ಶ್ರೀರಾಮನನ್ನು ಕಾಲ್ಪನಿಕವೆಂದು ಘೋಷಿಸಿದ ಕಾಂಗ್ರೆಸ್ಸಿನ ಕಣ್ಣು ಈಗ ಹಿಂದೂ ದೇವಸ್ಥಾನಗಳಲ್ಲಿನ ಬಂಗಾರದ ಮೇಲೆ ?

ಶ್ರೀ. ರಮೇಶ ಶಿಂದೆ

ಕಾಂಗ್ರೆಸ್ ನಾಯಕರು ೭೦ ವರ್ಷಗಳಲ್ಲಿ ವಿವಿಧ ಹಗರಣಗಳಿಂದ ಜನರ ಕೊಳ್ಳೆ ಹೊಡೆದ ೪ ಲಕ್ಷ ೮೨ ಸಾವಿರ ಕೋಟಿ ರೂಪಾಯಿಯ ಲೆಕ್ಕಾಚಾರವನ್ನು ನೀಡಬೇಕು ! – ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳ ದೇವಸ್ಥಾನಗಳಲ್ಲಿನ ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಕಪಟತನದ ಕರೆ ನೀಡಿದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ್‌ರ ಕಾಂಗ್ರೆಸ್ ಪಕ್ಷ ಭಾರತವನ್ನು ಜಾತ್ಯತೀತ ಎಂದು ಘೋಷಿಸಿ ಅಲ್ಪಸಂಖ್ಯಾತರಿಗಾಗಿ ಯೋಜನೆ ಹಾಗೂ ಹಜ್ ಯಾತ್ರೆ, ಇಫ್ತಾರ, ಮೌಲ್ವಿಗಳ ವೇತನಗಳ ಮೇಲೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ, ಆದರೆ ಯಾವುದೇ ದೇವಸ್ಥಾನಕ್ಕೆ ಒಂದೇ ಒಂದು ರೂಪಾಯಿಯನ್ನು ನೀಡಿಲ್ಲ, ಅದೇರೀತಿ ಪ್ರಭು ಶ್ರೀರಾಮನು ಕಾಲ್ಪನಿಕನಾಗಿದ್ದಾನೆ ಎಂದು ಪ್ರಮಾಣಪತ್ರವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ; ರಾಮಸೇತುವೆ ಹೆಸರಿನದ್ದು ಏನೂ ಅಸ್ತಿತ್ವದಲ್ಲಿ ಇಲ್ಲ, ಎಂದು ಹೇಳಿ ರಾಮಸೇತುವೆ ಒಡೆಯುವ ಸಂಚನ್ನು ಮಾಡಿತ್ತು, ಆ ಹಿಂದೂವಿರೋಧಿ ಕಾಂಗ್ರೆಸ್ಸಿಗೆ ಹಿಂದೂ ದೇವಸ್ಥಾನದಿಂದ ಯಾವುದೇ ಕೊಡು-ಕೊಳ್ಳುವ ಲೆಕ್ಕಾಚಾರ ಇರದೇ ಕೇವಲ ದೇವಸ್ಥಾನದ ಹಣ ಮತ್ತು ಬಂಗಾರದ ಮೇಲೆ ಅದರ ಕಣ್ಣಿಟ್ಟಿದೆ. ಕಳೆದ ೭೦ ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ಸಿನ ಅಧಿಕಾರ ಇರುವಾಗ ಬೋಫೂರ್ಸ್, ಅಗಸ್ಟಾ ವೆಸ್ಟಲ್ಯಾಂಡ್, ೨-ಜಿ, ಕಾಮನವೆಲ್ತ ಕ್ರೀಡಾಕೂಟ, ಹೀಗೆ ಅನೇಕ ಹಗರಣಗಳಲ್ಲಿ ಜನರ ೪ ಲಕ್ಷ ೮೨ ಸಾವಿರ ಕೋಟಿ ರೂಪಾಯಿಗಳನ್ನು ಲೂಟಿಗೈದಿರುವುದನ್ನು ಅಂಕಿ-ಅಂಶಗಳು ಹೇಳುತ್ತವೆ. ಈ ಭ್ರಷ್ಟಾಚಾರದ, ಕಪ್ಪು ಹಣದ ತನಿಖೆ ನಡೆಯಬೇಕು, ಎಂದು ಏಕೆ ಆಗ್ರಹಿಸುವುದಿಲ್ಲ ? ಕಾಂಗ್ರೆಸ್ಸಿನ ನಾಯಕರು ದೇವಸ್ಥಾನದ ಬಂಗಾರವನ್ನು ತೆಗೆದುಕೊಳ್ಳುವ ಮೊದಲು ಜನರ ಲೂಟಿಗೈದ ಹಣವನ್ನು ಮರಳಿ ಕೊಡಬೇಕು. ಹಿಂದೂಗಳ ದೇವಸ್ಥಾನದ ಬಂಗಾರವನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಲ್ಲಿ ಅದಕ್ಕೆ ತೀವ್ರವಾಗಿ ವಿರೋಧಿಸಲಾಗುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಕೆ ನೀಡಿದೆ. ಇಂದು ಭಾರತದಲ್ಲಿ ರಕ್ಷಣೆ ಹಾಗೂ ರೈಲ್ವೆ ಸಚಿವಾಯಲದ ನಂತರ ಅತೀ ಹೆಚ್ಚು ಭೂಮಿಯ ಒಡೆತನ ಚರ್ಚ್ ಸಂಸ್ಥೆಗಳ ಬಳಿಯಿದೆ. ತದನಂತರ ೭ ಲಕ್ಷ ಎಕರೆ ಭೂಮಿಯ ಒಡೆತನ ವಕ್ಫ್ ಬೋರ್ಡ ಬಳಿ ಇದೆ. ಅಜ್ಮೇರ್ ದರ್ಗಾ ಮತ್ತು ನಿಜಾಮುದ್ದೀನ್ ದರ್ಗಾಗಳಿಗೆ ಕೋಟಿಗಟ್ಟಲೆ ನಿಧಿ ಸಂಗ್ರಹವಾಗುತ್ತದೆ. ಕಾಂಗ್ರೆಸ್ ನಾಯಕರು ಇವರ ಭೂಮಿಯನ್ನು ವಶಕ್ಕೆ ಪಡೆಯಲು ಆಗ್ರಹಿಸುವರೇ ? ಇಂದು ‘ಎಫ್.ಸಿ.ಆರ್.ಎ.’ಯ ಮಾಧ್ಯಮದಿಂದ ವಿದೇಶದಿಂದ ಸಾವಿರಾರು ಕೋಟಿ ರೂಪಾಯಿಯ ಹಣವು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಬರುತ್ತಿವೆ. ನಾವು ಎಪ್ರಿಲ್ ತಿಂಗಳಲ್ಲಿ ಸರಕಾರಕ್ಕೆ ಪತ್ರವನ್ನು ಕಳುಹಿಸಿ ಈ ಎಲ್ಲ ಹಣವನ್ನು ಕೊರೋನಾ ವಿಪತ್ತು ವಿರುದ್ಧ ಹೋರಾಡಲು ಉಪಯೋಗಿಸುವಂತೆ ವಿನಂತಿಸಿದ್ದೇವು. ಇಂದು ದೇಶವು ಭೀಕರ ಪರಿಸ್ಥಿತಿಯಲ್ಲಿ ಇರುವಾಗ ನಮ್ಮ ದೇವಸ್ಥಾನವು ಎಲ್ಲಕ್ಕಿಂತ ಹೆಚ್ಚು ಕಾರ್ಯವನ್ನು ಮಾಡಿದೆ. ಕೊರೋನಾದೊಂದಿಗೆ ಹೋರಾಡಲು ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣವನ್ನು ದೇವಸ್ಥಾನವು ನೀಡಿದೆ. ಅದೇರೀತಿ ದೇವಸ್ಥಾನದಲ್ಲಿ ಭಕ್ತರು ಬರುವುದನ್ನು ನಿಲ್ಲಿಸಿದಾಗಲೂ ಲಕ್ಷಗಟ್ಟಲೆ ಜನರಿಗಾಗಿ ಉಚಿತ ಅನ್ನದಾನ ಮಾಡುತ್ತಿದೆ. ಇವೆಲ್ಲವು ದೇವಸ್ಥಾನಗಳಿಂದ ನಡೆಯುತ್ತಿರುವಾಗ ಚರ್ಚ್ ಹಾಗೂ ಮಸೀದಿಯವರಿಗೆ ಏನೂ ಹೇಳದೇ, ಹಿಂದೂಗಳ ದೇವಸ್ಥಾನದ ಬಂಗಾರದ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ತನ್ನ ಹಿಂದೂ ವಿರೋಧವನ್ನು ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ಗೆ ನಾವು ಎಚ್ಚರಿಸುವುದೇನೆಂದರೆ, ಒಂದುವೇಳೆ ದೇವಸ್ಥಾನದ ಹಣ ಅಥವಾ ಬಂಗಾರವನ್ನು ತೆಗೆದುಕೊಳ್ಳಲು ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೆ, ಅದಕ್ಕೆ ತೀವ್ರವಾಗಿ ವಿರೋಧಿಸಲಾಗುವುದು.