ಚೀನಾದಿಂದ ಅಕ್ಸಾಯಿ ಚೀನಾದಲ್ಲಿ ೫೦ ಸಾವಿರ ಸೈನಿಕರ ನೇಮಕ, ಪ್ರತ್ಯುತ್ತರವಾಗಿ ಭಾರತವೂ ‘ಟಿ-೯೦’ ಟ್ಯಾಂಕ್‌ಗಳ ‘ಸ್ಕ್ವಾಡ್ರನ್’ ನೇಮಕ !

ಪ್ರಾತಿನಿಧಕ ಚಿತ್ರ

ಲೇಹ್ (ಲಡಾಖ) – ಚೀನಾವು ಅಕ್ಸಾಯಿ ಚೀನಾದಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದೆ. ಅದಕ್ಕೆ ಪ್ರತ್ಯುತ್ತರ ನೀಡುತ್ತಾ ಭಾರತವೂ ದೌಲತ ಬೇಗ ಓಲ್ಡಿಯಲ್ಲಿ ಕ್ಷಿಪಣಿಗಳನ್ನು ಹಾರಿಸುವ ‘ಟಿ-೯೦’ ಟ್ಯಾಂಕ್‌ಗಳ ಒಂದು ‘ಸ್ಕ್ವಾಡ್ರನ್’ (೧೨ ಟ್ಯಾಂಕ್‌ಗಳು), ಸೇನಾ ವಾಹನ ಹಾಗೂ ೪ ಸಾವಿರ ಸೈನಿಕರ ತುಕಡಿಯನ್ನು ನೇಮಿಸಿದೆ.
ದೌಲತ ಬೇಗ ಓಲ್ಡಿಯಲ್ಲಿ ೧೬ ಸಾವಿರ ಅಡಿ ಎತ್ತರದಲ್ಲಿ ಭಾರತದ ಕೊನೆಯ ಪೋಸ್ಟ್ ಇದೆ. ದಾರಬೂಕ್-ಶ್ಯೋಕ-ಡಿಬಿಒ ರಸ್ತೆಯಲ್ಲಿನ ಕೆಲವು ಸೇತುವೆಗಳು ಟಿ-೯೦ ಟ್ಯಾಂಕ್‌ಗಳ ೪೬ ಟನ್ ತೂಕದ ಭಾರ ತಡೆದುಕೊಳ್ಳುವುದಿಲ್ಲ. ಆದ್ದರಿಂದ ಸೈನಿಕರ ಕಮಾಂಡರ್‌ಗಳು ವಿಶೇಷ ಉಪಕರಣಗಳನ್ನು ಉಪಯೋಗಿಸಿ ನದಿ, ಕಾಲುವೆಗಳ ಮೂಲಕ ಟ್ರಾಂಕರ್‌ಗಳನ್ನು ದೌಲತ ಬೇಗ್ ಓಲ್ಡಿಯ ಕೊನೆಯ ಪೋಸ್ಟ್ ತನಕ ತಲುಪಿಸಿದರು.