ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಿಸುಕಲಾಗುತ್ತದೆ ಎನ್ನುತ್ತಿದ್ದ ಅಮೇರಿಕಾದ ಆಯೋಗದ ಸದಸ್ಯರ ವೀಸಾ ನಿರಾಕರಿಸಿದ ಭಾರತ

ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಭಾರತ ಸರ್ಕಾರಕ್ಕೆ ಅಭಿನಂದನೆಗಳು !

ನವ ದೆಹಲಿ : ಭಾರತ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದಂತಹ ವಿಷಯಗಳ ಬಗ್ಗೆ ಸಲಹೆ ನೀಡುವ ಅಮೇರಿಕಾದ ಸಂಸತ್ತಿನ ಖಾಸಗಿ ಸಂಸ್ಥೆಯಾದ ‘ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾನಾಷನಲ್ ರಿಲಿಜಿಯಸ್ ಫ್ರೀಡಂ’ನ ಸದಸ್ಯರಿಗೆ ವೀಸಾ ನಿರಾಕರಿಸಿದೆ. ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಜೂನ್ ೧ ರಂದು ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರಿಗೆ ಬರೆದ ಪತ್ರದಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಸಂಸ್ಥೆಯು ಎಪ್ರಿಲ್‌ನಲ್ಲಿ ಅಮೇರಿಕಾ ಸರಕಾರಕ್ಕೆ ಸಲಹೆಯನ್ನು ನೀಡುತ್ತಿರುವಾಗ ಭಾರತವನ್ನು ಧಾರ್ಮಿಕ ಸ್ವಾತಂತ್ರ್ಯ ಮಟ್ಟದಲ್ಲಿ ೧೪ ಚಿಂತಾಜನಕ ದೇಶಗಳ ಪಟ್ಟಿಯಲ್ಲಿ ಸೇರಿಸಲು ಅಮೇರಿಕ ಸರ್ಕಾರಕ್ಕೆ ಸಲಹೆ ನೀಡಿತ್ತು. ಗುಜರಾತ್‌ನಲ್ಲಿ ೨೦೦೨ ರ ಗಲಭೆಯ ನಂತರ ಈ ಸಂಸ್ಥೆಯು ಸಲಹೆ ನೀಡಿತ್ತು. ತದನಂತರ ಪುನಃ ಅದೇ ಸಲಹೆಯನ್ನು ನೀಡಲಾಗಿದೆ.

ಜಯಶಂಕರ ಅವರು ದುಬೆಯವರಿಗೆ ಕಳುಹಿಸಿದ ಪತ್ರದಲ್ಲಿ, ‘ಭಾರತೀಯ ನಾಗರಿಕರ ಸ್ಥಿತಿ ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ನಾವು ಈ ಆಯೋಗದಿಂದ ಕೇಳುವ ಅಗತ್ಯವಿಲ್ಲ. ಈ ಆಯೋಗವು ಮೊದಲಿನಿಂದಲೂ ಪಕ್ಷಪಾತ, ತಪ್ಪು ಮಾಹಿತಿ ನೀಡುವ, ಅಯೋಗ್ಯ ಪ್ರತಿಕ್ರಿಯೆಯನ್ನು ನೀಡುವ ಮತ್ತು ವೈಶಿಷ್ಟ್ಯವೆಂದರೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಅಂಶಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವ ಎಂದು ಹೆಸರುವಾಸಿಯಾಗಿದೆ. ನಾವು ಅವರ ವರದಿಯನ್ನು ಖಂಡಿಸಿದ್ದೇವೆ’ ಎಂದು ಹೇಳಿದ್ದಾರೆ.