
ಮೆಲ್ಬರ್ನ್ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಟ್ರಕ್ ಚಾಲಕರು ನಿರಂತರವಾಗಿ ವರ್ಣದ್ವೇಷಿ ನಿಂದೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್ನಲ್ಲಿ ‘ಕ್ರಿಯೇಟರ್ ಗೀ’ ಎಂಬ ಖಾತೆಯಿಂದ ಒಂದು ಆಡಿಯೋ ಪ್ರಸಾರವಾಗಿದ್ದು, ಅದರಲ್ಲಿ ಆಸ್ಟ್ರೇಲಿಯಾದ ಟ್ರಕ್ ಚಾಲಕರು ಭಾರತೀಯರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಮತ್ತು ಹಿಂಸಾತ್ಮಕ ಭಾಷೆಯಲ್ಲಿ ಮಾತನಾಡುವುದು ಕೇಳಿಬರುತ್ತಿದೆ.
1. ಭಾರತೀಯರನ್ನು ಕೊಲ್ಲುವ ಬೆದರಿಕೆ!
ಈ ಆಡಿಯೋದಲ್ಲಿ ಒಬ್ಬ ವ್ಯಕ್ತಿಯು ಬಹಿರಂಗವಾಗಿ ಭಾರತೀಯರನ್ನು ಕೊಂದು ಹಾಕಿ ಎಂದು ಹೇಳಿದ್ದಾನೆ. ಬಿಳಿಯರ ಪರವಾಗಿ ನಿಲ್ಲಿ. ಅಂತರ್ಯುದ್ಧ (ಸಿವಿಲ್ ವಾರ್) ಬರಲಿದೆ. ನಾವು ಎಲ್ಲಾ ಭಾರತೀಯ ಪುರುಷರನ್ನು ಕೊಲ್ಲುತ್ತೇವೆ, ಅವರ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುತ್ತೇವೆ ಮತ್ತು ಮಹಿಳೆಯರನ್ನು ಗುಲಾಮರನ್ನಾಗಿ ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾನೆ.
2. ಅನೇಕ ಭಾರತೀಯ ಚಾಲಕರು ತಿಳಿಸಿದಂತೆ, ವೈರ್ಲೆಸ್ ಸಂವಹನ ವ್ಯವಸ್ಥೆಯ ಮೂಲಕ ಪಂಜಾಬಿ ಅಥವಾ ಭಾರತೀಯ ಶೈಲಿಯಲ್ಲಿ ಮಾತನಾಡಿದರೆ ಅವರು ತೀವ್ರ ನಿಂದನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಬ್ಬ ಚಾಲಕ ಹೇಳಿದಂತೆ, ಆಸ್ಟ್ರೇಲಿಯಾದ ಉಚ್ಚಾರಣೆ ಇಲ್ಲದಿದ್ದರೆ ಮತ್ತು ಭಾರತೀಯ ಭಾಷೆ ಕೇಳಿದರೆ, ಬೈಗುಳಗಳು ಶುರುವಾಗುತ್ತವೆ. ಈ ನಿರಂತರ ಮಾನಸಿಕ ಕಿರುಕುಳದಿಂದಾಗಿ ಅನೇಕ ಭಾರತೀಯ ಚಾಲಕರು ಈ ವ್ಯವಸ್ಥೆಯನ್ನು ಬಳಸುವುದನ್ನೇ ನಿಲ್ಲಿಸಿದ್ದಾರೆ.
3. ದಕ್ಷಿಣ ಆಸ್ಟ್ರೇಲಿಯಾದ ಒಂದು ಪೆಟ್ರೋಲ್ ಪಂಪ್ನಲ್ಲಿ ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದ ಭಾರತೀಯ ದಂಪತಿಗೆ ಒಬ್ಬ ವ್ಯಕ್ತಿ ‘ಇಲ್ಲಿ ಇಂಗ್ಲಿಷ್ ಮಾತನಾಡಿ’ ಎಂದು ಹೇಳಿ ನಿಂದಿಸಿದ್ದಾನೆ. ನಂತರ ಆತ ಭಾರತೀಯ ಚಾಲಕನ ಮೇಲೆ ಉಗುಳಿದ್ದಾನೆ. ಸಂತ್ರಸ್ತ ವ್ಯಕ್ತಿಯು ಈ ಘಟನೆಯನ್ನು ತನ್ನ ಜೀವನದ ಅತ್ಯಂತ ಅವಮಾನಕರ ಘಟನೆ ಎಂದು ಕರೆದಿದ್ದಾನೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’