ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಕಥೆ, ನಾಟಕಗಳು, ಕಾದಂಬರಿಗಳು, ಚಲನಚಿತ್ರ, ದೂರದರ್ಶನ ವಾಹಿನಿಯ ಮಾಲಿಕೆಗಳು ಇತ್ಯಾದಿಗಳಲ್ಲಿ ಅಧೋಗತಿಗೆ ಹೋದ ಸಮಾಜದ ಪ್ರತಿಬಿಂಬವನ್ನು ತೋರಿಸದೇ ಅವುಗಳಲ್ಲಿ ಸಮಾಜಕ್ಕೆ ದಿಶೆಯನ್ನು ನೀಡುವ ಆದರ್ಶ ಸಮಾಜವನ್ನು ತೋರಿಸುವುದು ಅಪೇಕ್ಷಿತವಿದೆ.
‘ಸರ್ವಧರ್ಮಸಮಭಾವ’ ಎಂದು ಹೇಳುವವರು ‘ಕಪ್ಪು ಮತ್ತು ಬಿಳಿ ಬಣ್ಣಗಳು ಒಂದೇ ರೀತಿ ಕಾಣಿಸುತ್ತವೆ ಎಂದು ಹೇಳುವ ಕುರುಡರಂತೆ ಇರುತ್ತಾರೆ !’
ಸತ್ಯಯುಗದಲ್ಲಿ ದಿನಪತ್ರಿಕೆ, ದೂರದರ್ಶನ, ಜಾಲತಾಣ ಮುಂತಾದವುಗಳ ಆವಶ್ಯಕತೆಯೇ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳು ಇರುತ್ತಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುತ್ತಿದ್ದುದರಿಂದ ಆನಂದದಿಂದ ಇದ್ದರು.
ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವೈಜ್ಞಾನಿಕರು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