‘ಶರಿಯತ್ ಕಾಯ್ದೆಗನುಸಾರ ಇಸ್ಲಾಮಿ ಪ್ರದೇಶಗಳಲ್ಲಿ ದೇವಸ್ಥಾನ ಕಟ್ಟುವುದು ಹರಾಮ್ ಆಗಿದೆ !’ – ಹಿಂದೂದ್ವೇಷಿ ವಿಷ ಕಕ್ಕಿದ ಪ್ರಚಾರಕ ಝಾಕಿರ ನಾಯಿಕ್

  • ಹಜ ಯಾತ್ರೆಗಾಗಿ ಮುಸಲ್ಮಾನರೇತರಿಂದ ಹಣ ಪಡೆಯುವುದು ‘ಹರಾಮ್’ (ನಿಷಿದ್ಧ) ಎಂದು ನಂಬಿರುವಾಗ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಹಜ್ ಯಾತ್ರೆಗಾಗಿ ಹಿಂದೂಗಳಿಂದ ಅನುದಾನವನ್ನು ತೆಗೆದುಕೊಳ್ಳುವಾಗ ಝಾಕಿರ ನಾಯಿಕ್‌ಗೆ ಇದು ‘ಹರಾಮ್’ ಎಂದು ನೆನಪಾಗಲಿಲ್ಲವೇ ? ಮತಾಂಧರು ಸೌಲಭ್ಯವನ್ನು ಪಡೆದುಕೊಳ್ಳಲು ಶರಿಯತ್‌ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾರೆ, ಎಂಬುದನ್ನು ಅರಿಯಿರಿ !

  • ‘ಝಾಕಿರ ನಾಯಿಕ್ ಧಾರ್ಮಿಕ ಆಧಾರದಲ್ಲಿ ಸಮಾಜದಲ್ಲಿ ಭೇದಭಾವ ಹಾಗೂ ಕೋಮುದ್ವೇಷ ಹಬ್ಬಿಸುತ್ತಿದ್ದಾರೆ’, ಎಂಬುದರ ಬಗ್ಗೆ ಪ್ರಗತಿ(ಅಧೋಗತಿ)ಪರರು, ಮತಾಂಧರು, ಹಿಂದೂದ್ವೇಷಿ ಪ್ರಸಾರ ಮಾಧ್ಯಮದವರು, ಪಾಕಿಸ್ತಾನದ ಪರವಾಗಿ ಮಾತನಾಡುವ ಬಾಲಿವುಡ್‌ನ ತಂಡ, ಅದೇರೀತಿ ಓವೈಸಿ, ಶಶಿ ಥರೂರ್‌ನಂತಹ ಜನರು ಏಕೆ ಹೇಳುತ್ತಿಲ್ಲ ?

  • ಎಲ್ಲಿ ‘ವಸುಧೈವ ಕುಟುಂಬಕಮ್’ ನಂತಹ ಉದಾತ್ತ ಹಾಗೂ ವ್ಯಾಪಕತೆಯನ್ನು ಕಲಿಸುವ ಹಿಂದೂ ಧರ್ಮ ಹಾಗೂ ಎಲ್ಲಿ ಇತರ ಧರ್ಮವನ್ನು ದ್ವೇಷಿಸಲು ಕಲಿಸುವ ಇತರ ಪಂಥೀಯರು !

