ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಜಾತ್ಯತೀತವಾದಿಗಳು ಮೌನ ವಹಿಸುತ್ತಾರೆ ! – ಖ್ಯಾತ ನಟಿ ಕಂಗನಾ ರನೌತ್

ಕಾಶ್ಮೀರಿ ಹಿಂದೂ ಅಜಯ ಪಂಡಿತ ಹತ್ಯೆ ಪ್ರಕರಣ

ಚಿತ್ರರಂಗದಲ್ಲಿ ಎಷ್ಟು ಹಿಂದೂ ನಟ-ನಟಿಯರು ಹಿಂದೂಗಳ ಪರವಾಗಿ ಬಹಿರಂಗವಾಗಿ ಹೀಗೆ ಮಾತನಾಡುತ್ತಾರೆ ?

ಮುಂಬಯಿ : ‘ನಾನು ಭಾರತೀಯನಾಗಿದ್ದೇನೆ’, ‘ನನಗೆ ನಾಚಿಕೆಯಾಗುತ್ತಿದೆ’, ಎಂಬ ಪದಗಳನ್ನು ಬಳಸಿ ಅನೇಕ ಬುದ್ಧಿಜೀವಿಗಳು ಮತ್ತು ಖ್ಯಾತನಾಮರು ಕೈಯಲ್ಲಿ ಪೆಟ್ರೋಲ್ ಬಾಂಬ್, ಕಲ್ಲು ಅಥವಾ ಮೇಣದ ಬತ್ತಿಗಳೊಂದಿಗೆ ಬೀದಿಗಳಲ್ಲಿ ಮೆರವಣಿಗೆ ಮಾಡುವುದನ್ನು ನೀವು ನೋಡಿರಬಹುದು. ಈ ಮೂಲಕ ಅವರು ಈ ಅಂಶವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ. ಒಂದು ಘಟನೆಯ ಹಿಂದೆ ಜಿಹಾದಿ ಸಿದ್ಧಾಂತ ಇರುತ್ತದೆಯೋ ಆಗ ಮಾತ್ರ ಅವರ ಮಾನವೀಯತೆ ಹೊರಬರುತ್ತದೆ. ಈ ಜನರು ಹಿಂದೂಗಳಿಗೆ ಜಾತ್ಯತೀತತೆಯನ್ನು ಕಲಿಸುತ್ತಾರೆ; ಆದರೆ ಕಾಶ್ಮೀರದಲ್ಲಿ ಅಜಯ್ ಪಂಡಿತ ಅವರ ಹತ್ಯೆಯಾದಾಗ ಮತ್ತು ಕಾಶ್ಮೀರಿ ಹಿಂದೂಗಳು ಪ್ರತಿದಿನ ದೌರ್ಜನ್ಯಕ್ಕೊಳಗಾದಾಗ ಇವರು ಏನೂ ಮಾತನಾಡುವುದಿಲ್ಲ’ ಎಂಬ ಮಾತುಗಳಲ್ಲಿ ಪ್ರಸಿದ್ಧ ನಟಿ ಕಂಗನಾ ರನೌತ್‌ರವರು ತಥಾಕಥಿತ ಜಾತ್ಯತೀತವಾದಿಗಳಿಗೆ ಟೀಕಿಸಿದ್ದಾರೆ.

ಕಂಗನಾ ರನೌತ್ ಅವರು ತಮ್ಮ ‘ವಿಡಿಯೋ’ವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಅವರು ಮಾತನ್ನು ಮುಂದುವರಿಸುತ್ತ, “ಯಾವಾಗ ಈ ಜಿಹಾದಿ ಮಾನಸಿಕತೆಯವರಿಂದ ಹಿಂದೂಗಳಿಗೆ ನ್ಯಾಯ ಒದಗಿಸುವ ಸಮಯ ಬಂದಾಗ ಮಾತ್ರ ಅವರ ಬಾಯಿಯಿಂದ ಪದಗಳು ಬರುವುದಿಲ್ಲ. ಹೇಗೆ ನರಿಯು ಕುರಿಯ ರೂಪದಲ್ಲಿ ಅಡಗಿ ಕುಳಿತುಕೊಳ್ಳುತ್ತದೆಯೋ, ಅದರಂತೆ ಈ ಜಾತ್ಯತೀತತೆಯ ಬುರಖಾದ ಹಿಂದೆ ಅಡಗಿಕೊಳ್ಳುತ್ತಾರೆ. ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಒದಗಿಸಿ ಅವರನ್ನು ತಮ್ಮ ತಾಯ್ನಾಡಿನ ಅಂದರೆ ಕಾಶ್ಮೀರಕ್ಕೆ ಸುರಕ್ಷಿತವಾಗಿ ಕಳುಹಿಸುವಂತೆ ಪ್ರಧಾನಿ ಮೋದಿಯವರಲ್ಲಿ ನಾನು ಕೋರುತ್ತೇನೆ” ಎಂದು ಹೇಳಿದ್ದಾರೆ.