ರಾಮರಾಜ್ಯವನ್ನು ತರಲು ಅಯೋಧ್ಯೆಯಲ್ಲಿ ಭವ್ಯ ಗುರುಕುಲವನ್ನು ನಿರ್ಮಿಸುವೆವು ! – ಯೋಗಋಷಿ ರಾಮದೇವ ಬಾಬಾ!

ಅಯೋಧ್ಯೆ – ನಮಗೆ ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ನೋಡಲು ಸಿಕ್ಕಿತು, ಇದು ನಮ್ಮೆಲ್ಲರ ಪರಮಭಾಗ್ಯವಾಗಿದೆ. ಈಗ ದೇಶದಲ್ಲಿ ರಾಮರಾಜ್ಯವನ್ನು ತರಲು ಪತಂಜಲಿ ಯೋಗಪೀಠವು ಅಯೋಧ್ಯೆಯಲ್ಲಿ ಒಂದು ಭವ್ಯದಿವ್ಯ ಗುರುಕುಲವನ್ನು ನಿರ್ಮಿಸುವುದು ಎಂದು ಯೋಗಋಷಿ ರಾಮದೇವ ಬಾಬಾರವರು ಇಲ್ಲಿ ಘೋಷಿಸಿದರು. ‘ಪತಂಜಲಿಯ ಗುರುಕುಲದಲ್ಲಿ ಜಗತ್ತಿನಾದ್ಯಂತದ ಜನರು ವೇದ ಮತ್ತು ಆಯುರ್ವೇದವನ್ನು ಅಧ್ಯಯನ ಮಾಡಬಹುದು’ ಎಂದು ಅವರು ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಇಂದಿನ ದಿನ ಒಂದು ಐತಿಹಾಸಿಕ ದಿನವಾಗಿದೆ. ಈ ದಿನವು ಶಾಶ್ವತವಾಗಿ ಎಲ್ಲರ ನೆನಪಿನಲ್ಲಿ ಉಳಿಯುವುದು.’ ರಾಮಮಂದಿರದಿಂದಾಗಿ ದೇಶದಲ್ಲಿ ‘ರಾಮರಾಜ್ಯ’ ಸ್ಥಾಪನೆಯಾಗುವುದು ಎಂದು ನನಗೆ ಖಚಿತವಿದೆ’ ಎಂದು ಅವರು ಹೇಳಿದರು.

ಕಾಶಿ ಮತ್ತು ಮಥುರಾದಲ್ಲಿನ ಅತಿಕ್ರಮಣಗಳೂ ದೂರವಾಗಲಿವೆ !

‘ಭಾರತದಲ್ಲಿನ ಧಾರ್ಮಿಕ ಸ್ಥಳಗಳ ಮೇಲೆ ಹಿಂದಿನ ಅನೇಕ ಶತಮಾನಗಳಿಂದ ಅತಿಕ್ರಮಣವಾಗಿವೆ. ಕಾಶಿ ಮತ್ತು ಮಥುರಾದಲ್ಲಿನ ಅತಿಕ್ರಮಣಗಳು ಕೂಡ ದೂರವಾಗುವವು. ಭಾರತದ ಗೌರವಶಾಲಿ ಧಾರ್ಮಿಕ ಸ್ಥಳಗಳ ಪುನರ್‌ಸ್ಥಾಪನೆಯನ್ನು ಮಾಡಲಾಗುವುದು’ ಎಂದು ರಾಮದೇವ ಬಾಬಾರವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.