ರಾಜಸ್ಥಾನದಲ್ಲಿ ಮೃತ್ಯುವಿನ ನಂತರ ಹದಿಮೂರನೇಯ ದಿನದಂದು ಊಟದ ಆಯೋಜನೆ ಮಾಡಿದರೆ ಶಿಕ್ಷಿಸಲಾಗುವುದು ಪೋಲೀಸರಿಂದ ಫತ್ವಾ

ಹದಿಮೂರನೇಯ ದಿನಕ್ಕಾಗಿ ಜನರಿಗೆ ಸಾಲ ಮಾಡಬೇಕಾಗುತ್ತದೆ ಆದ್ದರಿಂದ ಈ ನಿರ್ಧಾರಹಿಂದೂದ್ವೇಷಿ ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದಕ್ಕಿಂತ ಇನ್ನೇನು ಅಪೇಕ್ಷಿಸಲು ಸಾಧ್ಯ?

೧೯೬೦ ರ ‘ಮೃತ್ಯುಭೋಜ ನಿವಾರಣೆ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ

  • ಹದಿಮೂರನೇಯ ದಿನಕ್ಕಾಗಿ ಜನರಿಗೆ ಸಾಲ ಮಾಡಬೇಕಾಗುತ್ತದೆ ಆದ್ದರಿಂದ ಈ ನಿರ್ಧಾರ

  • ಹಿಂದೂ ಧರ್ಮಶಾಸ್ತ್ರದಲ್ಲಿ ಮೃತ್ಯುವಿನ ನಂತರದ ಕ್ರಿಯಾಕರ್ಮಕ್ಕೆ ವಿಶೇಷ ಮಹತ್ವವಿದೆ. ಈ ವಿಷಯದಲ್ಲಿ ಶಾಸ್ತ್ರವನ್ನರಿತುಕೊಳ್ಳದೆ ನೇರ ಹರಮೂರನೇಯ ದಿನದ ಮೇಲೆ ನಿರ್ಬಂಧ ಹೇರುವುದು, ಇದು ಪೊಲೀಸ ಹಾಗೂ ಸಂಬಂಧಪಟ್ಟ ಕಾಂಗ್ರೆಸ್ ಸರಕಾರದ ಔರಂಗಾಜೇಬ್ ತೀರ್ಮಾನವಾಗಿದೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟವರು ಹಿಂದೂ ಧರ್ಮದ ಸಂತರೊಂದಿಗೆ ಚರ್ಚೆ ನಡೆಸಿದ್ದಾರೆಯೇ?

  • ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿದರೆ ಅವರು ಮೃತ್ಯೋತ್ತರ ಕರ್ಮವನ್ನು ಶಾಸ್ತ್ರಬದ್ಧವಾಗಿ ಆಚರಿಸುತ್ತಾರೆ ಹಾಗೂ ಅವರಿಗೆ ಸಾಲ ಮಾಡುವ ಪರಿಸ್ಥಿತಿಯೇ ಬರುವುದಿಲ್ಲ. ಇದನ್ನು ಅರಿತುಕೊಳ್ಳದೆ ಕೇವಲ ಹಿಂದೂಗಳು ಸಾಲ ಮಾಡುತ್ತಾರೆ; ಎಂಬುದಕ್ಕಾಗಿ ಅವರ ಧಾರ್ಮಿಕ ವಿಧಿಗಳ ಮೇಲೆ ನಿರ್ಬಂಧ ಹೇರುವುದು ಅಂದರೆ ‘ರೋಗಕ್ಕಿಂತ ಅದರ ಚಿಕಿತ್ಸೆಯೇ ಭಯಾನಕ, ಎಂಬಂತಿದೆ !

