ಲಕ್ಷ್ಮಣಪುರಿ (ಉತ್ತರಪ್ರದೇಶ)ಯಲ್ಲಿ ಮತಾಂಧರಿಂದ ತ್ರಿವರ್ಣ ಧ್ವಜ ಸುಟ್ಟ್ಟು ದೇಶವಿರೋಧಿ ಘೋಷಣೆ !

‘ಟಿಕ್ ಟಾಕ್ ವಿಡಿಯೋ’ ನಿರ್ಮಿಸಲು ಪ್ರಯತ್ನ

ವಿರೋಧಿಸುವವರ ಮೇಲೆ ಮತಾಂಧರಿಂದ ಹಲ್ಲೆ

  • ಉತ್ತರಪ್ರದೇಶದ ರಾಜಧಾನಿಯಾದ ಲಕ್ಷ್ಮಣಪುರಿಯಲ್ಲೇ ಈ ರೀತಿಯ ಘಟನೆ ಘಟಿಸುತ್ತೆ ಇದು ರಾಜ್ಯದ ಕಾನೂನು ಸುವ್ಯವಸ್ಥೆಯು ಹದಗೆಟ್ಟಿರುವ ದ್ಯೋತಕವಾಗಿದೆ. ಇದು ಪೊಲೀಸ-ಆಡಳಿತಕ್ಕೆ ನಾಚಿಕೆಯ ವಿಷಯವಾಗಿದೆ !

  • ಮತಾಂಧರು ಬಹಿರಂಗವಾಗಿ ಈ ರೀತಿಯ ದೇಶದ್ರೋಹಿ ಕೃತ್ಯ ಮಾಡುತ್ತಾರೆ, ಇದರ ಅರ್ಥ ‘ಅವರಿಗೆ ಸರಕಾರ, ಪೊಲೀಸ ಆಡಳಿತ ಹಾಗೂ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲ’, ಎಂದೇ ಸಾಬೀತಾಗುತ್ತದೆ. ಸರಕಾರವು ದೇಶದ್ರೋಹಿ ಹಾಗೂ ಮತಾಂಧರಿಗೆ ಭಯ ಹುಟ್ಟಿಸುವಂತೆ ಕ್ರಮಕೈಗೊಳ್ಳಬೇಕೆಂಬ ಅಪೇಕ್ಷೆಯಾಗಿದೆ !

  • ಭಾರತದ ಬಗ್ಗೆ ಇಷ್ಟೇ ದ್ವೇಷವಿದ್ದಲ್ಲಿ ಸರಕಾರವು ಅವರನ್ನು ಹಿಡಿದು ಪಾಕಿಸ್ತಾನಕ್ಕೆ ಕಳುಹಿಸಬೇಕು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಬಾಜಾರಖಾಲಾ ಪ್ರದೇಶದಲ್ಲಿ ೪ ಮತಾಂಧರು ತ್ರಿವರ್ಣ ಧ್ವಜವನ್ನು ಸುಟ್ಟು ದೇಶವಿರೋಧಿ ಘೋಷಣೆ ಕೂಗಿದ ಘಟನೆ ಬಹಿರಂಗವಾಗಿದೆ. ಇದಕ್ಕೆ ವಿರೋಧಿಸಿದವರ ಮೇಲೆ ಮತಾಂಧರು ಹಲ್ಲೆ ಮಾಡಿದ್ದಾರೆ. ಈ ಘಟನೆ ಜೂನ್ ೨೧ ರಂದು ಸಂಜೆ ನಡೆದಿದೆ. ಮತಾಂಧರು ಈ ಕೃತ್ಯದ ‘ಟಿಕ್ ಟಾಕ್ ವಿಡಿಯೋ’ ಮಾಡಿ ಅದರ ಪ್ರಸಾರ ಮಾಡುವವರಿದ್ದರು.

ಮತಾಂಧರು ಈ ಕೃತ್ಯವನ್ನು ಮಾಡುತ್ತಿರುವಾಗ ಅಲ್ಲಿಂದ ಹೋಗುತ್ತಿದ್ದ ೨ ಜಾಗರೂಕ ನಾಗರಿಕರು ಅವರನ್ನು ತಡೆಯುತ್ತಿರುವಾಗ ಮತಾಂಧರು ಅವರ ಮೇಲೆ ಹಲ್ಲೆ ಮಾಡಿದರು. ಆಗ ಇತರ ಜನರು ಮಧ್ಯಪ್ರವೇಶಿಸಿ ೨ ನಾಗರಿಕರನ್ನು ರಕ್ಷಿಸಿದರು. ಜನರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದರು ಮತ್ತು ಇತರ ೩ ಆರೋಪಿ ಪರಾರಿಯಾದರು. ಹಿಡಿದಿರುವ ಆರೋಪಿಯು ಅಪ್ರಾಪ್ತ (೧೫ ವರ್ಷ) ಆಗಿದ್ದರಿಂದ ಆತನನ್ನು ಬಾಲಸುಧಾರಣೆಗೃಹದಲ್ಲಿ ಕಳುಹಿಸಲಾಗಿದೆ. ಪೊಲೀಸರು ಆ ೩ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಲಂ ೧೨೪(ಎಎ), ೧೫೩(ಎಎ), ೫೦೪, ೫೦೫(೧)(ಬಿಬಿ)(೨). ೩೫೨, ೩೨೫, ೫೦೩ ಹಾಗೂ ‘ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ ೨’ ಅನ್ವಯ ಅಪರಾಧವನ್ನು ದಾಖಲಿಸಿದ್ದಾರೆ.