ಸಂಚಾರಿವಾಣಿಯ ‘ಆಪ್ಸಗಳ ಮೂಲಕ ನಡೆಯುತ್ತಿರುವ ಚೀನಾದ ಆಕ್ರಮಣಗಳನ್ನು ತಡೆಗಟ್ಟಿರಿ !

ಶ್ರೀ. ಸಾಗರ ನಿಂಬಾಳಕರ

ಭಾರತೀಯರ ಸಂಚಾರಿವಾಣಿಗಳಲ್ಲಿನ ಕೆಲವು ಚೀನಾ ಆಪ್ಸ್‌ಗಳ ಪಟ್ಟಿ

ಟಿಕ್ ಟಾಕ್, ಪುಬ್‌ಜಿ, ಹೆಲೊ, ಲೈಕ್, ಶೇರಿಟ್, ಶೇರಚಾಟ, ಝೆಂಡರ್, ವಿಗೋ, ಬಿಗೋ, ಲೈವ್‌ಮಿ, ಯುಸೀ ಬ್ರೌಸರ್, ಸೀಎಮ್ ಬ್ರೌಸರ್, ವಿಗೋ ವೀಡಿಯೊ, ವಿವಾ ವೀಡಿಯೊ, ವಿಮೆಟ್, ಬ್ಯೂಟಿ ಪ್ಲಸ್, ಬೈಡು ಮ್ಯಾಪ್, ಆಪ್‌ಲಾಕ್, ಪ್ಯಾರಲಲ್ ಸ್ಪೇಸ್, ಡಿಕ್ಶನರಿ, ಡಿಯೂ ಬ್ಯಾಟರೀ ಸೇವರ್, ಟರ್ಬೋ ವಿಪಿಎನ್, ನ್ಯೂಸಡಾಗ್, ಕ್ಯಾಮ್ ಸ್ಕ್ಯಾನರ್, ಕ್ಲಬ್ ಫ್ಯಾಕ್ಟರಿ, ಎಮ್‌ಐ ಸ್ಟೋರ್, ಒಪ್ಪೊ ಸ್ಟೋರ್, ವಿವೋ ಸ್ಟೋರ್, ಇಎಸ್ ಫೈಲ್, ಎಕ್ಸ್‌ಪ್ಲೋರರ್, ಚಿತ್ತಾಹ ಮೋಬೈಲ್, ಕ್ಲಿನ್ ಮಾಸ್ಟರ್, ಝೂಮ್, ಶೀನ್, ವಿಶ್, ಅಲೀ ಎಕ್ಸ್‌ಪ್ರೆಸ್, ಕ್ಲ್ಯಾಶ್ ಆಫ್ ಕಿಂಗ್ಸ್, ಮಾಫಿಯಾ ಸಿಟಿ, ಮೋಬೈಲ್ ಲೆಜೆಂಡ್ಸ್, ಕ್ಯಸಲ್ ಕ್ಲ್ಯಾಶ್

ಸದ್ಯ ದೈನಂದಿನ ಜೀವನದಲ್ಲಿ ಸಂಚಾರಿ ವಾಣಿಯ ಉಪಯೋಗವು ನಿತ್ಯದ್ದಾಗಿದೆ. ಅದು ಎಷ್ಟು ಆವಶ್ಯಕ ಮತ್ತು ಎಷ್ಟು ಅನಾವಶ್ಯಕವಾಗಿದೆ ಎಂಬುದು ಒಂದು ಬೇರೆಯೇ ಚರ್ಚೆಯ ವಿಷಯವಾಗಿದೆ. ಇಂದು ಭಾರತೀಯರ ಸಂಚಾರಿವಾಣಿಗಳಲ್ಲಿನ ಹೆಚ್ಚಿನ ಆಪ್‌ಗಳು, ಉದಾ. ‘ಟಿಕ್ ಟಾಕ್, ಹೆಲೊ, ‘ಲೈಕ್, ಇತ್ಯಾದಿ ಚೀನಾ ದೇಶದ್ದಾಗಿವೆ. ಕೆಲವು ಸಂಚಾರಿವಾಣಿಗಳ ಚೀನಾದ ಮಾರಾಟಗಾರರು ಇಂತಹ ಆಪ್ಸ್‌ಗಳನ್ನು ಅವರ ಸಂಚಾರಿವಾಣಿಗಳಲ್ಲಿ ಮಾರಾಟಕ್ಕಿಂತ ಮೊದಲೇ ಹಾಕಿಡುತ್ತಾರೆ. ಈ ಆಪ್ಸ್‌ಗಳ ಉಪಯೋಗದಿಂದಾಗುವ ಹಾನಿಯು ಈ ಮುಂದಿನಂತಿದೆ.

