ಧರ್ಮನಿಂದನೆಯ ಆರೋಪವಿರುವ ಅಮೇರಿಕಾದ ನಾಗರಿಕನಿಗೆ ಪಾಕಿಸ್ತಾನ ನ್ಯಾಯಾಲಯದಲ್ಲಿ ಗುಂಡಿಕ್ಕಿ ಹತ್ಯೆ

ಎಲ್ಲಿ ತಮ್ಮ ಶ್ರದ್ಧಾಸ್ಥಾನಗಳ ಅವಮಾನವನ್ನು ಸ್ವಲ್ಪವೂ ಸಹಿಸದ ಪಾಕಿಸ್ತಾನದ ಮುಸಲ್ಮಾನರು ಮತ್ತು ಎಲ್ಲಿ ಚಲನಚಿತ್ರ, ನಾಟಕ, ಸಾಹಿತ್ಯ, ಜಾಹಿರಾತಿನ ಮಾಧ್ಯಮಗಳಿಂದ ದೇವತೆಗಳ ವಿಡಂಬನೆಯಾಗುತ್ತಿದ್ದರೂ ಅದರ ಬಗ್ಗೆ ಸ್ವಲ್ಪವೂ ಖಂಡಿಸದ ನಿದ್ರಿಸ್ತ ಹಿಂದೂಗಳು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪೇಶಾವರ ಪಟ್ಟಣದಲ್ಲಿ ಒಂದು ನ್ಯಾಯಾಲಯವು ಧರ್ಮನಿಂದನೆಯ ಪ್ರಕರಣದಲ್ಲಿ ಅಮೇರಿಕಾದ ನಾಗರಿಕನ ಮೇಲೆ ನಡೆಯುತ್ತಿದ್ದ ಮೊಕದ್ದಮೆಯ ಆಲಿಕೆಯ ಸಮಯದಲ್ಲಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಪೊಲೀಸರು ಗುಂಡು ಹಾರಿಸಿದ ಖಾಲಿದ ಖಾನ್‌ನನ್ನು ಕೂಡಲೇ ಬಂಧಿಸಿದರು.

ಇಲ್ಲಿ ಬಿಗಿ ಭದ್ರತೆ ಇರುವಾಗ ಖಾನ್ ಹೇಗೆ ತಲುಪಿದ ?, ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹತ್ಯೆಯಾದವನ ಹೆಸರು ತಾಹಿರ ಶಮೀಮ ಅಹಮದ್ ಎಂದು ಇದೆ. ತನ್ನನ್ನು ಪೈಗಂಬರ ಎಂದು ಹೇಳಿಕೊಳ್ಳುತ್ತಿದ್ದ ತಾಹಿರ ಅಹಮದನನ್ನು ೨ ವರ್ಷದ ಹಿಂದೆ ಬಂಧಿಸಲಾಗಿತ್ತು.