ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ
|
ಚೆನ್ನೈ (ತಮಿಳುನಾಡು) – ಕೆಲವು ತಿಂಗಳ ಹಿಂದೆ ಕ್ರೈಸ್ತ ಮಿಶನರಿಗಳು ಪ್ರಾಚೀನ ಶ್ರೀ ಉಚ್ಛಿಷ್ಟ ವಿನಾಯಗರ ದೇವಸ್ಥಾನದ ಪರಿಸರದ ರಾಜಾಗೋಪುರಮ್‌ನ ಹತ್ತಿರದಲ್ಲೇ ಒಂದು ಸ್ಮಶಾನವನ್ನು ನಿರ್ಮಿಸಿದ್ದಾರೆ. ಅಲ್ಲಿ ಅವರು ಮೃತದೇಹವನ್ನು ಹುತು ಹಾಕಲು ಆರಂಭಿಸಿದ್ದಾರೆ. ಈ ಸ್ಥಳವನ್ನು ನಂತರ ಚರ್ಚ್‌ವನ್ನಾಗಿಯೂ ಮಾಡಬಹುದು, ಎಂದು ಹೇಳಲಾಗುತ್ತಿದೆ. ದೇವಸ್ಥಾನ ಪರಿಸರದ ಭೂಮಿಯ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣವನ್ನು ಪಡೆಯಲಾಗುತ್ತಿದೆ. ದೇವಸ್ಥಾನ ಹಾಗೂ ಸ್ಮಶಾನದ ಅಂತರ ಕೇವಲ ೧೦ ಮೀಟರ ಇದೆ. ಸ್ಮಶಾನಕ್ಕಾಗಿ ಆಡಳಿತವರ್ಗದವರಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದಿದ್ದರೂ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಗೂಂಡಾಗಳ ಸಹಾಯದಿಂದ ಭೂ ಮಾಲಿಕರು ಭಕ್ತರಿಗೆ ಬೆದರಿಸುತ್ತಿದ್ದಾರೆ.
Cemetery being built by Christian fundamentalist groups right infront of Manimoortheswara Uchishta Ganapaty temple Tirunelveli , in temple land taken over by fraud.#ReclaimTemples pic.twitter.com/CQqOR1WZqR
— Reclaim Temples (@ReclaimTemples) April 7, 2018
೧. ಶ್ರೀ ಉಚ್ಛಿಷ್ಟ ವಿನಾಯಗರ ದೇವಸ್ಥಾನ ೮ ಎಕರೆ ಕ್ಷೇತ್ರದಲ್ಲಿ ವಾಸವಾಗಿರುವ ಸಂಪೂರ್ಣ ಏಶಿಯಾದ ಎಲ್ಲಕ್ಕಿಂತ ದೊಡ್ಡ ವಿನಾಯಗರ ದೇವಸ್ಥಾನವಾಗಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ನವೀಕರಣ ೨೦೧೬ ರಲ್ಲಿ ಮಾಡಲಾಗಿತ್ತು. ಈ ದೇವಸ್ಥಾನ ತಮಿಳುನಾಡುವಿನ ತಿರುನೆಲವೆಲಿ ಜಂಕ್ಷನ್ ಹತ್ತಿರದ ಥಮಿರ ಭಾರಾಣಿ ನದಿಯ ದಡದಲ್ಲಿದ್ದು ಇದು ೧ ಸಾವಿರದ ೨೦೦ ವರ್ಷಗಳಷ್ಟು ಹಳೆಯದಾಗಿದೆ. ಈ ಸ್ಥಳದಲ್ಲಿ ಸುಮಾರು ೧೫೦ ಹಿಂದೂ ಕುಟುಂಬದವರು ವಾಸವಾಗಿದ್ದಾರೆ.