ಉಪಾಯರೂಪಿ ಆಧ್ಯಾತ್ಮಿಕ ಸಂಜೀವನಿ ನೀಡುವ ಪೂ. (ಡಾ.) ಮುಕುಲ ಗಾಡಗೀಳ ಇವರು ಸದ್ಗುರು ಪದವಿಯಲ್ಲಿ ವಿರಾಜಮಾನ !

ಸದ್ಗುರು (ಡಾ.) ಮುಕುಲ ಗಾಡಗೀಳ

ಸನಾತನ ಆಶ್ರಮ, ರಾಮನಾಥಿ (ಗೋವಾ) – ಸಾಧಕರಿಗೆ ಆಗುವ ಆಧ್ಯಾತ್ಮಿಕ ಸ್ವರೂಪದ ತೊಂದರೆಯಿರಲಿ, ಸಮಷ್ಟಿ ಕಾರ್ಯದಲ್ಲಿ ಎದುರಾಗುವ ಕೆಟ್ಟ ಶಕ್ತಿಗಳ ತೊಂದರೆಗಳಿರಲಿ ಅಥವಾ ಸಾಧಕರ ಗಂಭೀರ ಸ್ವರೂಪದವ್ಯಾಧಿಗಳಿರಲಿ ಎಲ್ಲ ರೀತಿಯ ತೊಂದರೆಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ನಿವಾರಣೆ ಮಾಡಲು ಸಾಧಕರಿಗೆ ನೆನಪಾಗುವುದು ಸನಾತನದ ಪೂ. (ಡಾ.) ಮುಕುಲ ಗಾಡಗೀಳರವರು. ಕಡಿಮೆ ಅಹಂ ಇರುವ, ಸೂಕ್ಷ್ಮವನ್ನು ಅರಿಯುವ ಅಪಾರ ಕ್ಷಮತೆಯನ್ನು ಹೊಂದಿರುವ, ಸದಾ ಆನಂದ ಮತ್ತು ಉತ್ಸಾಹದಿಂದ ಸಾಧಕರಿಗೆ ಸಹಾಯ ಮಾಡಲು ಹಗಲು ರಾತ್ರಿ ಸಿದ್ಧರಾಗಿರುವ ಪೂ. (ಡಾ.) ಮುಕುಲ ಗಾಡಗೀಳ (೫೬ ವರ್ಷ) ಇವರು ಸನಾತನದ ಸಮಷ್ಟಿ ಸದ್ಗುರು ಪದವಿಯಲ್ಲಿ ವಿರಾಜಮಾನರಾಗಿರುವ ಆನಂದದ ವಾರ್ತೆಯನ್ನು ೩೧ ಮೇ ೨೦೨೦ ರಂದು ಆಶ್ರಮದ ಫಲಕದ ಮೂಲಕ ಸಾಧಕರಿಗೆ ತಿಳಿಸಲಾಯಿತು. ತದನಂತರ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ (ಸದ್ಗುರು (ಡಾ.) ಮುಕುಲ ಗಾಡಗೀಳ ಇವರ ಪತ್ನಿ) ಇವರು ಅವರನ್ನು ಭೇಟಿಯಾದರು. ಅವರು ಈ ಸಂದರ್ಭದಲ್ಲಿ ಪೂ. (ಡಾ.) ಮುಕುಲ ಗಾಡಗೀಳರು ಸದ್ಗುರು ಪದವಿಯಲ್ಲಿ ವಿರಾಜಮಾನರಾಗಿರುವ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ನೀಡಿರುವ ಸಂದೇಶವನ್ನು ತಿಳಿಸಿದರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರು ಸನಾತನ ಸಂಸ್ಥೆಯ ವತಿಯಿಂದ ಸದ್ಗುರು (ಡಾ.) ಮುಕುಲ ಗಾಡಗೀಳ ಇವರಿಗೆ ಪುಷ್ಪಹಾರವನ್ನು ಹಾಕಿ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನ ಮಾಡಿದರು.