‘ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಅರ್ಚಕರು ಪ್ರತಿದಿನದ ಘಟನೆಗಳ ಕುರಿತು ರಾತ್ರಿ ದೇವರಿಗೆ ಹೇಳುತ್ತಾರೆ, ಎಂಬ ರೂಢಿಯ ಬಗ್ಗೆ ಸದ್ಗುರು (ಸೌ.) ಅಂಜಲಿ ಗಾಡಗೀಳರು ಮಾಡಿದ ವಿಶ್ಲೇಷಣೆ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧. ‘ನಾವು ನಮ್ಮ ಕರ್ಮಗಳ ವರದಿಯನ್ನು ದೇವರಿಗೆ ನೀಡಿದರೆ ಅಹಂ ನಿರ್ಮಾಣವಾಗುವುದಿಲ್ಲ

‘ಓರ್ವ ಸಂತರು ನಮಗೆ “ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಒಂದು ಸುಂದರವಾದ ರೂಢಿ ಇದೆ, ಪ್ರತಿದಿನ ದೇವಸ್ಥಾನದಲ್ಲಿ ಏನೆಲ್ಲ ವ್ಯವಹಾರಗಳು ನಡೆಯುತ್ತದೆಯೋ, ಅದರ ವರದಿಯನ್ನು ದೇವಸ್ಥಾನದ ಪುರೋಹಿತರು ರಾತ್ರಿ ದೇವರಿಗೆ ನೀಡುತ್ತಾರೆ. ಅವರು ದಿನವಿಡಿ ನಡೆಯುವ ಘಟನೆಗಳ ವರದಿಯನ್ನು ದೇವರಿಗೆ ನೀಡುತ್ತಾರೆ” ಎಂಬುದಾಗಿ ಹೇಳಿದಾಗ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು “ಹಿಂದಿನ ಈ ಸುಂದರವಾದ ರೂಢಿಯ ಮೂಲಕ ನಮಗೆ ತುಂಬಾ ಕಲಿಯಲು ಸಿಗುತ್ತದೆ. ನಮ್ಮ ಕರ್ಮದ ವರದಿ ಪ್ರತ್ಯಕ್ಷ ದೇವರಿಗೆ ಕೊಡುವುದರಿಂದ ‘ನಮ್ಮಿಂದ ಪ್ರತಿಯೊಂದು ಕರ್ಮ ಯೋಗ್ಯವಾಗಿಯೇ ಆಗಬೇಕು, ಯಾವುದೇ ಕರ್ಮದಲ್ಲಿ ಭ್ರಷ್ಟಾಚಾರ ಬೇಡ, ಎಂಬ ಅರಿವು ಮನಸ್ಸಿನಲ್ಲಿ ಇರುತ್ತದೆ. ನಾವು ಏನೆಲ್ಲ ಕರ್ಮ ಮಾಡುತ್ತೇವೆಯೋ, ಅದನ್ನು ಪ್ರತಿದಿನ ಈಶ್ವರನ ಚರಣಗಳಲ್ಲಿ ಅರ್ಪಿಸುವುದರಿಂದ ಕರ್ಮ ಮಾಡಿದ ಅಹಂ ನಿರ್ಮಾಣವಾಗುವುದಿಲ್ಲ, ಹಾಗೆಯೇ ಕೊಡು-ಕೊಳ್ಳುವ ಲೆಕ್ಕವೂ ಇರುವುದಿಲ್ಲ. ಆದುದರಿಂದ ಕರ್ಮಕ್ಕೆ ಈಶ್ವರಿ ಅಧಿಷ್ಠಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

೨. ಸಾಧಕರ ತಪ್ಪುಗಳ ಜವಾಬ್ದಾರಿಯನ್ನು ಸ್ವತಃ ಸ್ವೀಕರಿಸಿ ಮಹರ್ಷಿಗಳಲ್ಲಿ ಕ್ಷಮೆ ಯಾಚಿಸುವ ಮತ್ತು ಕಟ್ಟುನಿಟ್ಟಾಗಿ ಅವರ ಆಜ್ಞಾಪಾಲನೆಯನ್ನು ಪಾಲಿಸಲು ಸದಾ ಸಿದ್ಧರಿರುವ ಸದ್ಗುರು (ಸೌ.) ಅಂಜಲಿ ಗಾಡಗೀಳ !

