ಸಾಧಕರನ್ನು ತಮ್ಮ ಸ್ಥೂಲದೇಹದಲ್ಲಿ ಸಿಲುಕಲು ಬಿಡದೆ ನೇರವಾಗಿ ಈಶ್ವರಿ ತತ್ತ್ವದೊಂದಿಗೆ ಜೋಡಿಸುವ ಪರಾತ್ಪರ ಗುರು ಡಾ. ಆಠವಲೆ !
‘ಪರಾತ್ಪರ ಗುರು ಡಾಕ್ಟರರು ಒಮ್ಮೆ ನನ್ನೊಂದಿಗೆ ಬೇರೆ ರಾಜ್ಯದಲ್ಲಿನ ಓರ್ವ ಸಂತರಿಗೆ ಉಡುಗೊರೆಯ ವಸ್ತು ಹಾಗೂ ಅವರ ಶಿಷ್ಯನಿಗೆ ಪ್ರಸಾದವನ್ನು ಕಳುಹಿಸಿದ್ದರು. ಆ ಶಿಷ್ಯನು ಆ ಸಂತರ ಉತ್ತಮ ಸೇವೆ ಮಾಡುತ್ತಿರುವುದರಿಂದ ಪರಾತ್ಪರ ಗುರು ಡಾಕ್ಟರರು ಅವನಿಗೆ ಪ್ರಸಾದವನ್ನು ಕಳುಹಿಸಿದ್ದರು. ನಾನು ಆ ಪ್ರಸಾದವನ್ನು ಆ ಶಿಷ್ಯನಿಗೆ ಪರಾತ್ಪರ ಗುರು ಡಾಕ್ಟರು ನೀಡಿರುವ ಬಗ್ಗೆ ಹೇಳಿದಾಗ ಅವನು ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿ ಆ ಪ್ರಸಾದವನ್ನು ಸ್ವೀಕರಿಸಿದನು. ನನಗೆ ಈ ಪ್ರಸಂಗದ ಬಗ್ಗೆ ಆಶ್ಚರ್ಯವೆನಿಸಿತು ಹಾಗೂ ನಾನು ಈ ಪ್ರಸಂಗ ಬಗ್ಗೆ ಆ ಸಂತರಿಗೆ ಹೇಳಿದೆನು. ಆಗ ಸಂತರು, “ಆ ಶಿಷ್ಯನು ಕೇವಲ ನನ್ನನ್ನು ಗೌರವಿಸುತ್ತಾನೆ. ಆದುದರಿಂದ ಅವನು ಪರಾತ್ಪರ ಗುರು ಡಾಕ್ಟರರಿಂದ ಬಂದ ಪ್ರಸಾದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದನು. ಮುಂದಿನ ಬಾರಿ ಇಂತಹ ಪ್ರಸಾದವನ್ನು ನನ್ನ ಕೈಯಲ್ಲಿ ನೀಡಿರಿ. ನಂತರ ನಾನು ಅದನ್ನು ಆ ಶಿಷ್ಯನಿಗೆ ಕೊಡುವೆನು. ಅಂದರೆ ಅಡಚಣೆಯಾಗುವುದಿಲ್ಲ”, ಎಂದು ಹೇಳಿದರು.
ಈ ಪ್ರಸಂಗವಾದ ನಂತರ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರ ಬಂದಿತು, ‘ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಚರಾಚರದಲ್ಲಿ ಈಶ್ವರನನ್ನು ನೋಡಲು ಕಲಿಸಿದರು. ಸಾಧಕರಿಗೆ ಇತರ ಸಂತರು ಪ್ರಸಾದ ನೀಡಿದರೆ ಅವರು ಅದನ್ನು ಕೃತಜ್ಞತಾಭಾವದಿಂದ ಸ್ವೀಕರಿಸುತ್ತಾರೆ. ಯಾವುದೇ ಸಾಧಕ ‘ಪರಾತ್ಪರ ಗುರು ಡಾಕ್ಟರರು ಪ್ರಸಾದ ನೀಡಿದರೆ ಮಾತ್ರ ನಾನು ಸ್ವೀಕರಿಸುವೆನು’, ಎಂದು ಹೇಳುವುದಿಲ್ಲ. ಈ ಪ್ರಸಂಗದಿಂದ ‘ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ತಮ್ಮ ದೇಹದಲ್ಲಿ ಸಿಲುಕಿ ಕೊಳ್ಳಲು ಬಿಡದೇ ಪ್ರತಿಯೊಬ್ಬರಲ್ಲಿ ದೇವರನ್ನು ನೋಡಲು ಕಲಿಸಿ ಸಾಧನೆಯಲ್ಲಿ ಪ್ರಗತಿ ಮಾಡಿಸಿಕೊಳ್ಳುತ್ತಿದ್ದಾರೆ’, ಎಂದು ಗಮನಕ್ಕೆ ಬರುತ್ತದೆ. – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.