-
ಸತತವಾಗಿ ಆಗುತ್ತಿರುವ ಜಿಹಾದಿಗಳ ದಾಳಿಯಿಂದಾಗಿ ಈ ನಿರ್ಧಾರ
-
ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಇವುಗಳೆಲ್ಲ ಹಿಂದೆ ಭಾರತದ ಭಾಗವೇ ಆಗಿತ್ತು ಹಾಗೂ ಅಲ್ಲಿ ಹಿಂದೂಗಳು ದೊಡ್ಡಪ್ರಮಾಣದಲ್ಲಿದ್ದರು; ಆದರೆ ಮತಾಂಧರಿಂದ ಇಲ್ಲಿ ಹಿಂದೂಗಳ ವಂಶನಾಶವಾಗುತ್ತಿದೆ. ಇಂತಹ ಸಮಯದಲ್ಲಿ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡುವುದರೊಂದಿಗೆ ಹಿಂದೂಗಳ ಮೇಲೆ ದೌರ್ಜನ್ಯ ಮಾಡುವ ಅಲ್ಲಿಯ ಭಯೋತ್ಪಾದಕರಿಗೂ ಭಾರತವು ಪಾಠ ಕಲಿಸುವುದು ಅಪೇಕ್ಷಿತವಿದೆ !
ನವ ದೆಹಲಿ – ಅಫ್ಘಾನಿಸ್ತಾನದಲ್ಲಿ ಮತಾಂಧರಿಂದ ಹಾಗೂ ಜಿಹಾದಿ ಭಯೋತ್ಪಾದಕರಿಂದ ಸಿಕ್ಖ್ ಹಾಗೂ ಹಿಂದೂಗಳ ಮೇಲಾಗುತ್ತಿರುವ ದಾಳಿಯಿಂದಾಗಿ ಭಾರತ ಸರಕಾರ ಅಲ್ಲಿರುವ ೭೦೦ ಸಿಕ್ಖ್ ಹಾಗೂ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡಲಿದೆ. ಅದಕ್ಕಾಗಿ ಅವರನ್ನು ಶೀಘ್ರದಲ್ಲೇ ದೆಹಲಿಗೆ ಕರೆತರುವ ವ್ಯವಸ್ಥೆಯನ್ನು ಮಾಡಲಿದೆ.
ಅಫ್ಘಾನಿಸ್ತಾನದಲ್ಲಿ ಸಿಖ್ಖರ ನಾಯಕ ನಿದಾನಸಿಂಹ ಸಚದೇವನ ಬಿಡುಗಡೆ
ಅಫ್ಘಾನಿಸ್ತಾನದ ಸಿಕ್ಖ್ ಹಾಗೂ ಹಿಂದೂಗಳ ನಾಯಕ ನಿದಾನಸಿಂಹ ಸಚದೇವನನ್ನು ಬಿಡುಗಡೆ ಮಾಡಲಾಗಿದೆ. ಜೂನ್ ೨೨ ರಂದು ತಾಲಿಬಾನಿ ಭಯೋತ್ಪಾದಕರು ಅವರ ಅಪಹರಣ ಮಾಡಿದ್ದರು. ನಿದಾನಸಿಂಹ ಇವರು ೧೯೯೨ ರಿಂದ ತಮ್ಮ ಕುಟುಂಬದವರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು. ೩ ತಿಂಗಳ ಹಿಂದೆ ಅವರು ಅಫ್ಘಾನಿಸ್ತಾನಕ್ಕೆ ಹೋಗಿದ್ದರು, ಆಗ ಅವರನ್ನು ಅಪಹರಣ ಮಾಡಿದ್ದರು.