ಪಾಕ್ ನೌಕರರ ಬಳಿ ಸಿಕ್ಕಿತು ಆಧಾರಕಾರ್ಡ್
ಭಾರತೀಯ ಸೈನ್ಯಾಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಮಾಹಿತಿಯನ್ನು ಪಡೆಯುವ ಪ್ರಯತ್ನ
- ಬೇಹುಗಾರಿಕೆಯ ತಾಣವಾಗಿರುವ ಭಾರತದಲ್ಲಿಯ ಪಾಕ್ ನ ರಾಯಬಾರಿ ಕಛೇರಿ ! ಪಾಕ್‌ನಿಂದ ಆಗುತ್ತಿರುವ ಇಂತಹ ಬೇಹುಗಾರಿಕೆಯಿಂದಾಗಿ ಭಾರತವು ಪಾಕ್‌ನೊಂದಿಗಿನ ಎಲ್ಲಾ ರಾಜಕೀಯ ಸಂಬಂಧಗಳನ್ನು ಕಡಿತಗೊಳಿಸುವುದು ಅಗತ್ಯ !
- ಪಾಕ್‌ನ ಅಧಿಕಾರಿಗಳ ಬಳಿ ಆಧಾರ್‌ಕಾರ್ಡ್ ಹೇಗೆ ಸಿಗುತ್ತದೆ ? ಇದಕ್ಕೆ ಕಾರಣ ಭಾರತೀಯ ಆಡಳಿತವು ದೇಶದ್ರೋಹಿಗಳಿಂದ ತುಂಬಿದೆ. ಆದ್ದರಿಂದ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು !
ನವ ದೆಹಲಿ: ಇಲ್ಲಿಯ ಪಾಕಿಸ್ತಾನಿ ರಾಯಬಾರಿ ಕಛೇರಿಯ ಇಬ್ಬರು ಪಾಕಿಸ್ತಾನಿ ನೌಕರರನ್ನು ಬೇಹುಗಾರಿಕೆಯ ಪ್ರಕರಣದಲ್ಲಿ ದೆಹಲಿಯ ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಅಬಿದ್ ಹುಸೇನ್ (ವಯಸ್ಸು ೪೨ ವರ್ಷ) ಮತ್ತು ತಾಹಿರ್ ಖಾನ್ (ವಯಸ್ಸು ೪೪) ಮತ್ತು ಅವರ ಚಾಲಕ ಜಾವೇದ್ ಹುಸೇನ್‌ನನ್ನೂ ಬಂಧಿಸಲಾಗಿದೆ. ಅಬಿದ್ ಮತ್ತು ತಾಹಿರ್ ಇಬ್ಬರೂ ಪಾಕನ ಗೂಢಾಚಾರ ಸಂಸ್ಥೆ ಐ.ಎಸ್.ಐಯ ಅಧಿಕಾರಿಗಳಾಗಿದ್ದಾರೆ. ಅವರು ಐಎಸ್‌ಐ ಜೊತೆ ನೇರ ಸಂಪರ್ಕದಲ್ಲಿದ್ದರು. ರಾಜತಾಂತ್ರಿಕ ರಾಯಭಾರಿ ಕಚೇರಿಯೊಂದಿಗೆ ಸಂಬಂಧ ಹೊಂದಿದ್ದರೂ ಆ ಹುದ್ದೆಗೆ ಶೋಭಿಸದ ಹಾಗೂ ದುಷ್ಕೃತ್ಯ ಎಸಗಿದ ಪ್ರಕರಣದಲ್ಲಿ ಅವರಿಗೆ ೨೪ ಗಂಟೆಯೊಳಗೆ ದೇಶವನ್ನು ತೊರೆಯುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಆದೇಶಿಸಿದೆ.
೧. ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಕೃತಿ ಮಾಡಿದ್ದರಿಂದ ಭಾರತವು ಇದರ ಬಗ್ಗೆ ಪಾಕಿಸ್ತಾನವನ್ನು ಖಂಡಿಸಿದೆ. ಈ ಪ್ರಕರಣದ ಬಗ್ಗೆ ಅಫಿಶಿಯಲ್ ಸೀಕ್ರೇಟ್ ಕಾಯ್ದೆಯಡಿ ಈ ಪ್ರಕರಣವನ್ನೂ ದಾಖಲಿಸಲಾಗಿದೆ. ಎಂದಿನಂತೆ ಗೂಢಾಚಾರದ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ರಾಜತಾಂತ್ರಿಕ ಅಧಿಕಾರಿಗಳನ್ನು ಗಡಿಪಾರು ಮಾಡುವುದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನವು ಹೇಳಿದೆ. (ಸ್ವತಃ ಎಲ್ಲಾ ಒಪ್ಪಂದಗಳನ್ನು ಉಲ್ಲಂಘಿಸುವುದು ಮತ್ತು ಭಾರತಕ್ಕೆ ಮಾತ್ರ ಒಪ್ಪಂದಗಳನ್ನು ನೆನಪಿಸುವುದು, ಇದು ಆಚಾರ ಹೇಳುವುದು ಮತ್ತು ಬದನೆಕಾಯಿ ತಿನ್ನುವುದು ಆಗಿದೆ ! – ಸಂಪಾದಕರು)
೨. ಅಬಿದ್ ಮತ್ತು ತಾಹಿರ್ ಖಾನ್ ಅವರು ಸುಳ್ಳು ಆಧಾರ್ ಕಾರ್ಡ್ ಇಟ್ಟುಕೊಂಡು ಭಾರತದಲ್ಲಿ ಬಹಿರಂಗವಾಗಿ ಪ್ರಯಾಣಿಸುತ್ತಿದ್ದರು. ಅವರು ತಮ್ಮನ್ನು ಉದ್ಯಮಿ ಎಂದು ಹೇಳಿಕೊಳ್ಳುತ್ತ ಭಾರತೀಯ ಸೈನ್ಯಾಧಿಕಾರಿಗಳನ್ನು ಭೇಟಿ ಮಾಡಿ ಈ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿಯೇ ಇಬ್ಬರನ್ನು ‘ಮಿಲಿಟರಿ ಇಂಟಲಿಜೆನ್ಸ್’ನಿಂದ ನಿಗಾ ಇಡಲಾಗಿತ್ತು. ಇವರಿಬ್ಬರು ಹೆಚ್ಚು ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲು ಸೇನಾಧಿಕಾರಿಯನ್ನು ಭೇಟಿ ಮಾಡಲು ಹೋಗಿದ್ದರು. ಇದೇ ಸಮಯದಲ್ಲಿ ಅವರನ್ನು ಬಂಧಿಸಲಾಯಿತು.