ಲಾಕ್‌ಡೌನ್ ಅವಧಿಯಲ್ಲಿಯೂ ಈಶ್ವರನ ಕೃಪೆಯಿಂದ ಆಗುತ್ತಿರುವ ವಿಹಂಗಮ ‘ಆನ್‌ಲೈನ್ ಧರ್ಮಪ್ರಸಾರ !

ಕೊರೋನಾ ರೋಗಾಣುವಿನ ಹಾವಳಿಯಿಂದ ದೇಶಾದ್ಯಂತ ಮಾರ್ಚ್ ೨೪ ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಸಂಚಾರನಿಷೇಧದಿಂದ ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮನೆಮನೆಗೆ ತೆರಳಿ ಅಧ್ಯಾತ್ಮ ಮತ್ತು ಧರ್ಮಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸಬೇಕಾಯಿತು. ಹೀಗಿರುವಾಗಲೂ ಈಶ್ವರನ ಕೃಪೆಯಿಂದ ದೊಡ್ಡ ಪ್ರಮಾಣದಲ್ಲಿ ‘ಆನ್‌ಲೈನ್ ಧರ್ಮಪ್ರಸಾರದ ಕಾರ್ಯ ಮುಂದುವರಿದಿದ್ದು, ಅದರ ಆಲೇಖ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಫೇಸಬುಕ್, ಯೂ-ಟ್ಯೂಬ್, ವಾಟ್ಸ್‌ಅಪ್, ಟ್ವಿಟರ್ ಈ ಸಾಮಾಜಿಕ ಮಾಧ್ಯಮಗಳ ಮೂಲಕ  ನಾಮಜಪ ಸತ್ಸಂಗ, ಬಾಲಸಂಸ್ಕಾರವರ್ಗ, ಭಾವಸತ್ಸಂಗ, ಧರ್ಮಸಂವಾದ ಇತ್ಯಾದಿಗಳ ಮೂಲಕ ಅಧ್ಯಾತ್ಮ ಮತ್ತು ಧರ್ಮ ಪ್ರಸಾರದ ಕಾರ್ಯ ಮುಂದುವರಿದಿದೆ.  ಹಾಗೆಯೇ ಜಾಲತಾಣ ಮತ್ತು ಪಿ.ಡಿ.ಎಫ್.ಗಳ ಮೂಲಕ ಲಕ್ಷಾಂತರ ಜನರ ವರೆಗೆ ‘ಸನಾತನ ಪ್ರಭಾತ ನಿಯಕಾಲಿಕೆ ತಲುಪುತ್ತಿದೆ. ಈ ರೀತಿ ವಿವಿಧ ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಾಧನೆ, ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶನ ಸಿಗುತ್ತಿರುವುದರಿಂದ ಆಪತ್ಕಾಲದಲ್ಲಿಯೂ ಸಮಾಜದ ಮನೋಧೈರ್ಯ ಸ್ಥಿರವಾಗಿರುವುದರೊಂದಿಗೆ ಅದು ಹೆಚ್ಚಳವಾಗುತ್ತಿದೆ.

ವಿಶೇಷವೆಂದರೆ ಸಂಚಾರ ನಿರ್ಬಂಧದ ಬಳಿಕ ‘ಆನ್‌ಲೈನ್ ಮಾಧ್ಯಮದಿಂದ ನಡೆಯುತ್ತಿರುವ ಈ ಕಾರ್ಯ ಸಾಮಾನ್ಯ ಸ್ಥಿತಿಯಿರುವಾಗ ಆಗುವ ಕಾರ್ಯಕ್ಕಿಂತ ಅಧಿಕವಾಗಿದೆ. ಈಶ್ವರನ ಕೃಪೆಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿರುವ ಧರ್ಮಪ್ರಸಾರದ ಕಾರ್ಯದ ಎಪ್ರಿಲ್ ೨೦ ರಿಂದ ೩ ಮೇ  ೨೦೨೦ ಈ ೧೫ ದಿನಗಳ ವಿವರವನ್ನು ಮುಂದೆ ನೀಡಲಾಗಿದೆ.

