ಅಲಂಕಾರ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು
(ಕೂಪ್ ಎಂದರೆ ಇಬ್ಬರು ಪ್ರಯಾಣಿಕರಿಗೆ ಇರುವ ಪ್ರತ್ಯೇಕ ಮುಚ್ಚಿದ ಕೊಠಡಿ)
ಜಾಲನಾ – ನವ ವಿವಾಹಿತ ದಂಪತಿಯ ಮಧುಚಂದ್ರಕ್ಕಾಗಿ ನಂದಿಗ್ರಾಮ್ ಎಕ್ಸ್‌ಪ್ರೆಸ್ ನ ಪ್ರಥಮ ದರ್ಜೆ ಕೂಪ್ ಅನ್ನು ಅಲಂಕರಿಸಿದ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಟಿಕೆಟ್ ಪರೀಕ್ಷಕನನ್ನು (ಟಿ.ಸಿ.) ತಕ್ಷಣ ಅಮಾನತುಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ೬, ೨೦೨೬ ರಂದು ನವ ವಿವಾಹಿತ ದಂಪತಿ ರೈಲು ಸಂಖ್ಯೆ ೧೧೦೦೨ ನಂದಿಗ್ರಾಮ್ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ದಂಪತಿ ಓರ್ವ ಖಾಸಗಿ ಡೆಕೋರೇಟರ್ ಗೆ (ಅಲಂಕಾರಗಾರರಿಗೆ) ಅಲಂಕಾರ ಮಾಡಲು ‘ಆನ್ ಲೈನ್ ಆರ್ಡರ್’ ನೀಡಿದ್ದರು. ಈ ರೈಲು ಜಾಲನಾ ನಿಲ್ದಾಣಕ್ಕೆ ಬಂದಾಗ, ಸದರಿ ಅಲಂಕಾರಗಾರನು ರೈಲಿನೊಳಗೆ ಬಂದು ಈ ಕೂಪ್ ಅನ್ನು ಅಲಂಕರಿಸಿದ್ದಾನೆ. ರೈಲಿನ ಇಡೀ ಬೋಗಿಯನ್ನೇ ಪಂಚತಾರಾ ಹೋಟೆಲ್ ನಂತೆ ಅಲಂಕರಿಸಿದ್ದನು. ಬೋಗಿಯಲ್ಲಿ ರಂಗುರಂಗಿನ ಬಲೂನ್‌ಗಳು, ಸುಗಂಧಿತ ಹೂವುಗಳು, ಗುಲಾಬಿ ದಳಗಳು, ‘ಎಲ್ ಇಡಿ ಫೇರಿ ಲೈಟ್ಸ್’ ಮತ್ತು ಕೆಂಪು ಬಣ್ಣದ ಪರದೆಗಳನ್ನು ಹಾಕಲಾಗಿತ್ತು. ಅಲ್ಲದೇ ದಂಪತಿಯ ಆಸನದ ಬಳಿ ಪ್ರೇಮ ಸಂದೇಶವನ್ನೂ ಬರೆಯಲಾಗಿತ್ತು. ಅವರ ಆಸನ ಸೇರಿದಂತೆ ಬೋಗಿಯ ಇಡೀ ನೆಲವನ್ನು ಗುಲಾಬಿ ದಳಗಳಿಂದ ಅಲಂಕರಿಸಲಾಗಿತ್ತು.
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಅಲಂಕಾರಗಾರನಿಗೆ ರೈಲಿನೊಳಗೆ ಪ್ರವೇಶಿಸಲು ಬಿಟ್ಟಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಆತನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದರಿ ಟಿಕೆಟ್ ಪರೀಕ್ಷಕನು ಆ ಅಲಂಕಾರಗಾರನನ್ನು ರೈಲು ಹತ್ತದಂತೆ ತಡೆಯಬೇಕಿತ್ತು. ಈ ಘಟನೆಯು ರೈಲ್ವೆ ಸುರಕ್ಷತೆಯಲ್ಲಿ ನಡೆದ ದೊಡ್ಡ ಲೋಪವಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!