ಪಾಕಿಸ್ತಾನದ ಸರಕು ಸಾಗಣೆ ವಿಮಾನ ಅರಬ್ಬಿ ಸಮುದ್ರದಲ್ಲಿ ನಾಪತ್ತೆ! : Pakistan Plane Missing

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ‘ಕೆ-೨ ಏರ್‌ವೇಸ್’ ಸಂಸ್ಥೆಗೆ ಸೇರಿದ ಬೋಯಿಂಗ್ ೭೩೭ ಸರಕು ಸಾಗಣೆ ವಿಮಾನವು ಹಾರಾಟದ ವೇಳೆಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ೨೭ ವರ್ಷ ಹಳೆಯದಾದ ಈ ವಿಮಾನವು ಶಾರ್ಜಾದಿಂದ ಕರಾಚಿಗೆ ಹೋಗುತ್ತಿತ್ತು. ಇದರಲ್ಲಿ ೫ ಸಿಬ್ಬಂದಿ ಇದ್ದರು. ಈ ವಿಮಾನವು ಕರಾಚಿಯಲ್ಲಿ ಇಳಿಯಬೇಕಿತ್ತು; ಆದರೆ ಅದಕ್ಕೂ ಮುನ್ನವೇ ಸಂಪರ್ಕ ವ್ಯವಸ್ಥೆಯಲ್ಲಿ ದೋಷ ಉಂಟಾಗಿರುವ ಮಾಹಿತಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಿಕ್ಕಿತು. ಆ ನಂತರ ಈ ವಿಮಾನವು ರೇಡಾರ್‌ನಿಂದ ಕಣ್ಮರೆಯಾಯಿತು ಮತ್ತು ನಿಯಂತ್ರಣ ಕೊಠಡಿಯೊಂದಿಗಿನ ಅದರ ಸಂಪರ್ಕವು ಕಡಿತಗೊಂಡಿತು.

ಈ ಸರಕು ಸಾಗಣೆ ವಿಮಾನವು ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಪತನಗೊಂಡಿರಬಹುದು ಎಂದು ಅಂದಾಜಿಸಲಾಗಿದೆ; ಏಕೆಂದರೆ ಅದರ ಹಾರಾಟದ ಎತ್ತರದಲ್ಲಿ ಭಾರಿ ಏರಿಳಿತಗಳು ಕಂಡುಬಂದಿದ್ದವು ಮತ್ತು ಕೊನೆಯಲ್ಲಿ ಅದು ತೀವ್ರ ವೇಗವಾಗಿ ಕೆಳಗೆ ಬಂದಿತ್ತು.