ಬಂಗಾಲದ ಹಿಂದುತ್ವನಿಷ್ಠ ನಾಯಕ ತಪನ ಘೋಷ ನಿಧನ

ಕೊಲಕಾತಾ – ಬಂಗಾಲದ ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಸಂಹತಿ’ಯ ಸಂಸ್ಥಾಪಕ, ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿಂದುತ್ವದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಅಭ್ಯಾಸಕರಾದ ತಪನ ಘೋಷ ಇವರು ಕೊರೋನಾದ ಸೋಂಕಿನಿಂದ ನಿಧನರಾದರು. ಅವರು ೨೦೦೭ ರಲ್ಲಿ ‘ಹಿಂದೂ ಸಂಹತಿ’ಯ ಸ್ಥಾಪನೆಯನ್ನು ಮಾಡಿದ್ದರು. ಬಂಗಾಲದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದರು. ಅವರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದೊಂದಿಗೂ ಜೋಡಿಸಲ್ಪಟ್ಟಿದ್ದರು.

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಘೋಷ ಕುಟುಂಬದ ದುಃಖದಲ್ಲಿ ಸಹಭಾಗಿಯಾಗಿದೆ.