ಟೋಂಕ್ (ರಾಜಸ್ಥಾನ) –  ರಾಜಸ್ಥಾನದಲ್ಲಿ ಮೃತ ವ್ಯಕ್ತಿಯ ಹದಿಮೂರನೇಯ ದಿನದ ಭೋಜನವನ್ನು ಆಯೋಜಿಸಿದರೆ ಸಂಬಂಧಪಟ್ಟವರಿಗೆ ೧ ವರ್ಷದ ಸೆರೆಮನೆವಾಸ ಹಾಗೂ ೧ ಸಾವಿರ ರೂಪಾಯಿಗಳ ದಂಡ ಎಂಬ ಶಿಕ್ಷೆ ವಿಧಿಸಲಾಗುವುದು. ಪೊಲೀಸರು ಎಲ್ಲಾ ಪೊಲೀಸ ಠಾಣೆಗಳಿಗೆ ಈ ಆದೇಶವನ್ನು ಹೊರಡಿಸಿದ್ದಾರೆ. ಊರಿನಲ್ಲಿ ಹದಿಮೂರನೇಯ ದಿನವನ್ನು ಆಯೋಜಿಸಿರುವ ಮಾಹಿತಿ ನೀಡದಿದ್ದರೆ ಗ್ರಾಮಪಂಚಾಯ್ತಿ ಅಧ್ಯಕ್ಷರಿಗೆ ಹಾಗೂ ಶಾನುಭೋಗರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುವುದು. ಇದನ್ನು ಆಯೋಜಿಸಲು ಸಹಾಯ ಮಾಡುವವರಿಗೆ ಹಾಗೂ ಅದಕ್ಕಾಗಿ ಸಾಲವಾಗಿ ಹಣ ನೀಡುವವರಿಗೂ ಕೂಡ ಶಿಕ್ಷೆ ವಿಧಿಸಲಾಗುವುದು. ೧೯೬೦ ರ ‘ಮೃತ್ಯುಭೋಜ ನಿವಾರಣಾ ಅಧಿನಿಯಮದ ಆಂತರ್ಗತವಾಗಿ ಈ ಆದೇಶವನ್ನು ನೀಡಲಾಗಿದೆ. ಈ ಕಾಯಿದೆಯು ಹಿಂದಿನಿಂದಲೂ ಇದೆ; ಆದರೆ ಅದು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲವಾದ್ದರಿಂದ ಈ ರೀತಿಯ ಆದೇಶವನ್ನು ಮತ್ತೆ ನೀಡಲಾಗಿದೆ, ಎಂದು ಪೋಲೀಸರು ಹೇಳಿದ್ದಾರೆ.
ಜನರಿಗೆ ಸಾಲ ಮಾಡಿ ಹದಿಮೂರನೇಯ ದಿನ ಮಾಡಬೇಕಾಗಿರುವುದರಿಂದ ಈ ಕಾಯ್ದೆಯನ್ನು ಮಾಡಲಾಗಿತ್ತು !
ಊರಿನಲ್ಲಿ ಹದಿಮೂರನೇಯ ದಿನದ ಭೋಜನ ನೀಡಲು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ಮಾಡಬೇಕಾಗುತ್ತಿತ್ತು. ಕೆಲವರಿಗೆ ತಮ್ಮ ಭೂಮಿ ಹಾಗೂ ಆಸ್ತಿಯನ್ನು ಮಾರಾಟ ಮಾಡುತ್ತಿದ್ದರು. ಆದ್ದರಿಂದ ೧೯೬೦ರಲ್ಲಿ ಆಗಿನ ಸರಕಾರವು ಇದರ ಮೇಲೆ ನಿರ್ಬಂಧ ಹೇರಲು ಕಾಯಿದೆ ಮಾಡಿದ್ದರು. ಈಗ ಕೊರೋನಾದ ಹಿನ್ನೆಲೆಯಲ್ಲಿ ಹಲವರು ಆರ್ಥಿಕ ಸಂಕಟವನ್ನು ಎದಿರಿಸುತ್ತಿದ್ದಾರೆ. ಆದ್ದರಿಂದ ಈ ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರು ಆದೇಶ ನೀಡಿದ್ದಾರೆ.