೇಂದ್ರ ಸರಕಾರಕ್ಕೆ ಪತ್ರ ಕಳುಹಿಸಬೇಕು !

ನಟಿ ಪಾಯಲ್ ರೋಹತಗಿ

ಮುಂಬಯಿ, ಅಕ್ಟೋಬರ್ ೧೯ (ವಾರ್ತೆ) – ‘ಲಕ್ಷ್ಮೀ ಬಾಂಬ್’ ಚಲನಚಿತ್ರದಿಂದ ಹಿಂದೂಗಳ ಭಾವನೆಗಳನ್ನು ನೋಯಿಸಲಾಗಿದೆ. ಇದು ರಾಜಕೀಯದ ವಿಷಯವಲ್ಲ, ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳ ವಿಷಯವಾಗಿದೆ. ನಾವು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳ ಪ್ರಶ್ನೆಯಾಗಿದ್ದು, ಗೃಹ ಸಚಿವ ಅನಿಲ ದೇಶಮುಖರು ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಕಳುಹಿಸುವುದರ ಜೊತೆಗೆ ‘ಲಕ್ಷ್ಮೀ ಬಾಂಬ್’ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಬೇಕು ಎಂದು ನಟಿ ಪಾಯಲ್ ರೋಹತಗಿ ಒತ್ತಾಯಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ‘ಲವ್ ಜಿಹಾದ್’ ಅನ್ನು ಪ್ರೋತ್ಸಾಹಿಸುವ ಹಾಗೂ ಉದ್ದೇಶಪೂರ್ವಕವಾಗಿ ಹಿಂದೂಗಳ ಭಾವನೆಗಳನ್ನು ನೋಯಿಸುವ “ಲಕ್ಷ್ಮೀ ಬಾಂಬ್’ ಚಲನಚಿತ್ರವನ್ನು ನಿಷೇಧಿಸಬೇಕು’, ಎಂದು ಅವರು ಗೃಹ ಸಚಿವ ಅನಿಲ್ ದೇಶಮುಖ ಅವರಿಗೆ ಮನವಿ ನೀಡುವ ಮೂಲಕ ತಿಳಿಸಿದ್ದಾರೆ. ಈ ಮನವಿಯನ್ನು ಉಲ್ಲೇಖಿಸಿ ನಟಿ ಪಾಯಲ್ ರೋಹತಗಿಯವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳನ್ನು ಬೆಂಬಲಿಸಿದ್ದಾರೆ.

ಅನಿಲ ದೇಶಮುಖ

ಸಾಮಾಜಿಕ ಮಾಧ್ಯಮದಲ್ಲಿರುವ ಬೆಂಬಲಿಗರಿಗೆ ಇದರ ಬಗ್ಗೆ ತಿಳಿಯಬೇಕು, ಅದಕ್ಕಾಗಿ ಪಾಯಲ್ ರೋಹತಗಿಯವರು ವಿಡಿಯೋವನ್ನು ತಯಾರಿಸಿ ಪ್ರಸಾರ ಮಾಡಿದ್ದಾರೆ. ಇದರಲ್ಲಿ ನಟಿ ಪಾಯಲ್ ಇವರು ಹಿಂದೂ ಜನಜಾಗೃತಿ ಸಮಿತಿಯ ಮನವಿಯಲ್ಲಿನ ಈ ಕೆಳಗಿನ ಅಂಶಗಳನ್ನು ಬೆಂಬಲಿಸಿದ್ದಾರೆ.

೧. ‘ಲಕ್ಷ್ಮೀ ಬಾಂಬ್’ ಎಂಬ ಹೆಸರಿನಿಂದಾಗಿ ‘ಲಕ್ಷ್ಮೀ ಪಟಾಕಿ’ ಎಂಬ ಲಕ್ಷ್ಮೀ ದೇವಿಯನ್ನು ಅವಮಾನಿಸುವ ಪಟಾಕಿಗಳಿಗೆ ಪ್ರೋತ್ಸಾಹ ಸಿಗಬಹುದು.

೨. ‘ಲಕ್ಷ್ಮೀ ಬಾಂಬ್’ ಹೆಸರಿನಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಿರುವವರು ಈದ್ ಸಂದರ್ಭದಲ್ಲಿ ‘ಆಯೆಷಾ ಬಾಂಬ್’, ‘ಶಬಿನಾ ಬಾಂಬ್’, ‘ಸಲ್ಮಾ ಬಾಂಬ್’, ‘ಫಾತಿಮಾ ಬಾಂಬ್’ ಮುಂತಾದ ಹೆಸರುಗಳ ಚಲನಚಿತ್ರಗಳನ್ನು ಮಾಡುವ ಧೈರ್ಯವನ್ನು ತೋರಿಸುತ್ತಾರೆಯೇ ? ಹಾಗೂ ಚಲನಚಿತ್ರ ಪರಿಕ್ಷಣಾ ಮಂಡಳಿಯು ಅಂತಹ ಹೆಸರನ್ನು ಅನುಮೋದಿಸಬಹುದೇ ? ಅದೇರೀತಿ ಇಂತಹ ಚಲನಚಿತ್ರಗಳ ಪ್ರದರ್ಶನಕ್ಕೆ ಗೃಹ ಸಚಿವಾಲಯವು ಅವಕಾಶ ನೀಡುತ್ತದೆಯೇ ?

೩. ‘ಮೊಹಮ್ಮದ : ದಿ ಮೆಸೆಂಜರ್ ಆಫ್ ಗಾಡ್’ ಚನಲಚಿತ್ರದಿಂದ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಚಿತ್ರವನ್ನು ನಿಷೇದಿಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ ದೇಶಮುಖ ಅವರು ಕೇಂದ್ರ ಸರಕಾರದ ಬಳಿ ಒತ್ತಾಯಿಸಿದ್ದರು, ಅದೇ ರೀತಿ “ಲಕ್ಷ್ಮೀ ಬಾಂಬ್’ ಚಲನಚಿತ್ರಕ್ಕೂ ನಿಷೇಧ ಹೇರಬೇಕೆಂದು ಒತ್ತಾಯಿಸಬಹುದು.

೪. ಈ ಚಿತ್ರದಲ್ಲಿ ಮುಸ್ಲಿಂ ಯುವಕರು ಮತ್ತು ಹಿಂದೂ ಯುವತಿಯ ನಡುವಿನ ಸಂಬಂಧವನ್ನು ತೋರಿಸಿ ‘ಲವ್ ಜಿಹಾದ್’ ಗೆ ಪ್ರೋತ್ಸಾಹ ನೀಡಲಾಗಿದೆ. ಇದು ಅತ್ಯಂತ ಗಂಭೀರವಾಗಿದೆ. ಇದು ಹಿಂದೂ-ಮುಸ್ಲಿಂ ಐಕ್ಯತೆಯ ಹೆಸರಿನಲ್ಲಿ ಅಂತರವನ್ನು ಸೃಷ್ಟಿಸುವ ಒಂದು ಮಾರ್ಗವಾಗುತ್ತಿದೆ.