ಮುಝಾಫ್ಫರಪುರ್ (ಬಿಹಾರ)ದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣದಲ್ಲಿ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ದೂರು ದಾಖಲು.

ಮುಝಾಫ್ಫರಪುರ್ (ಬಿಹಾರ) – ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ಅಖಿಲ ಭಾರತವರ್ಷಿಯ ಯಾದವ್ ಮಹಾಸಭಾ’ದ ಅಧ್ಯಕ್ಷ ಜವಾಹರಲಾಲ್ ರಾಯ ಇವರು ದೂರು ನೀಡಿದ್ದಾರೆ. ಮುಖ್ಯ ನ್ಯಾಯದಂಡಾಧಿಕಾರಿ ಮುಖೇಶ ಕುಮಾರ ಇವರೆದುರು ಆಲಿಕೆ ನಡೆಸಲಾಗುವುದು. ಈ ದೂರಿನಲ್ಲಿ ರಾಯ ಅವರು, ‘ನಾನು ಜೂನ್ ೫ ರಂದು ಫೇಸ್‌ಬುಕ್‌ನಲ್ಲಿ ಮೊರಾರಿ ಬಾಪು ಅವರ ಪ್ರವಚನದ ‘ವಿಡಿಯೋ’ ಒಂದನ್ನು ನೋಡಿದೆ. ಅದರಲ್ಲಿ ಬಾಪುರವರು ಶ್ರೀಕೃಷ್ಣನ ಮಕ್ಕಳು ಮತ್ತು ಮೊಮ್ಮಕ್ಕಳ ಚಾರಿತ್ರ್ಯದ ಬಗ್ಗೆ ಅಕ್ಷೇಪಾರ್ಹ ಕಥೆಗಳನ್ನು ಹೇಳುತ್ತಿದ್ದರು. ಆದ್ದರಿಂದ ನನ್ನ ಧಾರ್ಮಿಕ ಭಾವನೆಗೆ ನೋವಾಗಿದೆ’ ಎಂದು ಹೇಳಿದ್ದಾರೆ.