|
|
ಬೆಂಗಳೂರು – ರಕ್ಷಣಾ ಸಚಿವಾಲಯದ ೭೪೪೨೬.೮೮೮ ಚದರ ಮೀಟರ್ ಭೂಮಿಯನ್ನು ಕರ್ನಾಟಕ ಸರಕಾರಕ್ಕೆ ಪರಸ್ಪರ ಮಾರಾಟ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’)ಯು ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ (‘ಸಿ.ಎಸ್.ಐ.ಟಿ.ಎ.’ ನಿಂದ) ೫೯ ಕೋಟಿ ೫೨ ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ‘ಸಿ.ಎಸ್.ಐ.ಟಿ.ಎ.’ಯ ವಿರುದ್ಧ ಅವರು ರಕ್ಷಣಾ ಸಚಿವಾಲಯದ ಭೂಮಿಯನ್ನು ಅಕ್ರಮವಾಗಿ ಹಸ್ತಾಂತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಿಸಿದ್ದು, ತನಿಖೆಯನ್ನು ಆರಂಭಿಸಿದೆ.
‘ಇ.ಡಿ.’ಯು ನೀಡಿದ ಮಾಹಿತಿಗನುಸಾರ,
೧. ರಕ್ಷಣಾ ಸಚಿವಾಲಯವು ಈ ಭೂಮಿಯನ್ನು ‘ಆಲ್ ಸೇಂಟ್ಸ್ ಚರ್ಚ್’ಗೆ ಬಾಡಿಗೆಗೆ ನೀಡಿತ್ತು. ಹೀಗಿರುವಾಗ ಈ ಭೂಮಿಯ ಮಾಲಿಕತ್ವವು ಕಾನೂನಿನ ಪ್ರಕಾರ ರಕ್ಷಣಾ ಸಚಿವಾಲಯದ ಬಳಿ ಶಾಶ್ವತವಾಗಿತ್ತು. (ಈ ಭೂಮಿ ಕ್ರೈಸ್ತ ಚರ್ಚ್‌ಗೆ ಯಾರು, ಯಾರ ಆಡಳಿತಾವಧಿಯಲ್ಲಿ ಹಾಗೂ ಹೇಗೆ ನೀಡಿದರು ?, ಇವೆಲ್ಲದರ ವಿವರವು ಜನರ ಮುಂದೆ ಬರಬೇಕು ! – ಸಂಪಾದಕರು)
೨. ೨೦೧೯ ರಲ್ಲಿ ‘ಚರ್ಚ್ ಆಫ್ ಸೌಥ್ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನ ‘ಆಲ್ ಸೇಂಟ್ಸ್ ಚರ್ಚ್’ನ ಭೂಮಿಯನ್ನು ಕರ್ನಾಟಕ ರಾಜ್ಯ ಸರಕಾರದ ‘ಬೆಂಗಳೂರು ಮೆಟ್ರೊ ರೇಲ್ ನಿಗಮ ಲಿಮಿಟೆಡ್’(ಬಿ.ಎಮ್.ಆರ್.ಸಿ.ಎಲ್.) ಈ ಸಂಸ್ಥೆಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿತ್ತು. (ನಾವು ಖರೀದಿ ಮಾಡಿದ ಭೂಮಿಯು ಯಾರ ಮಾಲಿಕತ್ವದಲ್ಲಿದೆ ?, ಈ ಸಾಮಾನ್ಯ ವಿಷಯವನ್ನು ‘ಬೆಂಗಳೂರು ಮೆಟ್ರೊ ರೇಲ್ ನಿಗಮ ಲಿಮಿಟೆಡ್’ನವರು ನೋಡಲಿಲ್ಲವೇ ? ಅಥವಾ ನೋಡಿಯೂ ಅದರತ್ತ ನಿರ್ಲಕ್ಷ ವಹಿಸಿದರೆ ?, ಇದೂ ಜನರ ಮುಂದೆ ಬರಬೇಕಿದೆ ! – ಸಂಪಾದಕರು) ಈ ಬಗ್ಗೆ ‘ಚರ್ಚ್ ಆಫ್ ಸೌಥ್ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ ೫೯ ಕೋಟಿ ೨೯ ರೂಪಾಯಿ ಪಡೆದುಕೊಂಡಿತು. (‘ಚರ್ಚ್ ಆಫ್ ಸೌಥ್ ಇಂಡಿಯಾ ಟ್ರಸ್ಟ್ ಅಸೋಸೊಯೇಶನ’ನ ಕುತಂತ್ರ ಅರಿಯಿರಿ ! – ಸಂಪಾದಕರು) ಬಿ.ಎಮ್.ಆರ್.ಸಿ.ಎಲ್. ಈ ಭೂಮಿಯನ್ನು ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ’ಯ (‘ಕೆಐಎಡಿಬಿ’ಯ) ಮಾಧ್ಯಮದಿಂದ ಪಡೆದುಕೊಂಡಿತು.
೩. ‘ಇ.ಡಿ.’ಯು ಈ ಪ್ರಕರಣದ ತನಿಖೆಯನ್ನು ಮಾಡಿದಾಗ ‘ಕಾನೂನಿನ ಪ್ರಕಾರ ಈ ಭೂಮಿಯ ಮಾಲಿಕತ್ವ ಭಾರತ ಸರಕಾರದ ರಕ್ಷಣಾ ಸಚಿವಾಲಯದ ಬಳಿ ಇದ್ದು ಅದು ಧಾರ್ಮಿಕ ಕಾರ್ಯಕ್ಕಾಗಿ ‘ಆಲ್ ಸೇಂಟ್ಸ್ ಚರ್ಚ್’ಗೆ ನೀಡಲಾಗಿತ್ತು’, ಎಂಬುದು ಕಂಡುಬಂದಿದೆ. (ರಕ್ಷಣಾ ಸಚಿವಾಲಯವನ್ನು ಮೋಸಗೊಳಿಸಿದ ‘ಆಲ್ ಸೇಂಟ್ಸ್’ ಚರ್ಚ್ ಮೇಲೆಯೂ ಸರಕಾರ ನಿಷೇಧ ಹೇರಬೇಕು ! – ಸಂಪಾದಕರು)
೪. ಈ ಭೂಮಿಯ ಕಾನೂನುಬದ್ಧ ಮಾಲಿಕತ್ವವು ರಕ್ಷಣಾ ಸಚಿವಾಲಯದ ಬಳಿ ಇರುವುದರಿಂದ ಪರಿಹಾರದ ಮೊತ್ತ ಭಾರತದ ‘ಏಕೀಕೃತ ನಿಧಿ’ಗೆ ಹೋಗಬೇಕಿತ್ತು. ‘ಇ.ಡಿ.’ಯು ಬಡ್ಡಿ ಸಹಿತ ೫೯ ಕೋಟಿ ೫೨ ಲಕ್ಷ ರೂಪಾಯಿಗಳನ್ನು ಜಪ್ತಿಮಾಡಿದ್ದು ಈ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟರ್ಮ್ ಠೇವಣಿಯ ರೂಪದಲ್ಲಿದೆ. ‘ಮನಿ ಲ್ಯಾಂಡರಿಂಗ್ ಪ್ರಾವಿಶನ ಆಕ್ಟ್ ೨೦೦೦’ ಈ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
Enforcement Directorate has attached assets worth Rs 59.52 crore of the Church of South India Trust Association under provisions of the Prevention of Money Laundering Act, 2002.@santwana99https://t.co/QOUt50uO7b
— TNIE Karnataka (@XpressBengaluru) September 10, 2020