ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡ ಜಮ್ಮು – ಕಾಶ್ಮೀರದ ಒಂದು ಇಸ್ಲಾಮಿಕ್ ಶಾಲೆಯ ೧೩ ವಿದ್ಯಾರ್ಥಿಗಳು

ಮದರಸಾಗಳಲ್ಲಿ ಹಾಗೂ ಇಂತಹ ಶಾಲೆಗಳಲ್ಲಿ ಏನು ಕಲಿಸಲಾಗುತ್ತದೆ, ಎಂಬುದನ್ನು ಕಂಡುಹಿಡಿಯಬೇಕು ಹಾಗೂ ಅವುಗಳ ಮೇಲೆ ಶಾಶ್ವತವಾಗಿ ನಿರ್ಬಂಧ ಹೇರಬೇಕು !

ಶೋಪಿಯಾ (ಜಮ್ಮು – ಕಾಶ್ಮೀರ) – ಶೋಪಿಯಾ ಜಿಲ್ಲೆಯ ಒಂದು ಇಸ್ಲಾಮಿಕ್ ಶಾಲೆಯ ೧೩ ವಿದ್ಯಾರ್ಥಿಗಳು ಭಯೋತ್ಪಾದಕ ಸಂಘಟನೆಯಲ್ಲಿ ಸೇರಿಕೊಂಡಿರುವುದು ಕಂಡುಬಂದಿದೆ. ಈ ಶಾಲೆಯ ವಿದ್ಯಾರ್ಥಿಗಳು ಮುಖ್ಯವಾಗಿ ಕುಲಗಾಮ್, ಪುಲ್ವಾಮಾ ಮತ್ತು ಅನಂತ್‌ನಾಗ್ ಜಿಲ್ಲೆಯವರಾಗಿದ್ದಾರೆ. ಈ ಶಾಲೆಯಲ್ಲಿ ಉತ್ತರ ಪ್ರದೇಶ, ಕೇರಳ ಹಾಗೂ ತೆಲಂಗಾಣ ಈ ರಾಜ್ಯಗಳ ವಿದ್ಯಾರ್ಥಿಗಳಿದ್ದರು; ಆದರೆ ಕಳೆದ ವರ್ಷ ಕಲಂ ೩೭೦ ರದ್ದಾದ ನಂತರ ಈ ರಾಜ್ಯಗಳಲ್ಲಿಯ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯಕ್ಕೆ ಇಳಿಯಿತು. ಪುಲ್ವಾಮಾದಲ್ಲಿ ಫೆಬ್ರವರಿ ೨೦೧೯ ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಬೆಂಗಾವಲು ಮೇಲೆ ಆತ್ಮಾಹುತಿ ದಾಳಿ ನಡೆಸಿದ ಆರೋಪಿ ಸಜ್ಜಾದ ಭಟ್ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದನು. ನಿಷೇಧಿತ ಅಲ್-ಬದ್ರ್ ಉಗ್ರಗಾಮಿ ಗುಂಪಿನ ಹತ್ಯೆಯಾದ ಕಮಾಂಡರ್ ಜುಬೈರ್ ನೆಂಗರು ಸಹ ಇದೇ ಧಾರ್ಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದನು.