ಶ್ರೀಲಂಕಾದಲ್ಲಿ ಗೋಹತ್ಯಾನಿಷೇಧ ಇರಲಿದೆ; ಆದರೆ ಗೋವಂಶದ ಮಾಂಸವನ್ನು ತಿನ್ನಲು ಮಾತ್ರ ಅನುಮತಿ ಅಬಾಧಿತ

  • ಗೋವಂಶದ ಮಾಂಸದ ಆಮದಿಗೆ ನಿಷೇಧವಿಲ್ಲ

  • ಬೌದ್ಧ ಧರ್ಮದವರಿಂದ ಗೋಹತ್ಯೆಯ ಮೇಲೆ ನಿಷೇಧ ಹೇರಲು ಆಗ್ರಹ

  • ಗೋಮಾತೆಗೆ ವಿಶೇಷ ಮಹತ್ವವಿರುವ ಭಾರತದಲ್ಲಿ ಸ್ವಾತಂತ್ರ್ಯದ ೭೩ ವರ್ಷಗಳ ನಂತರವೂ ರಾಷ್ಟ್ರಮಟ್ಟದಲ್ಲಿ ಗೋಹತ್ಯಾ ನಿಷೇಧ ಜಾರಿಯಾಗದಿರುವುದು, ಇದು ಇಲ್ಲಿಯ ವರೆಗಿನ ಆಡಳಿತವರ್ಗದವರಿಗೆ ನಾಚಿಕೆಯ ವಿಷಯವಾಗಿದೆ ! ಚಿಕ್ಕ ಶ್ರೀಲಂಕಾಗೆ ಸಾಧ್ಯವಿರುವುದು ಭಾರತಕ್ಕೆ ಏಕೆ ಸಾಧ್ಯವಿಲ್ಲ ? 
  • ಭಾರತದಲ್ಲಿ ಹುಲಿಯ ಅಥವಾ ಜಿಂಕೆಗಳನ್ನು ಬೇಟೆ ಮಾಡಿದರೆ, ಅದನ್ನು ಪ್ರಾಣಿಪ್ರಿಯ ಸಂಘಟನೆಗಳು, ಸರಕಾರ, ಸುದ್ಧಿಸಂಸ್ಥೆಗಳು ಕೂಡಲೇ ವರದಿ ಮಾಡುತ್ತವೆ; ಆದರೆ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆಯಾಗುತ್ತಿದ್ದರೂ ಇವುಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಕೋಲಂಬೊ – ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಇವರು ಇಡೀ ಶ್ರೀಲಂಕಾದಲ್ಲಿ ಗೋಹತ್ಯೆಯ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜಪಕ್ಷೆ ಇವರು ತಮ್ಮ ಆಢಳಿತಾರೂಢ ‘ಶ್ರೀಲಂಕಾ ಪೊಡುಜನಾ ಪೆರುಮನಾ’ (ಎಸ್.ಎಲ್.ಪಿ.ಪಿ.) ಪಕ್ಷದ ಸಂಸದೀಯ ಸಭೆಯಲ್ಲಿ ಈ ಘೋಷಣೆ ಮಾಡಿದರು. ಗೋಹತ್ಯೆಯನ್ನು ನಿಷೇಧಿಸಿದರೂ, ಗೋವಂಶದ ಮಾಂಸದ ಆಮದಿನ ಮೇಲೆ ಅದೇರೀತಿ ಗೋವಂಶದ ಮಾಂಸ ಸೇವನೆ ಮೇಲೆ ನಿಷೇಧವಿಲ್ಲ, ಎಂದೂ ಅವರು ಸ್ಪಷ್ಟಪಡಿಸಿದರು.

ರಾಜಪಕ್ಷೆಯವರ ಸರಕಾರ ಕೂಡಲೇ ಈ ಬಗ್ಗೆ ಒಂದು ಮಸೂದೆಯನ್ನು ತರಲಿದೆ. ಶ್ರೀಲಂಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ಬೌದ್ಧ ಧರ್ಮದವರು ವಾಸವಾಗಿದ್ದಾರೆ. ಅಲ್ಲಿ ಶೇ. ೯೦ ಕ್ಕೂ ಹೆಚ್ಚು ಜನರು ಮಾಂಸಾಹಾರವನ್ನು ಸೇವಿಸುತ್ತಾರೆ. ಹಿಂದೂ ಹಾಗೂ ಬೌದ್ಧ ಧರ್ಮದ ಸಮುದಾಯದಲ್ಲಿ ಮಾತ್ರ ಗೋಮಾಂಸ ಸೇವಿಸುವುದಿಲ್ಲ ಎಂದು ಹೇಳಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಬೌದ್ಧ ಧರ್ಮದವರಿಂದ ಗೋಹತ್ಯೆಯನ್ನು ನಿಷೇಧ ಹೇರುವಂತೆ ಆಗ್ರಹಿಸಲಾಗುತ್ತಿತ್ತು.