ಮುಂಬೈ: ಅಮೆರಿಕಾದ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಹತ್ಯೆಯ ಬಗ್ಗೆ ಮಾತನಾಡುವ ಭಾರತೀಯ ಚಲನಚಿತ್ರದ ನಟರು ಪಾಲಘರನಲ್ಲಿ ಆಗಿದ್ದ ಸಾಧುಗಳ ಹತ್ಯೆಯ ಬಗ್ಗೆ ಮಾತನಾಡಲಿಲ್ಲ ಎಂದು ನಟಿ ಕಂಗನಾ ರನೌತ್ ಟೀಕಿಸಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ‘ಕಪ್ಪು ವರ್ಣದವರ ಅಸ್ತಿತ್ವದ ಪ್ರಶ್ನೆ’ (‘ಬ್ಲ್ಯಾಕ್ ಲೀವ್ಸ್ ಮ್ಯಾಟರ್’) ಈ ಅಭಿಯಾನವನ್ನು ರನೌತ್ ಬೆಂಬಲಿಸಲಿಲ್ಲ.
ರನೌತ್ ಅವರು, ‘ಅನೇಕ ಜನರು ಯಾವುದೇ ಆಲೋಚನೆ ಮಾಡದೇ ಈ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ಹೆಚ್ಚಿನ ಚಲನಚಿತ್ರ ನಟರು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಆದರೂ ಮಹಾರಾಷ್ಟ್ರದ ಪಾಲಘರ್‌ನಲ್ಲಿ ಆದ ಸಾಧುಗಳ ಹತ್ಯೆಯ ಬಗ್ಗೆ ಅವರು ಏನೂ ಹೇಳಲಿಲ್ಲ. ಭಾರತದಲ್ಲಿ ಗುಲಾಮಗಿರಿಯ ಮನಸ್ಥಿತಿಯನ್ನು ಬೆಳೆಸಿಕೊಂಡಿರುವ ನಟ ನಟಿಯರು ವಿದೇಶಿ ನಟರನ್ನು ಅನುಕರಣೆ ಮಾಡುತ್ತಾರೆ, ಇದರಿಂದ ಅವರಿಗೆ ಕನಿಷ್ಠ ೨ ನಿಮಿಷಗಳ ಖ್ಯಾತಿ ಸಿಗುತ್ತದೆ. ಭಾರತದಲ್ಲಿ ಅನೇಕ ಜನರು ಪರಿಸರದಂತಹ ಅಂಶದ ಮೇಲೆ ಕೆಲಸ ಮಾಡುತ್ತಾರೆ. ಇದಕ್ಕಾಗಿ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿಯೂ ಸಿಕ್ಕಿದೆ. ಅವರ ಪರವಾಗಿ ಮಾತನಾಡುವ ಬದಲು, ಭಾರತೀಯ ಕಲಾವಿದರು ವಿದೇಶಿ ಬಿಳಿ ಯುವಕರನ್ನು ಬೆಂಬಲಿಸುವುದರಲ್ಲೇ ಧನ್ಯತೆ ಕಾಣುತ್ತಾರೆ; ಏಕೆಂದರೆ ಅವರಿಗೆ ಸಾಧು ಹಾಗೂ ಬುಡಕಟ್ಟು ಜನಾಂಗದವರನ್ನು ಬೆಂಬಲಿಸುವುದು ಆಕರ್ಷಕವಾಗಿ ಕಾಣಿಸುವುದಿಲ್ಲ.