ಆಸ್ಸಾಮ್‌ನಲ್ಲಿ ಜಮಿಯತ್ ಉಲೆಮಾದ ಉಪಾಧ್ಯಕ್ಷ ಹಾಗೂ ಶಾಸಕನ ತಂದೆಯ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರ ಸಹಭಾಗ

ಕೊರೋನಾದ ಸೊಂಕಿನ ಭಯದಿಂದ ೩ ಗ್ರಾಮಗಳು ‘ಸೀಲ್’

ಕೊರೋನಾದಿಂದಾಗಿ ದೇಶದಲ್ಲಿ ಸಂಚಾರ ನಿಷೇಧ ಇರುವಾಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಅಂತಿಮಸಂಸ್ಕಾರಕ್ಕೆ ಸೇರುವ ತನಕ ಪೊಲೀಸರು ನಿದ್ರೆ ಮಾಡುತ್ತಿದ್ದರೇ ? ಇದಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು !

ನಾಗಾವ (ಆಸಾಮ್) – ಅಖಿಲ ಭಾರತೀಯ ಜಮಿಯತ್ ಉಲೇಮಾ ಹಾಗೂ ಆಮಿರ-ಎ-ಶರಿಯತ್‌ನ ಉಪಾಧ್ಯಕ್ಷ ಖೈರುಲ್ ಇಸ್ಲಾಮ್ (೮೭ ವರ್ಷ) ಇವರ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಸೇರಿದ್ದರಿಂದ ಕೊರೋನಾ ಹಾವಳಿಯಿಂದಾಗಿ ೩ ಗ್ರಾಮಗಳನ್ನು ‘ಸೀಲ್’ ಮಾಡಲಾಗಿದೆ. ಇಲ್ಲಿಯ ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್’ನ ಶಾಸಕ ಅಮಿನುಲ್ ಇಸ್ಲಾಮ್‌ನ ತಂದೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ೨ ಅಪರಾಧವನ್ನು ದಾಖಲಿಸಿದ್ದಾರೆ.