ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ೨೦ ವರ್ಷದ ಶಿಕ್ಷೆಯನ್ನು ಅನುಭವಿಸುತ್ತಿರುವ ೫೨ ವರ್ಷದ ಪಾದ್ರಿಯಿಂದ ಪೀಡಿತೆಯೊಂದಿಗೆ ಮದುವೆಯಾಗಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

ಮೊದಲು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ನಂತರ ಶಿಕ್ಷೆಯಿಂದ ಪಾರಾಗಲು ಆಕೆಯೊಂದಿಗೆ ವಿವಾಹವಾಗುವಂತೆ ಬೇಡಿಕೆ ಮಾಡುವ ೫೨ ವರ್ಷದ ಪಾದ್ರಿಗೆ ಏಕೆ ನಾಚಿಕೆ ಆಗುವುದಿಲ್ಲ ?

‘ಇಂತಹ ಅರ್ಜಿಯನ್ನು ಮಾಡಿದ್ದಕ್ಕಾಗಿ ನ್ಯಾಯಾಲಯವು ಇನ್ನಷ್ಟು ವರ್ಷ ಶಿಕ್ಷೆಯನ್ನು ನೀಡಬೇಕು’, ಎಂದು ಜನರಿಗೆ ಅನಿಸುತ್ತದೆ !

ತಿರುವನಂತಪುರಮ್ (ಕೇರಳ) – ಕೇರಳದ ೫೨ ವರ್ಷದ ಪಾದ್ರಿ ರಾಬಿನ್ ವಡಕ್ಕಮಚೆರಿಯನ್ನು ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದಲ್ಲಿ ೨೦ ವರ್ಷದ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಆತ ಇದರ ವಿರುದ್ಧ ಕೇರಳದ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಪೀಡಿತೆಯೊಂದಿಗೆ ವಿವಾಹವಾಗಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ. ಪೀಡಿತೆಯೂ ರಾಬಿನ್‌ನೊಂದಿಗೆ ವಿವಾಹವಾಗಲು ಅರ್ಜಿಯನ್ನು ಸಲ್ಲಿಸಿದ್ದಾಳೆ. ಉಚ್ಚ ನ್ಯಾಯಾಲಯವು ಪೊಲೀಸರಿಂದ ಇದರ ವರದಿಯನ್ನು ನೀಡುವಂತೆ ಹೇಳಿದೆ.