೧. ಸಾಮಾಜಿಕ ಜಾಲತಾಣದ ವಿವರ

ಅ. ಫೇಸಬುಕ್ ಮತ್ತು ಯೂ-ಟ್ಯೂಬ್ ಮುಖಾಂತರ ಪ್ರಾರಂಭವಾಗಿರುವ ಸತ್ಸಂಗದ ಸರಾಸರಿ ವೀಕ್ಷಕರ ಸಂಖ್ಯೆ:

ಅ ೧. ಹಿಂದಿ ಭಾಷೆಯ ಸತ್ಸಂಗದ ವೀಕ್ಷಕರ ಸಂಖ್ಯೆ:

ಅ ೨. ಕನ್ನಡ ಭಾಷೆಯ ಸತ್ಸಂಗ : ಭಾವಸತ್ಸಂಗದ ೮ ಸಾವಿರ ೪೯೬, ಬಾಲಸಂಸ್ಕಾರವರ್ಗದ ೬ ಸಾವಿರ ೮೦೦ ಮತ್ತು ಧರ್ಮಸಂವಾದದ ೩ ಸಾವಿರ ೯೯೫ ವೀಕ್ಷಕರು ಪ್ರತಿದಿನ ಲಾಭ ಪಡೆದರು.

ಅ ೩. ತೆಲುಗು ಭಾಷೆಯ ಸತ್ಸಂಗ : ಪ್ರತಿದಿನ ೧ ಸಾವಿರದ ೬೭೧ ಸರಾಸರಿ ವೀಕ್ಷಕರಿದ್ದರು.

೨. ಜಿಜ್ಞಾಸು ಮತ್ತು ಧರ್ಮಪ್ರೇಮಿಗಳಿಗಾಗಿ ‘ಆನ್‌ಲೈನ್ ಶಿಬಿರಗಳ ಆಯೋಜನೆ

೩. ‘ಸನಾತನ ಪ್ರಭಾತ ನಿಯತಕಾಲಿಕೆಗಳ ವ್ಯಾಪಕ ಮಟ್ಟದಲ್ಲಿ ಪ್ರಸಾರ

ಸಂಚಾರ ನಿಷೇಧದಿಂದ ದಿನಪತ್ರಿಕೆಯ ನೇರ ವಿತರಣೆ ಸ್ಥಗಿತಗೊಂಡಿದೆ; ಆದರೆ ‘ಸನಾತನ ಪ್ರಭಾತದ ಓದುಗರಿಗೆ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಮತ್ತು ಸದ್ಯದ ಸ್ಥಿತಿಯ ವಿಷಯದಲ್ಲಿ ಮಾಹಿತಿ ಪ್ರತಿದಿನ ದೊರಕಬೇಕು, ಎಂದು ದೈನಿಕ ‘ಸನಾತನ ಪ್ರಭಾತದ ಪಿ.ಡಿ.ಎಫ್. ಕಳುಹಿಸಲಾಗುತ್ತದೆ, ಅಲ್ಲದೇ ಕನ್ನಡ ಭಾಷೆಯ ಸಾಪ್ತಾಹಿಕ, ಹಿಂದಿ ಮತ್ತು ಆಂಗ್ಲ ಭಾಷೆಯ ಪಾಕ್ಷಿಕಗಳನ್ನು ಕೂಡ ಪಿ.ಡಿ.ಎಫ್. ಕಳುಹಿಸಲಾಗುತ್ತದೆ. ವಾಚಕರಿಗಷ್ಟೇ ಸೀಮಿತಗೊಳಿಸುವ ವಿಚಾರವನ್ನು ಮಾಡದೇ ಸಮಾಜದ ಜಿಜ್ಞಾಸು, ಸಾಧಕರ ಸಂಬಂಧಿಕರು, ಪರಿಚಿತರು, ಧರ್ಮಪ್ರೇಮಿಗಳು, ಹಿತಚಿಂತಕರಿಗೂ ‘ಸನಾತನ ಪ್ರಭಾತ ದಿನಪತ್ರಿಕೆಯ ಪಿ.ಡಿ.ಎಫ್. ತಲುಪಿಸಲಾಗುತ್ತಿದೆ. ಇಲ್ಲಿಯವರೆಗೆ ಪ್ರತಿದಿನ ೭ ಲಕ್ಷ ಜನರವರೆಗೆ ಈ ಪಿ.ಡಿ.ಎಫ್. ತಲುಪುತ್ತಿದೆ.