೧. ಸಾಂಸ್ಕೃತಿಕ ಆಕ್ರಮಣ

ಚೈನೀಸ್ ಆಪ್ಸ್‌ಗಳಿಂದಾಗಿ ಭಾರತದಲ್ಲಿನ ಮಕ್ಕಳು ಹಿಂಸಕ ವೃತ್ತಿಯವರಾಗುತ್ತಿದ್ದಾರೆ. ಇದು ಭಾರತೀಯರ ಮೇಲಿನ ಸಾಂಸ್ಕೃತಿಕ ಆಕ್ರಮಣವಾಗಿದೆ.

೨. ಸುರಕ್ಷಾ ವ್ಯವಸ್ಥೆಯ ಮೇಲಿನ ಆಕ್ರಮಣ

೨ ಅ. ‘ಯುಸೀ ಬ್ರೌಸರ್, ‘ಕ್ಯಾಮ್ ಸ್ಕ್ಯಾನರ್ ಇತ್ಯಾದಿ ಚೀನಾ ಆಪ್ಸ್‌ಗಳ ಮೂಲಕ ಭಾರತದ ಗುಪ್ತ ಮಾಹಿತಿಗಳನ್ನು ಕದಿಯುತ್ತಿದ್ದ ರಿಂದ ಭಾರತದ ಸೈನ್ಯದಳವು ಸೈನಿಕರಿಗೆ ಈ ಆಪ್ಸ್‌ಗಳನ್ನು ಉಪಯೋಗಿಸಬಾರದೆಂದು ನಿರ್ಬಂಧ ಹೇರಿದೆ.

೨ ಆ. ಚೀನಾ ಆಪ್ಸ್‌ಗಳ ನಿರ್ಮಾಪಕರಿಗೆ ಸಿಗುವ ಹಣದ ಸ್ವಲ್ಪ ಭಾಗವು ತೆರಿಗೆಯ ರೂಪದಲ್ಲಿ ಚೀನಾ ಸರಕಾರಕ್ಕೆ ಸಿಗುತ್ತದೆ. ಈ ಹಣವನ್ನು ಚೀನಾ ಸರಕಾರ ಭಾರತದ ವಿರುದ್ಧ ಸೈನಿಕ ಕಾರ್ಯಾಚರಣೆಗಳಿಗಾಗಿ ಉಪಯೋಗಿಸುತ್ತದೆ, ಅಂದರೆ ಈ ಆಪ್ಸ್‌ಗಳನ್ನು ಉಪಯೋಗಿಸುವುದು ಭಾರತವಿರೋಧಿಯಾಗಿದೆ.

೩. ಮಾನವನ ಮನುಷ್ಯ ಗಂಟೆಗಳು ವ್ಯರ್ಥವಾಗುವ ಪ್ರಮಾಣ ಮತ್ತು ಅದರ ಮೂಲಕ ಆಗುವ ಭೀತಿದಾಯಕ ಆಕ್ರಮಣ

೩ ಅ. ‘ಟಿಕ್ ಟಾಕ್ ಆಪ್ಸ್‌ಗೆ ಸಂಬಂಧಪಟ್ಟ ಅಂಕಿಅಂಶಗಳು : ೨೦೧೯ ರಲ್ಲಿ ‘ಟಿಕ್ ಟಾಕ್ ಆಪ್ ಜಗತ್ತಿನಾದ್ಯಂತ ‘ಡೌನ್‌ಲೋಡ್ ಮಾಡಲಾಯಿತು. ಅದರಲ್ಲಿನ ಶೇ. ೪೪ ರಷ್ಟು ಡೌನ್‌ಲೋಡ್ ಭಾರತದಲ್ಲಿ ಆಗಿದೆ. ಅಂದರೆ ೩೨.೩ ಕೋಟಿ ಭಾರತೀಯರು ಅದನ್ನು ಡೌನ್‌ಲೋಡ್ ಮಾಡಿದ್ದಾರೆ. ಇವರೆಲ್ಲರೂ ಪ್ರತಿದಿನ ಈ ಆಪ್‌ವನ್ನು ಸರಾಸರಿ ೩೮ ನಿಮಿಷಗಳಷ್ಟು ಉಪಯೋಗಿಸಿದರೆ, ಪ್ರತಿದಿನ ೨೦.೪೬ ಕೋಟಿ ಭಾರತೀಯ ಮನುಷ್ಯ ಗಂಟೆಗಳು ವ್ಯರ್ಥವಾಗುತ್ತವೆ. ಇದೇ ಪದ್ಧತಿಯ ‘ಹೆಲೊ, ‘ಲೈಕ್ ನಂತಹ ಅನೇಕ ಆಪ್ಸ್‌ಗಳಿಂದ ಬಹಳಷ್ಟು ಮನೋರಂಜನೆಯ ವ್ಯಸನಗಳನ್ನು ತಗಲಿಸಿ ಭಾರತೀಯರ ಕೋಟಿಗಟ್ಟಲೆ ಗಂಟೆಗಳನ್ನು ವ್ಯರ್ಥಗೊಳಿಸುತಿದ್ದಾರೆ.

