ಉತ್ತರಪ್ರದೇಶದಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಯುವತಿಯೊಂದಿಗೆ ಮದುವೆಯಾದ ಮತಾಂಧನಿಂದ ಆಕೆಯ ಬರ್ಬರ ಹತ್ಯೆ

ಹಿಂದೂ ಯುವತಿಯ ತಲೆ ಮತ್ತು ಕೈಕಾಲುಗಳನ್ನು ಕತ್ತರಿಸಿ ಸರೋವರಕ್ಕೆ ಎಸೆದರು

  • ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಯುವತಿಯರನ್ನು ಮೋಸ ಮಾಡುವ ಹಾಗೂ ಅವರ ಹತ್ಯೆ ಮಾಡುವ ನರಾಧಮರಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕು !

  • ‘ಪ್ರೀತಿಗೆ ಧರ್ಮವು ಅಡ್ಡ ಬರುವುದಿಲ್ಲ್ಲ’ ಎಂದು ಹೇಳುವ ಜಾತ್ಯತೀತವಾದಿಗಳು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಹಿಂದೂ ಹುಡುಗಿಯರಿಗೆ ಮೋಸ ಮಾಡುವ ಮತ್ತು ಅವರ ಹತ್ಯೆ ಮಾಡುವ ಇಂತಹ ಮತಾಂಧರ ಬಗ್ಗೆ ಮಾತನಾಡುವುದಿಲ್ಲ, ಎಂಬುದನ್ನು ನೆನಪಿನಲ್ಲಿಡಿ !

  • ಲವ್ ಜಿಹಾದ್ ನಂತಹ ಘಟನೆಗಳಿಗೆ ಕಡಿವಾಣ ಹಾಕಲು ಸರಕಾರ ಕಠಿಣ ಕಾನೂನು ರೂಪಿಸಬೇಕು !

ಮೀರತ್ (ಉತ್ತರ ಪ್ರದೇಶ) – ದೌರಾಲಾದ ಲಾಹಿಯಾ ಗ್ರಾಮದಲ್ಲಿ ಶಕೀಬ್ ಎಂಬ ಮತಾಂಧನು ಏಕತಾ ಎಂಬ ಹಿಂದೂ ಯುವತಿಯೊಂದಿಗೆ ಮದುವೆಯಾದನು. ನಂತರ ಅವಳ ಕುಟುಂಬದ ಸಹಾಯದಿಂದ ತಂಪು ಪಾನೀಯದಲ್ಲಿ ಮೂರ್ಛೆಯ ಔಷಧಿಯನ್ನು ನೀಡಲಾಯಿತು. ಆಕೆ ಪ್ರಜ್ಞೆ ತಪ್ಪಿದಾಗ ಅವಳ ದೇಹವನ್ನು ತುಂಡರಿಸಲಾಯಿತು. ಮೃತದೇಹದ ಕೈ, ಕಾಲುಗಳು ಮತ್ತು ತಲೆಯನ್ನು ಸರೋವರಕ್ಕೆ ಎಸೆದರೆ, ಮುಂಡವನ್ನು ಕಾಡಿನಲ್ಲಿ ಎಸೆಯಲಾಯಿತು.

ಶಕೀಬ್ ಅಮನ್ ಎಂದು ಹಿಂದೂ ಹೆಸರು ಇಟ್ಟುಕೊಂಡು ಅವಳನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ತದನಂತರ ಏಕತಾ ೧೫ ಲಕ್ಷ ರೂಪಾಯಿ ಮತ್ತು ೧೫ ತೊಲೆ ಚಿನ್ನದೊಂದಿಗೆ ಮನೆಯಿಂದ ಓಡಿಹೋದಳು ಮತ್ತು ಆಕೆ ಶಕೀಬನನ್ನು ಮದುವೆಯಾದಳು. ಏಕತಾ ಬಳಿ ಇರುವ ಹಣಕ್ಕಾಗಿಯೇ ಶಕೀಬ್‌ನು ಕೊಂದಿದ್ದಾನೆ ಎಂದು ತೋರುತ್ತಿದೆ. ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ಪೊಲೀಸರ ಪ್ರಯತ್ನದ ನಂತರ ಒಂದು ವರ್ಷದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಕೆಲವು ಆರೋಗ್ಯ ಸಮಸ್ಯೆಗಳಿಗಾಗಿ ಏಕತಾಳು ತಾಂತ್ರಿಕ ಶಕೀಬ್ ಬಳಿ ಹೋಗಿದ್ದಳು. ಆಗ ಶಕೀಬ್ ತನ್ನ ಹೆಸರು ‘ಅಮನ್’ ಎಂದು ಹೇಳಿ ಆಕೆಗೆ ಪ್ರೀತಿಯ ಬಲೆಯಲ್ಲಿ ಎಳೆದನು. ಏಕತಾಳನ್ನು ಹತ್ಯೆ ಮಾಡಿದ ನಂತರ, ಶಕೀಬ್ ಆಕೆಯ ಸಂಚಾರವಾಣಿಯನ್ನು ಬಳಸುತ್ತಿದ್ದ. ಆತ ಏಕತಾಳ ಹೆಸರಿನಲ್ಲಿ ವಾಟ್ಸ್‌ಆಪ್ ಮೂಲಕ ಆಕೆಯ ಕುಟುಂಬಕ್ಕೆ ಸಂದೇಶಗಳನ್ನು ಕಳುಹಿಸುತ್ತಿದ್ದ. ಅದೇರೀತಿ ಆಕೆಯ ಕುಟುಂಬ ಸದಸ್ಯರು ಫೇಸ್‌ಬುಕ್‌ನಲ್ಲಿ ಕೆಲವು ಸಂದೇಶಗಳನ್ನು ಪೋಸ್ಟ್ ಮಾಡಿದರೆ ಶಕೀಬ್ ಅದಕ್ಕೂ ಉತ್ತರಿಸುತ್ತಿದ್ದ. ಆದ್ದರಿಂದ ಕುಟುಂಬದವರಿಗೆ ಏಕತಾಳು ಇನ್ನೂ ಬದುಕಿದ್ದಾಳೆ ಎಂದೇ ತಿಳಿದಿದ್ದರು. ೨೦ ಮೇ ೨೦೨೦ ರಂದು ಪೊಲೀಸರು ಏಕತಾಳ ಕುಟುಂಬವನ್ನು ಸಂಪರ್ಕಿಸಿದಾಗ ಸತ್ಯ ಹೊರಬಿದ್ದಿದೆ.