|
ರೇವಾ (ಮಧ್ಯಪ್ರದೇಶ) – ಇಲ್ಲಿಯ ೨೨ ವರ್ಷದ ಯುವತಿಯನ್ನು ಇಬ್ಬರು ಅಪಹರಿಸಿ ಅವರಲ್ಲಿ ಒಬ್ಬನು ಅತ್ಯಾಚಾರ ಮಾಡಿರುವ ಹಾಗೂ ನಂತರ ಆಕೆಯ ಜನನಾಂಗಗಳ ಮೇಲೆ ಹರಿತವಾದ ಶಸ್ತ್ರಾಸ್ತ್ರಗಳಿಂದ ಹಲ್ಲೆಗೈದ ಘಟನೆ ನಡೆದಿದೆ. ಯುವತಿಯು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಅಂಕಿತ ರಾವತ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಸಹಚರ ವಂಶಪತಿ ರಾವತ್ ಪರಾರಿಯಾಗಿದ್ದಾನೆ. ಪೀಡಿತೆಯು ಒಂದು ಸಮಾರಂಭವನ್ನು ಮುಗಿಸಿ ಮನೆಗೆ ಮರಳುತ್ತಿದ್ದಳು, ಆಗ ಆಕೆಯನ್ನು ಅಪಹರಿಸಲಾಗಿತ್ತು.