೩ ಆ. ಭಾರತೀಯರ ಕಣ್ಣುಗಳಲ್ಲಿ ಅಂಜನ ಹಾಕುವ ‘ಟಿಕ್ ಟಾಕ್ ನಿರ್ಮಾಪಕರ ಅಭಿಪ್ರಾಯ ! : ‘ಟಿಕ್ ಟಾಕ್ನ ಚೀನಾ ನಿರ್ಮಾಪಕ ಝಾಂಗ್ ಯಿಮಿಂಗ್ ಹೇಳುತ್ತಾನೆ, “ನಾನು ‘ಟಿಕ್ ಟಾಕ್ ಆಪ್‌ನ್ನು ನಿರುದ್ಯೋಗಿ ಹಾಗೂ ಕೆಲಸಗಳ್ಳರಿಗಾಗಿ ತಯಾರಿಸಿದ್ದೆ. ಆದರೆ ಭಾರತದಲ್ಲಿ ಇಷ್ಟು ಜನರು ಹೀಗಿರಬಹುದೆಂದು ನನಗೆ ಅನಿಸಿರಲಿಲ್ಲ.

೩ ಇ. ಪಾಶ್ಚಾತ್ಯ ರಾಷ್ಟ್ರಗಳ ಚಾತುರ್ಯ ! : ಚೀನಾ ಆಪ್ಸ್‌ಗಳ ಈ ಅಪಾಯವನ್ನು ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಗುರುತಿಸಿದ್ದು ಅಲ್ಲಿ ಅನೇಕ ಚೀನಾ ಆಪ್ಸ್‌ಗಳಿಗೆ ನಿರ್ಬಂಧ ಹೇರಲಾಗಿದೆ.

೪. ರಾಷ್ಟ್ರಪ್ರೇಮಿ, ಶಿಕ್ಷಣತಜ್ಞ ಹಾಗೂ ‘ಮ್ಯಗಸೆಸ್ ಪುರಸ್ಕಾರ ಪ್ರಾಪ್ತ ಸಂಶೋಧಕ ಸೋನಮ್ ವಾಂಗ್‌ಚೂಕ್ ಇವರು ನೀಡಿದ ಕರೆ !

 ‘ನಿಮ್ಮ ಜೀವನದಿಂದ ಚೀನಾ ‘ಸಾಫ್ಟ್‌ವೆರ್ (ಆಪ್ಸ್, ಗಣಕೀಯ ತಂತ್ರಾಂಶ ಇತ್ಯಾದಿ) ಗಳನ್ನು ಒಂದು ವಾರದೊಳಗೆ ಮತ್ತು ಚೀನಾ ‘ಹಾರ್ಡ್‌ವೆರ್ (ಸಂಚಾರವಾಣಿ, ಸಂಚಾರಿಗಣಕಯಂತ್ರ ಇತ್ಯಾದಿ)ಗಳನ್ನು ಒಂದು ವರ್ಷದಲ್ಲಿ ಗಡಿಪಾರು ಮಾಡಿತು ! ಚೀನಾಕ್ಕೆ ನಮ್ಮ ‘ವಾಲೆಟ್ ಪಾವರ್ನಿಂದ (ಕಿಸೆಯಲ್ಲಿರುವ ಹಣದ ಮೂಲಕ) ಪಾಠ ಕಲಿಸಿರಿ ! ಈ ಕರೆಯನ್ನು ಸ್ವೀಕರಿಸಿ ನಿಮ್ಮ ಸಂಚಾರಿವಾಣಿಗಳಲ್ಲಿನ ಎಲ್ಲ ಚೀನಾದ ಆಪ್ಸ್‌ಗಳನ್ನು ತಕ್ಷಣ ತೆಗೆದು ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸಿರಿ ! ಅದೇ ರೀತಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ರಾಷ್ಟ್ರಕರ್ತವ್ಯವನ್ನು ನಿರ್ವಹಿಸಿರಿ !

ಸಂಕಲನಕಾರರು : ಶ್ರೀ. ಸಾಗರ ನಿಂಬಾಳ್ಕರ್, ಸನಾತನ ಆಶ್ರಮ, ರಾಮನಾಥಿ ಗೋವಾ.