ಬೆಂಗಳೂರು ಗಲಭೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಇವುಗಳ ಹೆಸರನ್ನು ಪ್ರಸ್ತಾಪಿಸಿದರೆ ಗೌರಿ ಲಂಕೇಶ ಮಾದರಿಯಲ್ಲಿ ಹತ್ಯೆ ಮಾಡುತ್ತೇವೆ !

‘ದಿಗ್ವಿಜಯ’ ಈ ಕನ್ನಡ ವಾರ್ತಾವಾಹಿನಿಯ ನಿರೂಪಕ ರಕ್ಷತ ಶೆಟ್ಟಿಗೆ ಬೆದರಿಕೆ !

  • ಒಂದು ವಾರ್ತಾವಾಹಿನಿಯ ಪತ್ರಕರ್ತನಿಗೆ ಮತಾಂಧರಿಂದ ಜೀವಬೆದರಿಕೆ ಬರುತ್ತಿದ್ದರೂ ರಾಜದೀಪ ಸರದೇಸಾಯಿ, ರವೀಶ ಕುಮಾರ, ಬರಖಾ ದತ್ತ ಮುಂತಾದ ತಥಾಕಥಿತ ಜಾತ್ಯತೀತ ಪತ್ರಕರ್ತರು ತುಟಿ ಬಿಚ್ಚುವುದಿಲ್ಲ ಎಂಬುದನ್ನು ಗಮನದಲ್ಲಿಡಿ !
  • ಈ ಬೆದರಿಕೆಯಿಂದ ಗೌರಿ ಲಂಕೇಶರ ಹತ್ಯೆಯನ್ನು ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಇದರ ಬೆಂಬಲಿಗರು ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯಾಗದು ! ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಹಿಂದುತ್ವನಿಷ್ಠರ ಹಿಂದೆ ವಿಚಾರಣೆಗಳ ಸರಣಿ ಹೆಣೆದು ಅವರನ್ನು ಪೀಡಿಸಿದ ಪೊಲೀಸರು ಈ ಪ್ರಕರಣದ ಬಗ್ಗೆ ಈ ನಿಟ್ಟಿನಲ್ಲಿಯೂ ತನಿಖೆ ಮಾಡುವುದು ಆವಶ್ಯಕ !
  • ವಾರ್ತಾವಾಹಿನಿಗಳ ಪತ್ರಕರ್ತರು ಮತಾಂಧರ ಸಂಘಟನೆಗಳ ಹೆಸರು ಹೇಳಿದರೆಂದು ಬೆದರಿಕೆ ಬರುವುದು, ದುರ್ದೈವವಾಗಿದೆ ! ಭಾಜಪ ಸರಕಾರವು ಈ ಪ್ರಕರಣದ ಮೂಲಕ್ಕೆ ಹೋಗಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಪತ್ರಕರ್ತರಿಗೆ ಅಭಯ ನೀಡುವುದು ಅಪೇಕ್ಷಿತವಿದೆ.

ಬೆಂಗಳೂರು – ಇಲ್ಲಿನ ಗಲಭೆಯ ಪ್ರಕರಣದಲ್ಲಿ ದಿಗ್ವಿಜಯ ವಾರ್ತಾವಾಹಿನಿಯ ನಿರೂಪಕರಾದ ರಕ್ಷತ ಶೆಟ್ಟಿ ಇವರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಗಲಭೆಯ ಸಂಬಂಧಿಸಿದಂತೆ ಮತಾಂಧರ ಸಂಘಟನೆಗಳಾದ ‘ಸೋಶಲ್ ಡೆಮೊಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ’ ಮತ್ತು ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಗಳ ಹೆಸರುಗಳನ್ನು ಪ್ರಸ್ತಾಪಿಸಿದರೆ ಪತ್ರಕರ್ತೆ ಗೌರಿ ಲಂಕೇಶ ಅವರ ರೀತಿಯಲ್ಲಿಯೇ ಹತ್ಯೆಯನ್ನು ಮಾಡುವುದಾಗಿ’, ಎಂದು ಓರ್ವ ಅನಾಮಿಕರು ದೂರವಾಣಿ ಕರೆಯಲ್ಲಿ ಬೆದರಿಕೆಯೊಡ್ಡಿದ್ದಾರೆ. ಸೋಶಿಯಲ್ ಡೆಮೊಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಗಲಭೆಗೆ ಪ್ರಚೋದನೆ ನೀಡಿದ ಬಗ್ಗೆ ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ತಾವಾಹಿನಿಯಲ್ಲಿ ಇದರ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು. ಅದರ ನಂತರ ರಕ್ಷತ ಶೆಟ್ಟಿ ಇವರಿಗೆ ಬೆದರಿಕೆ ಬರತೊಡಗಿದವು. ಸಾಮಾಜಿಕ ಮಾಧ್ಯಮಗಳಿಂದಲೂ ರಕ್ಷತ ಶೆಟ್ಟಿ ಇವರಿಗೆ ಬೆದರಿಕೆ ನೀಡುವ ಬರವಣಿಗೆಗಳು ಪ್ರಸಾರವಾಗುತ್ತಿವೆ.