ಕೌಲಾಲಂಪುರ (ಮಲೇಶಿಯಾ) – ಪಾಕಿಸ್ತಾನ ಸರಕಾರ ತನ್ನ ಭೂಮಿಯಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಕಟ್ಟಲು ಆರ್ಥಿಕ ಸಹಾಯ ಮಾಡಿ ಪಾಪವನ್ನು ಮಾಡುತ್ತಿದೆ. ಶರಿಯತ್ ಕಾಯ್ದೆಗನುಸಾರ ಇಸ್ಲಾಮಿ ದೇಶದಲ್ಲಿ ದೇವಸ್ಥಾನವನ್ನು ಕಟ್ಟುವುದು ಹರಾಮ್ ಆಗಿದೆ, ಎಂಬ ಹಿಂದೂದ್ವೇಷಿ ಹೇಳಿಕೆಯನ್ನು ಭಯೋತ್ಪಾದಕರ ‘ಪ್ರೇರಣಾಸ್ಥಾನ’ವಾಗಿರುವ ಇಸ್ಲಾಮಿ ಪ್ರಚಾರಕ ಝಾಕಿರ್ ನಾಯಿಕನು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾನೆ.
ಪಾಕಿಸ್ತಾನದ ಪ್ರಧಾನಮಂತ್ರಿ ಇಮರಾನ್ ಖಾನ್ ಇವರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶ್ರೀಕೃಷ್ಣ ದೇವಸ್ಥಾನ ಕಟ್ಟಲು ೧೦ ಕೋಟಿ ಪಾಕಿಸ್ತಾನಿ ರೂಪಾಯಿ(ಭಾರತದಲ್ಲಿ ೪ ಕೋಟಿ ೪೭ ಸಾವಿರ ರೂಪಾಯಿ) ಆರ್ಥಿಕವಾಗಿ ಸಹಾಯ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೆ ಝಾಕಿರ್ ನಾಯಿಕ್ ‘ಇಸ್ಲಾಮಿ ದೇಶದಲ್ಲಿ ಮುಸಲ್ಮಾನರ ತೆರಿಗೆಯ ಹಣದಿಂದ ದೇವಸ್ಥಾನವನ್ನು ಕಟ್ಟಬಹುದೇ ?’, ಎಂಬ ಪ್ರಶ್ನೆಯನ್ನು ವಿಚಾರಿಸಿದ್ದ. ಅದಕ್ಕೆ ಝಾಕಿರ್ ನಾಯಿಕ ಈ ಮೇಲಿನಂತೆ ಉತ್ತರಿಸಿದ್ದ.

ಇದರ ಬಗ್ಗೆ ವಿಷಕಾರುತ್ತಾ ಹೀಗೆಂದ,

೧. ಓರ್ವ ಮುಸಲ್ಮಾನ ವ್ಯಕ್ತಿ ಮುಸಲ್ಮಾನರೇತರ ಧಾರ್ಮಿಕ ಸ್ಥಳಕ್ಕಾಗಿ ಹಣ ಹಾಗೂ ಬೆಂಬಲ ನೀಡಲು ಸಾಧ್ಯವಿಲ್ಲ. ಇದರ ಬಗ್ಗೆ ಅನೇಕ ಫತ್ವಾಗಳು ಲಭ್ಯವಿದೆ.

೨. ಆದರೂ ಇಸ್ಲಾಮಿ ದೇಶಗಳಲ್ಲಿ ಎಲ್ಲಿಯಾದರೂ ದೇವಸ್ಥಾನ ಅಥವಾ ಚರ್ಚ್ ಕಟ್ಟಿದ್ದಲ್ಲಿ, ಅದನ್ನು ಕೂಡಲೇ ಕೆಡವಲು ನಮಗೆ ಸಂಪೂರ್ಣ ಅಧಿಕಾರ ಇದೆ.

೩. ಇಸ್ಲಾಮಗನುಸಾರ ಹಿಂದೆ ಕಟ್ಟಲಾಗಿದ್ದ ದೇವಸ್ಥಾನ ಅಥವಾ ಚರ್ಚ್‌ಗಳನ್ನು ಹೆಚ್ಚೆಂದರೆ ರಕ್ಷಣೆ ಮಾಡಬಹುದು; ಆದರೆ ಹೊಸದಾಗಿ ದೇವಸ್ಥಾನ ಅಥವಾ ಚರ್ಚ್‌ಗಳನ್ನು ಕಟ್ಟಲು ಬರುವುದಿಲ್ಲ.

೪. ಒಂದುವೇಳೆ ಮುಸಲ್ಮಾನರೇತರು ಇಸ್ಲಾಮೀ ದೇಶಗಳಲ್ಲಿ ಇರಬೇಕಾದಲ್ಲಿ, ಅವರು ‘ಧಿಮ್ಮೀ’ ಹೆಸರಿನ ಒಪ್ಪಂದವನ್ನು ಮಾಡಬೇಕಾಗುತ್ತದೆ, ಈ ಮೂಲಕ ಅವರಿಗೆ ರಕ್ಷಣೆಯನ್ನು ನೀಡಬಹುದು.