ಮತಾಂಧರಿಗೆ ತಮ್ಮ ಧರ್ಮವೇ ಮೊದಲು, ಎಂಬುದನ್ನು ಸಾಬೀತು ಪಡಿಸುವ ಘಟನೆ !

  • ಬಾಬರಿ ಮಸೀದಿಯನ್ನು ನೆಲಸಮಗೊಳಿಸಲು ಕಾರಣಕರ್ತರು ಎಂದು ಹೇಳಿದೆ

  • ಎಮ್.ಐ.ಎಮ್.ನ ಶಾಸಕರಿಂದ ಸಭಾತ್ಯಾಗ

  • ಬಾಬರಿಯನ್ನು ನೆಲಸಮ ಗೊಳಿಸಿರುವುದನ್ನು ಮರೆಯದಿರುವ ಎಮ್.ಐ.ಎಮ್.ನವರು ಹಿಂದೂಗಳೂ ರಾಮಮಂದಿರವನ್ನು ಬಾಬರನು ನೆಲಸಮ ಗೊಳಿಸಿರುವುದನ್ನು ಎಂದಿಗೂ ಮರೆಯುವುದಿಲ್ಲ, ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !
  • ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಇವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡುವ ಬಗ್ಗೆ ಎಮ್.ಐ.ಎಮ್.ನಿಂದ ವಿರೋಧ

ಭಾಗ್ಯನಗರ – ದೇಶದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವ ಬಗ್ಗೆ ಕೇಂದ್ರ ಸರಕಾರದ ಬಳಿ ಆಗ್ರಹಿಸಿದ ತೆಲಂಗಾಣ ಸರಕಾರದ ಪ್ರಸ್ತಾಪಕ್ಕೆ ಮತಾಂಧ ಎಮ್.ಐ.ಎಮ್. ಪಕ್ಷವು ವಿರೋಧಿಸಿದೆ ಮತ್ತು ಅದನ್ನು ಖಂಡಿಸಲು ಎಮ್.ಐ.ಎಮ್.ನ ಶಾಸಕರು ತೆಲಂಗಾಣ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು. ಈ ಪ್ರಸ್ತಾಪವನ್ನು ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಈ ಬಗ್ಗೆ ಎಮ್.ಐ.ಎಮ್.ನ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಯ್ಯದ ಅಹಮದ ಪಾಶಾ ಕಾದರಿ ಇವರು ಎ.ಎನ್.ಐ. ಈ ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡುತ್ತಿರುವಾಗ, ನರಸಿಂಹ ರಾವ್ ಇವರ ನಿಧನದ ನಂತರ ಫೆಬ್ರವರಿ ೧೫, ೨೦೦೫ ರಂದು ಆಗಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರು ಶೋಕಾಚರಣೆಯನ್ನು ಮಂಡಿಸಿದ್ದರು, ಆ ಸಮಯದಲ್ಲಿ ನಮ್ಮ ಪಕ್ಷದವರು ತಮ್ಮ ನಿಲುವನ್ನು ಸ್ಪಷ್ಟ ಮಾಡಿದ್ದರು. ಪಕ್ಷದ ಮುಖಂಡ ಅಕಬರುದ್ದೀನ್ ಓವೈಸಿ ಇವರು ‘ಬಾಬರಿ ಮಸೀದಿ ನೆಲಸಮಗೊಳಿಸಿದ್ದರಿಂದ ಭಾರತೀಯ ಮುಸಲ್ಮಾನರು ಇಂದಿಗೂ ಸಹ ಮಾಜಿ ಪ್ರಧಾನಿ ನರಸಿಂಹ ರಾವ್ ಇವರ ಮೇಲೆ ಅಸಮಧಾನ ಗೊಂಡಿದ್ದಾರೆ’ ಎಂದು ಹೇಳಿದ್ದರು, ಎಂದು ಹೇಳಿದರು. ಕಾದರಿ ತಮ್ಮ ಮಾತನ್ನು ಮುಂದುವರೆಸುತ್ತಾ ಬಾಬರಿ ಮಸೀದಿಯನ್ನು ನೆಲಸಮ ಮಾಡಿರುವ ಘಟನೆ ಇತಿಹಾಸದಲ್ಲಿ ಎಂದಿಗೂ ಮರೆಯುವುದಿಲ್ಲ. ಈ ಘಟನೆ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಇವರ ನಿಷ್ಕ್ರೀಯತೆಯಿಂದ ಆಗಿತ್ತು. ನರಸಿಂಹ ರಾವ್ ಇವರು ಹಿಂದುತ್ವನಿಷ್ಠ ಶಕ್ತಿಯ ಉದಯಕ್ಕೆ ಕಾರಣಕರ್ತರಾಗಿದ್ದಾರೆ’ ಎಂದು ಹೇಳಿದರು.