ಪಾಕಿಸ್ತಾನದ ಸಿಂಧನಲ್ಲಿ ೧೦೨ ಹಿಂದೂಗಳ ಬಲವಂತವಾಗಿ ಮತಾಂತರ

ದೇವಸ್ಥಾನದ ದೇವತೆಗಳ ಮೂರ್ತಿಯನ್ನು ಒಡೆದು ದೇವಸ್ಥಾನವನ್ನು ಮಸೀದಿಯನ್ನಾಗಿ ಮಾಡಿದರು !

ಪಾಕಿಸ್ತಾನದಲ್ಲಿಯ ಹಿಂದೂಗಳ ರಕ್ಷಣೆಗಾಗಿ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಅನಿವಾರ್ಯತೆಯು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ?

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದ ಬಾದಿನ ಜಿಲ್ಲೆಯಲ್ಲಿ ೧೦೨ ಹಿಂದೂಗಳನ್ನು ಮತಾಂತರಿಸಿ ಅವರನ್ನು ಮುಸಲ್ಮಾನರನ್ನಾಗಿಸಿದ್ದಾರೆ ಎಂದು ‘ಟೈಮ್ಸ್ ನೌ’ ಈ ಆಂಗ್ಲ ವಾರ್ತಾವಾಹಿನಿಯು ವರದಿ ಮಾಡಿದೆ. ಇದರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸಮಾವೇಶಗೊಂಡಿದ್ದಾರೆ. ಅದೇ ರೀತಿ ಇಲ್ಲಿನ ದೇವಸ್ಥಾನದ ಮೂರ್ತಿಯನ್ನು ಒಡೆದು ದೇವಸ್ಥಾನವನ್ನು ಮಸೀದಿಯನ್ನಾಗಿ ಮಾಡಲಾಗಿದೆ.

೧. ತಬಲಿಗೀ ಜಮಾತ್‌ನ ಸದಸ್ಯರಿಂದ ಹಿಂದೂಗಳ ಮೇಲೆ ದೌರ್ಜನ್ಯ

ಬಾದಿನ ಜಿಲ್ಲೆಯ ಗೊಲಾರಿಚಿಯಲ್ಲಿನ ಹಿಂದೂಗಳು, ‘ಅವರ ಮೇಲೆ ತಬಲಿಗೀ ಜಮಾತ್ ನ ಸದಸ್ಯರಿಂದ ದೌರ್ಜನ್ಯ ಮಾಡಲಾಗಿದೆ. ಅವರ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಓರ್ವ ಹಿಂದೂ ಹುಡುಗನು ಇಸ್ಲಾಮನನ್ನು ಸ್ವೀಕಾರ ಮಾಡಲು ನಿರಾಕರಿಸಿದಾಗ ಆತನನ್ನು ಅಪಹರಿಸಿದ್ದಾರೆ’, ಎಂದಿದ್ದಾರೆ. (ತಬಲಿಗೀ ಜಮಾತ್ ನ ಇದೇ ನಿಜವಾದ ರೂಪವಾಗಿದೆ, ಇನ್ನಾದರೂ ಭಾರತದಲ್ಲಿಯ ಪ್ರಗತಿ(ಅಧೋ)ಪರ ಹಿಂದೂಗಳಿಗೆ ಗಮನಕ್ಕೆ ಬರುವುದೇ ? – ಸಂಪಾದಕರು)

೨. ಮನೆಗೆ ಮರುಳುವುದಿದ್ದರೆ ಇಸ್ಲಾಮನ್ನು ಸ್ವೀಕಾರ ಮಾಡಿ !

ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಆಂದೋಲನ ಮಾಡುವ ಹಿಂದೂಗಳ ಒಂದು ‘ವಿಡಿಯೋ’ ಪ್ರಸಾರವಾಗಿದ್ದು ಅದರಲ್ಲಿ ಓರ್ವ ಹಿಂದೂ ಮಹಿಳೆಯು, ‘ನಮಗೆ ಥಳಿಸಲಾಗಿದೆ. ನಮ್ಮ ಸಂಪತ್ತನ್ನು ಲೂಟಿ ಮಾಡಿದ್ದಾರೆ, ಮನೆಗಳನ್ನು ಒಡೆಯಲಾಗಿದೆ, ಅದೇರೀತಿ ‘ಯಾರಿಗಾದರೂ ಮನೆಗೆ ಮರಳುವುದು ಇಚ್ಛೆ ಇದ್ದರೆ, ಅವರು ಇಸ್ಲಾಮನನ್ನು ಸ್ವೀಕಾರ ಮಾಡಲೇಬೇಕು,’ ಎಂದು ಬೆದರಿಕೆಯೊಡಿದ್ದಾರೆ ಎಂದು ಹೇಳಿದ್ದಾರೆ.