-
ಭಾರತೀಯ ಸೇನೆಯಿಂದ ಭಯೋತ್ಪಾದಕರ ೩ ‘ಲಾಂಚ್ ಪ್ಯಾಡ್’ ಧ್ವಂಸ
-
೬ ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರಿಗೆ ಗಾಯ
ಮೆಂಢರ್ (ಜಮ್ಮು – ಕಾಶ್ಮೀರ) – ಮೆಂಢರ್ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಸೈನಿಕರು ನುಸುಳುತ್ತಿದ್ದ ೧೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ, ಎಂದು ‘ಅಮರ್ ಉಜಲಾ’ ದಿನಪತ್ರಿಕೆ ವರದಿ ಮಾಡಿದೆ. ಮೆಂಢರ ಸೆಕ್ಟರಿನ ಗಡಿಯಾಚೆಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಖಿಯಾಲ್ ಪ್ರದೇಶದಲ್ಲಿ ಭಯೋತ್ಪಾದಕರ ೩ ‘ಲಾಂಚಿಂಗ್ ಪ್ಯಾಡ್’(ತರಬೇತಿ ಪಡೆದ ಭಯೋತ್ಪಾದಕರನ್ನು ನುಸುಳಲು ಗಡಿಯ ಹತ್ತಿರ ತಾಣದಲ್ಲಿ ಒಟ್ಟಿಗೆ ಸೇರಿಸುತ್ತಾರೆ ಆ ಸ್ಥಳವನ್ನು ‘ಲಾಂಚಿಂಗ್ ಪ್ಯಾಡ್’ ಎಂದು ಹೇಳುತ್ತಾರೆ)ಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಈ ಘಟನೆಯಲ್ಲಿ ೬ ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ. ಹತ್ಯೆಗೀಡಾದ ಉಗ್ರರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲಭ್ಯವಾಗಿದೆ.
ಇಲ್ಲಿ ಹಲವಾರು ದಿನಗಳಿಂದ ಪಾಕ್‌ನಿಂದ ಕದನವಿರಾಮವನ್ನು ಉಲ್ಲಂಘಿಸಿ ಗುಂಡು ಹಾರಾಟ ಮಾಡಲಾಗುತ್ತಿತ್ತು. ಭಯೋತ್ಪಾದಕರನ್ನು ಒಳನುಸುಳಲೆಂದು ಪಾಕಿಸ್ತಾನವು ಈ ಪ್ರಯತ್ನವನ್ನು ಮಾಡುತ್ತಿತ್ತು. ಅದಕ್ಕೆ ಭಾರತೀಯ ಸೇನೆಯು ನೀಡಿದ ಪ್ರತ್ಯುತ್ತರದಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದ ಪ್ರದೇಶವನ್ನೇ ಧ್ವಂಸ ಮಾಡಿದೆ.