ನಾಡಿಪಟ್ಟಿ ವಾಚನದಲ್ಲಿ ಮಹರ್ಷಿಗಳು ಹೇಳಿದಂತೆ ಪ್ರಯಾಣದಲ್ಲಿರುವಾಗ ನಡೆಯುವ ನಿತ್ಯ ವೆಚ್ಚ ಮತ್ತು ದಿನವಿಡಿ ಮಾಡಿದ ಸೇವೆ ಇವುಗಳ ವರದಿಯನ್ನು ಪ್ರಯಾಣದ ಸಾಧಕರು ದಿನದ ಕೊನೆಯಲ್ಲಿ ದೇವರಿಗೆ ಕೊಡುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಕಲಿಸಿದಂತೆ ಇದು ಒಂದು ರೀತಿಯ ಆತ್ಮನಿವೇದನೆಯೇ ಆಗಿದೆ. ಈ ವರದಿಯನ್ನು ಒಂದು ಕಾಗದದಲ್ಲಿ ಪ್ರಾರ್ಥನೆ ಹಾಗೂ ತಪ್ಪುಗಳನ್ನು ಬರೆಯುವ ಮೂಲಕ ಮಹರ್ಷಿಗಳು ದೇವರ ಮುಂದೆ ಇಡಲು ಹೇಳಿದ್ದರು. ಓರ್ವ ಸಾಧಕನಿಗೆ ಆ ಸೇವೆಯನ್ನು ಕೊಡಲಾಗಿತ್ತು. ಒಮ್ಮೆ ಆ ಸಾಧಕನು ವರದಿಯನ್ನು ಕೊಡಲು ಮರೆತನು ಮತ್ತು ಉಳಿದ ಸಾಧಕರಿಗೂ ಗಮನಕ್ಕೆ ಬರಲಿಲ್ಲ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ರಾತ್ರಿ ಮಲಗಿದ ನಂತರ ಇದು ಗಮನಕ್ಕೆ ಬಂತು. ಅವರು ತಕ್ಷಣ ನಿದ್ರೆಯಿಂದ ಎದ್ದರು. ಅವರು ಅದೇ ಕ್ಷಣ ತಮ್ಮ ಕಿವಿ ಹಿಡಿದು ದೇವರ ಮತ್ತು ಮಹರ್ಷಿಗಳಿಗೆ ಕ್ಷಮೆ ಯಾಚಿಸಿದರು, ‘ಹೇ ಭಗವಂತ, ನಾನು ನಿನ್ನ ಮತ್ತು ಮಹರ್ಷಿಗಳ ಕ್ಷಮೆ ಕೇಳುತ್ತೇನೆ. ‘ಹೀಗೆ ತಪ್ಪು ಪುನಃ ನಮ್ಮಿಂದ ಆಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಮತ್ತು ಆಗಿರುವ ತಪ್ಪಿಗಾಗಿ ಪ್ರಾಯಶ್ಚಿತ್ತವೂ ತೆಗೆದುಕೊಳ್ಳುತ್ತೇವೆ’ ಅವರು ತತ್ಪರತೆಯಿಂದ ಸಾಧಕರ ಪರವಾಗಿ ಸ್ವತಃ ದೇವರಿಗೆ ಎಲ್ಲ ವರದಿಯನ್ನು ಮಾನಸ ರೂಪದಲ್ಲಿ ಕೊಟ್ಟರು ಮತ್ತು ಬಳಿಕವೇ ಅವರು ಮಲಗಿದರು.

೩. ‘ಶಿಷ್ಯರ ಕೈಯಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ಸಮಯ ಬಂದರೆ ಗುರುಗಳು ದೇವರಲ್ಲಿ ಕ್ಷಮೆಯಾಚನೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ

ಮುಖ್ಯವಾಗಿ ಇಲ್ಲಿ ಇನ್ನು ಒಂದು ಕಲಿಯುವಂತಹದ್ದು ಇದೆ, ತಪ್ಪಿಗಾಗಿ ಕೇವಲ ಕ್ಷಮೆ ಕೇಳಿ ಸದ್ಗುರು ಗಾಡಗೀಳ ಇವರು ಅಷ್ಟಕ್ಕೆ ನಿಲ್ಲಲಿಲ್ಲ, ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ನಿರ್ಧರಿಸಿ ದಿನದ ವರದಿಯನ್ನೂ ಅವರು ತಕ್ಷಣವೇ ಮಾನಸ ರೂಪದಲ್ಲಿ ದೇವರಿಗೆ ಕೊಟ್ಟರು. ಹೀಗೆ ಮಾಡುವುದರಿಂದ ದಿನವಿಡಿ ಆಗಿರುವ ತಪ್ಪುಗಳ ಕ್ಷಾಲನೆಯಾಗಿ ಸಾಧನೆ ವ್ಯರ್ಥವಾಗುವುದಿಲ್ಲ. ತಮ್ಮ ಶಿಷ್ಯನ ಹಾನಿಯಾಗದಿರಲು ಸಮಯ ಬಂದರೆ ಶಿಷ್ಯನ ವತಿಯಿಂದ ದೇವರಲ್ಲಿಯೂ ಕ್ಷಮೆಯಾಚನೆ ಮಾಡಲು ಗುರುಗಳು ಹಿಂದೆ-ಮುಂದೆ ನೋಡುವುದಿಲ್ಲ. ಇದರಿಂದ ‘ಗುರುಗಳಿಗೆ ಅಹಂ ಇರುವುದಿಲ್ಲ ಮತ್ತು ‘ಅವರು ಸ್ವತಃ ಶಿಷ್ಯಭಾವದಲ್ಲಿ ಹೇಗೆ ಇರುತ್ತಾರೆ ?, ಎಂಬುದು ಗಮನಕ್ಕೆ ಬರುತ್ತದೆ. ‘ಒಮ್ಮೆ ಗುರುಗಳು ಶಿಷ್ಯನಿಗೆ ಸ್ವೀಕರಿಸಿದ ಬಳಿಕ, ಅವನ ಎಲ್ಲದರ ಹೊಣೆ ಅವರೇ ಹೇಗೆ ತೆಗೆದುಕೊಳ್ಳುತ್ತಾರೆ ? ಎಂಬುದನ್ನು ದೇವರು ಇಲ್ಲಿ ತೋರಿಸಿ ಕೊಟ್ಟನು.

ಸಂಗ್ರಹಕಾರರು : ಶ್ರೀ. ದಿವಾಕರ ಆಗಾವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೩.೨೦೨೦)